ಯೋಗಿಶಗೌಡ ಕೊಲೆ ಕೇಸ್; ವಿನಯ ಕುಲಕರ್ಣಿ ಸಿಬಿಐ ವಶಕ್ಕೆ

ಮಹಾಂತೇಶ ಇರಳಿ
ಧಾರವಾಡ: ಕಾಂಗ್ರೆಸನ ಪ್ರಭಾವಿ ಲೀಡರ್, ಮಾಜಿ ಮಂತ್ರಿ ವಿನಯ ಕುಲಕರ್ಣಿ ಸಿಬಿಐ ವಶಕ್ಕೆ ತೆಗೆದುಕೊಂಡಿದೆ. ಜಿಪಂ ಸದಸ್ಯ ಯೋಗಿಶಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಮಂತ್ರಿ ವಿನಯ ಕುಲಕರ್ಣಿಯನ್ನ ಸಿಬಿಐ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದು, ವಿನಯ ಕುಲಕರ್ಣಿಗೆ ಈಗ ಬಂಧನದ ಭೀತಿ ಕಾಡುತ್ತಿದೆ.!?
ಇಂದು ಬೆಳಗ್ಗೆ ಸಿಬಿಐ ಅಧಿಕಾರಿಗಳು ವಿನಯ ಕುಲಕರ್ಣಿ ಮನೆಗೆ ತೆರಳಿ ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆಗಾಗಿ ವಿನಯ ಕುಲಕರ್ಣಿಯನ್ನ ಧಾರವಾದ ಉಪ ನಗರ ಪೊಲೀಸ ಠಾಣೆಗೆ ಕರೆದುಕೊಂಡು ಬರಲಾಗಿದೆ. 2016 ಜೂನ್ 15 ರಂದು ಧಾರವಾಡದ ಸಪ್ತಾಪುರ ಬಳಿಯ ಉದಯ ಜಿಮ್ ನಲ್ಲಿ ಯೋಗಿಶ ಗೌಡನನ್ನ ಕೊಲೆ ಮಾಡಲಾಗಿತ್ತು. ಕಣ್ಣಿಗೆ ಕಾರದ ಪುಡಿ ಚೆಲ್ಲಿ ಯೋಗಿಶ ಗೌಡನನ್ನ ಹತ್ಯೆ ಮಾಡಲಾಗಿತ್ತು. ಈ ಪ್ರಕರಣವನ್ನ ಅಂದಿನ ಪೊಲೀಸ್ ಅಧಿಕಾರಿಗಳು ಸರಿಯಾಗಿ ನಡೆಸಿಲ್ಲವೆಂದು ಬಸವರಾಜ ಎಂಬಾತರು ಸಿಬಿಐ ತನಿಖೆಗೆ ಆಗ್ರಹಿಸಿದ್ದರು. ಅದರಂತೆ ಸಿಬಿಐ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಈಗ ಮಾಜಿ ಮಂತ್ರಿ ವಿನಯ ಕುಲಕರ್ಣಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದೆ. ಕೆಲ ದಿನಗಳ ಹಿಂದೆ ವಿನಯ ಕುಲಕರ್ಣಿ ಬಿಜೆಪಿ ಸೇರ್ಪಡೆ ಆಗ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದನ್ನ ಬಿಜೆಪಿ ನಾಯಕರು ಮತ್ತು ಸ್ವಯಂ ವಿನಯ ಕುಲಕರ್ಣಿ ತಳ್ಳಿ ಹಾಕಿದ್ದರು.