ಕರ್ನಾಟಕ

happy birthday man ಅಂದ್ರು ಕರೆದುಕೊಂಡು ಹೋದ್ರು…!!?

ಮಹಾಂತೇಶ ಇರಳಿ
ಬೆಳಗಾವಿ: ಬೆಳಗಾವಿ ಹಿಂಡಲಗಾ ಜೈಲಿನ ಇತಿಹಾಸದಲ್ಲಿ ಮಾಜಿ ಮಂತ್ರಿ ವಿನಯ ಕುಲಕರ್ಣಿ ಒಂದು ರಾತ್ರಿಯನ್ನ ಜೈಲಿನಲ್ಲಿ ಕಳೆದಿದ್ದಾರೆ. ಅದು ವಿನಯ ಕುಲಕರ್ಣಿ ತಮ್ಮ ಜನು ದಿನದ ರಾತ್ರಿಯನ್ನ ಹಿಂಡಲಗಾ ಜೈಲಿನಲ್ಲಿ ಕಳೆದ್ರೆ. ಬೆಳಗಾಗುತ್ತಿದ್ದಂತೆ happy birthday man ಅಂತಾ ಸಿಬಿಐ ಪೊಲೀಸರು ಹೇಳಿ, ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಯಸ್… ಧಾರವಾಡದ ಜಿಪಂ ಸದಸ್ಯ ಯೋಗೇಶಗೌಡ ಕೊಲೆ ಕೇಸನಲ್ಲಿ ವಶಕ್ಕೆ ಪಡೆದಿದ್ದ ಸಿಬಿಐ ಪೊಲೀಸರು, ಮೊನ್ನೆ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ಧಾರವಾಡದ ನ್ಯಾಯಾಲಯವೂ ಒಂದು ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಅದರಂತೆ ವಿನಯ ಕುಲಕರ್ಣಿಯನ್ನ ಬೆಳಗಾವಿ ಹಿಂಡಲಗಾ ಜೈಲಿಗೆ ರವಾನಿಸಲಾಗಿತ್ತು. ಅದರಂತೆ ಎರಡು ರಾತ್ರಿಯನ್ನ ಹಿಂಡಲಗಾ ಜೈಲಿನಲ್ಲಿದ್ದ ವಿನಯ ಕುಲಕರ್ಣಿಯನ್ನ ಇವತ್ತು ಸಿಬಿಐ ತಂಡ ಮತ್ತೆ ನ್ಯಾಯಾಲಯದ ಆದೇಶದಂತೆ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಂಡಿದೆ. ಬೆಳಗ್ಗೆ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬೀಗಿ ಭದ್ರತೆಯಲ್ಲಿ ಸಿಬಿಐ ಅಧಿಕಾರಿಗಳು ವಿನಯ ಕುಲಕರ್ಣಿಯನ್ನ ಧಾರವಾಡ ಜಿಲ್ಲೆಗೆ ಕರೆದುಕೊಂಡು ಹೋಗಿದ್ದಾರೆ. ಮೂರು ದಿನಗಳ ತೀವ್ರ ವಿಚಾರಣೆಗೆ ಸಿಬಿಐ ಅಧಿಕಾರಿಗಳು ಒಳಪಡಿಸಲಿದ್ದಾರೆ.
ಇನ್ನು ರಾಯಲ್ ಲೈಫ್ ಲೀಡ್ ಮಾಡುತ್ತಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಜೈಲಿನಲ್ಲಿ ಸಾಮಾನ್ಯ ಕೈದಿಯಂತೆ ಎರಡು ರಾತ್ರಿ ಕಳೆದಿದ್ದಾರೆ. ಜೈಲಿನ ಉಪಹಾರ, ಊಟವನ್ನ ವಿನಯ ಕುಲಕರ್ಣಿ ಸೇವಿಸಿದ್ದಾರೆ. ಜನುಮ ದಿನದ ರಾತ್ರಿ ಜೈಲಿನಲ್ಲಿ ಕಳೆಯುವಂತಾಯ್ತು ಅಂತಾ ವಿನಯ ಕುಲಕರ್ಣಿ ಭಾವುಕರಾಗಿ, ಕಣ್ಣೀರು ಹಾಕಿದ್ದಾರೆ ಎಂದು ಜೈಲ್ ಮೂಲಗಳಿಂದ ತಿಳಿದು ಬಂದಿದೆ. ವಿನಯ ಕುಲಕರ್ಣಿ ತುಂಬಾ ತುಂಬಾ ಬೇಸರದಿಂದಲೇ ಜೈಲಿನಲ್ಲಿ ಕಾಳ ಕಳೆದಿದ್ದಾರೆ. ದಿನ ಪತ್ರಿಕೆ ಓದಿದ್ದಾರೆ, ಯಾರೊಂದಿಗೆ ಹೆಚ್ಚಿಗೆ ಮಾತನಾಡಿಲ್ಲ. ಜೈಲಿನ ಕ್ವಾರಂಟೈನ್ ಸೆಲನಲ್ಲಿ ವಿನಯ ಕುಲಕರ್ಣಿ ಎರಡು ದಿನವಿದ್ದರು.
ಅಲ್ಲದೇ, ಹಿಂಡಲಗಾ ಜೈಲಿನಲ್ಲಿ ಮಾಜಿ ಸಚಿವರು ಎರಡು ದಿನ ಕಾರಾವಾಸ ಅನುಭವಿಸಿದ್ದು, ಇದೇ ಮೊದಲು ಅಂತಾ ಹೇಳಲಾಗುತ್ತದೆ. ಯಾಕಂದ್ರೆ ಹಿಂಡಲಗಾ ಜೈಲಿನಲ್ಲಿ ಶಾಸಕರಾಗಿದ್ದರು ಕಾರಾವಾಸ ಅನುಭವಿಸಿದ್ದಾರೆ. ಆದ್ರೆ ಮಾಜಿ ಸಚಿವರು ಜೈಲಿನಲ್ಲಿದ್ದುದ್ದು ಇದೇ ಮೊದಲು ಅಂತಾ ಹೇಳಲಾಗುತ್ತದೆ. ಇನ್ನು ವಿನಯ ಕುಲಕರ್ಣಿ ಯಾವುದೇ ತಪ್ಪು ಮಾಡಿಲ್ಲ. ದೋಷ ಮುಕ್ತರಾಗಿ ಬರುತ್ತಾರೆ ಎಂದು ಅವರ ಕುಟುಂಬದ ಸದಸ್ಯರು, ಅಭಿಮಾನಿಗಳು ಹೇಳುತ್ತಿದ್ದಾರೆ. ವಿನಯ ಕುಲಕರ್ಣಿ ಬಂಧನ ರಾಜಕೀಯ ಪ್ರೇರಿತವಾಗಿದೆ ಎಂದು ಸಹ ಆರೋಪಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!