ರೈತ ಪೆನಲ್ ಅವಿರೋಧ ಆಯ್ಕೆ ಮಾಡಿ:ಡಿಸಿಎಂ ಲಕ್ಷ್ಮಣ ಸವದಿ

ಶ್ರೀನಿವಾಸ ಪಟ್ಟಣ
ಬೆಳಗಾವಿ: ಕಬ್ಬು ಬೆಳೆದ ರೈತರ ಹಿತವನ್ನ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಕಾಪಾಡಿಕೊಂಡು ಬಂದಿದೆ. ಈ ಬಾರಿ ರೈತ ಪೆನಲ್ ಅನ್ನ ಅವಿರೋಧ ಆಯ್ಕೆ ಮಾಡುವಂತೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಬುಧವಾರ ಅಥಣಿ ತಾಲೂಕಿನ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಬಳಿಕ ರೈತರನ್ನ ಉದ್ದೇಶಿಸಿ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿದ ಅವರು, ಕೃಷ್ಣಾ ಸಕ್ಕರೆ ಕಾರ್ಖಾನೆ ಪ್ರಾರಂಭವಾದ ದಿನದಿಂದಲೇ ರೈತರ ಹಿತಕಾಪಾಡುವ ಕೆಲಸವನ್ನ ಮಾಡಿದೆ. ಉತ್ತರ ಕರ್ನಾಟಕ ಬಹುಪಾಲು ಖಾಸಗಿ ಸಕ್ಕರೆ ಕಾರ್ಖಾನೆಗಳು ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ನೀಡುವ ದರವನ್ನ ಆಧರಿಸಿ, ರೈತರಿಗೆ ದರವನ್ನ ನೀಡುತ್ತವೆ. ಕಾರ್ಖಾನೆ ರಾಜ್ಯದಲ್ಲಿ ಉತ್ತಮ ಸಕ್ಕರೆ ಕಾರ್ಖಾನೆ ಆಗಿದ್ದು, ದೇಶದಲ್ಲಿ 2ನೇ ಸ್ಥಾನ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಇದೆ.
ಈಗೀರುವ ಆಡಳಿತ ಮಂಡಳಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ರೈತರ ಹಿತ ಕಾಪಾಡುವ, ಕಬ್ಬು ಬೆಳೆಗಾರರ ಸಹಕಾರಕ್ಕಾಗಿ ಇರುವ ಆಡಳಿತ ಮಂಡಳಿಯನ್ನ ಮತ್ತೆ ಮುಂದುವರೆಸಲು ರೈತ ಸಹಕಾರ ಪೆನೆಲ್ ಗೆ ಮತ ನೀಡುವಂತೆ ಲಕ್ಷ್ಮಣ ಸವದಿ ಮನವಿ ಮಾಡಿದ್ದಾರೆ.
ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ರೈತರ ಸಹಕಾರದಿಂದ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ರಾಜ್ಯದಲ್ಲಿಯೇ ಮಾದರಿ ಆಗಿದೆ. ರಾಜ್ಯದಲ್ಲಿ ಪ್ರಥಮ ಮತ್ತು ದೇಶದಲ್ಲಿ ದ್ವೀತಿಯ ಸ್ಥಾನವನ್ನ ನಮ್ಮ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಸಿಕ್ಕಿದೆ. ಇದೇಲ್ಲವೂ ರೈತರ ಸಹಕಾರದಿಂದ ಮಾತ್ರ ಸಾಧ್ಯವಾಗಿದೆ. ಮುಂದೆಯೂ ಕೂಡಾ ಇದೇ ರೈತರು ಕಾರ್ಖಾನೆಗೆ ಏಳಿಗೆಗಾಗಿ ಶಕ್ತಿ ತುಂಬುವಂತೆ ಮನವಿ ಮಾಡಿದರು.
ಮಾಜಿ ಅಧ್ಯಕ್ಷ ಪರಪ್ಪ ಸವದಿ ಮಾತನಾಡಿ, ರೈತರು ಈವರೆಗೂ ನಮಗೆ ಆಶಿರ್ವಾದ ಮಾಡಿದ್ದಿರಿ. ನಿಮ್ಮ ಆಶೀರ್ವಾದದಿಂದಲೇ ಕಳೆದ ಹತ್ತು ವರ್ಷಗಳಿಂದ ಹೆಚ್ಚು ಬಿಲ್ ನೀಡುತ್ತಾ ಬಂದಿದ್ದೇವೆ. ರೈತರು ಸಹ ಕಬ್ಬು ಕೊಟ್ಟು ಸಹಕರಿಸಿದ್ದಾರೆ. ಮುಂದಿನ ಐದು ವರ್ಷದ ಅವಧಿಯಲ್ಲಿ ಎಥೆನಾಲ್ ಪ್ರೊಡಕ್ಷನ್ ಮತ್ತು ಹತ್ತು ಸಾವಿರ ಮೆಟ್ರಿಕ್ ಟನ್ ನುರಿಸುವ ಶಕ್ತಿ ಹೆಚ್ಚಿಸಲು ರೈತ ಸಹಕಾರ ಪೆನಲ್ ಬೆಂಬಲಿಸುವಂತೆ ಮನವಿ ಮಾಡಿದರು.
ಇದಕ್ಕೂ ಮೊದಲು ಡಿಸಿಎಂ ಲಕ್ಷ್ಮಣ ಸವದಿ ನೇತೃತ್ವದಲ್ಲಿ 13 ಜನರು ನಾಮಪತ್ರವನ್ನ ಸಲ್ಲಿಸಿದರು. ಪರಪ್ಪ ಸವದಿ, ಗುರಬಸು ತೇವರವನಿ, ಗುಳಪ್ಪ ಜತ್ತಿ, ಶಾಂತಿನಾಥ ನಂದೇಶ್ವರ, ಸಿ.ಎಚ್.ಪಾಟೀಲ್, ಶಂಕರ ವಾಘಮೋಡೆ, ರಮೇಶ ಪಟ್ಟಣ, ಸುನಂದಾ ನಾಯಿಕ, ರುಕ್ಷ್ಮೀಣಿ ಕುಲಕರ್ಣಿ, ಸೌರಭ ಪಾಟೀಲ, ನಾನಾಸಾಬ ಗೊಠಕಿಂಡಿ, ಹಣಮಂತ ಜಗದೇವ, ಸಿದರಾಯ ನಾಯಕ ನಾಮಪತ್ರ ಸಲ್ಲಿಸಿದ್ದಾರೆ.