ಮ್ಯಾಜಿಕ್ ನಂಬರ ಲೆಕ್ಕಾ ಯಾರಿಗೂ ಸಿಗುತ್ತಿಲ್ಲ..!!

ಮಹಾಂತೇಶ ಇರಳಿ
ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕಿನಿ ನಿರ್ದೇಶಕರ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಈಗಾಗಲೇ 16 ಸ್ಥಾನಗಳ ಪೈಕಿ 13 ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಆದ್ರೆ ಉಳಿದ 3 ಸ್ಥಾನಗಳ ಚುನಾವಣೆ ಇದೇ 6ರಂದು ನಡೆಯಲಿದೆ. ಅದರಲ್ಲೂ ಖಾನಾಪುರ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ಚುನಾವಣೆಯ ಮ್ಯಾಜಿಕ್ ನಂಬರ ಲೆಕ್ಕಾ ಯಾರಿಗೂ ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಹೌದು.. ಈಗ ಬೆಳಗಾವಿ ಡಿಸಿಸಿ ಬ್ಯಾಂಕ ಚುನಾವಣೆಯಲ್ಲಿ ಖಾನಾಪುರ ಶಾಸಕಿ ಅಂಜಲಿ ನಿಂಬಾಳಕರ ಬಿಜೆಪಿ ಘಟಾನುಘಟಿ ನಾಯಕರಿಗೆ ಸೆಡ್ಡು ಹೊಡೆದಿದ್ದಾರೆ. ಬಹುಪಾಲು ಬಿಜೆಪಿ ನಾಯಕರು ಮಾಜಿ ಎಂಇಎಸ ಶಾಸಕ ಅರವಿಂದ ಪಾಟೀಲ ಬೆನ್ನಿಗೆ ನಿಂತಿದ್ದಾರೆ. ಆದ್ರೆ ತೆರೆ ಮರೆಯಲ್ಲಿ ನಡೆಯುತ್ತಿರುವ ಅಸಲಿ ಆಟವೇ ಬೇರೆಯಾಗಿದೆ. ಈಗೇನಿದ್ದರೂ ಅಂಜಲಿ ನಿಂಬಾಳಕರ ಮತ್ತು ಅರವಿಂದ ಪಾಟೀಲ್ ಮಧ್ಯೆ ರೆಸಾರ್ಟ್ ರಾಜಕಾರಣ ಆರಂಭವಾಗಿದೆ.

ಇಬ್ಬರು ತಮ್ಮ ಪರ ಇರುವ ಮತದಾರರನ್ನ ಸುರಕ್ಷಿತ ಸ್ಥಳದಲ್ಲಿ ಇಟ್ಟಿದ್ದಾರೆ. ಕುದುರೆ ವ್ಯಾಪಾರ ನಡೆಯಬಾರದೆಂದು ಇಬ್ಬರು ನಾಯಕರು ರೆಸಾರ್ಟ್ ರಾಜಕಾರಣಕ್ಕೆ ಮೋರೆ ಹೋಗಿದ್ದಾರೆ.
ಹಾಗೇ ನೋಡಿದ್ರೆ ನವೆಂಬರ 6 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ವರೆಗೂ ಮತದಾನ ಪ್ರಕ್ರಿಯೆ ನಡೆಯಲಿದೆ. ಖಾನಾಪುರ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ಒಟ್ಟು 56 ಮತಗಳಿವೆ. ಇದರಲ್ಲಿ 8 ಕೃಷಿ ಮತಗಳು ಅನರ್ಹವಾಗಿವೆ. ಅಂದ್ರೆ ಸದ್ಯ 48 ಮತಗಳು ಮಾತ್ರ ಅರ್ಹತೆ ಹೊಂದಿವೆ. 48 ಮತಗಳ ಲೆಕ್ಕಾಚಾರದಲ್ಲಿ ನಾವು ನೋಡುವುದಾದರೇ 25 ಮತಗಳು ಮ್ಯಾಜಿಕ್ ನಂಬರ್ ಆಗಿದೆ. ಆದ್ರೆ ಇಲ್ಲಿ ಅನರ್ಹ ಆಗಿರುವ 8 ಮತದಾರರು ಕೋರ್ಟ ಮೋರೆ ಹೋಗಿದ್ದಾರೆ.

ಧಾರವಾಡ ಹೈಕೋರ್ಟನಲ್ಲಿ ತಮ್ಮ ಅನರ್ಹತೆಯನ್ನ ಪ್ರಶ್ನೆ ಮಾಡಿದ್ದಾರೆ. ಇದರಲ್ಲಿ ಶಾಸಕಿ ಅಂಜಲಿ ನಿಂಬಾಳಕರ ಮತ್ತು ಮಾಜಿ ಶಾಸಕ ಅರವಿಂದ ಪಾಟೀಲ್ ಪರ ಇರುವವರು ಇದ್ದಾರೆ. ಈಗ ಧಾರವಾಡ ಹೈಕೋರ್ಟ ಈ 8 ಜನರಿಗೂ ಮತದಾನ ಚಲಾಯಿಸಲು ಅವಕಾಶ ಮಾಡಿಕೊಟ್ಟರೇ ಆಗ ಮ್ಯಾಜಿಕ್ ನಂಬರ 29 ಆಗುತ್ತದೆ. ಒಂದು ವೇಳೆ ಕೋರ್ಟ 8 ರಲ್ಲಿ ಕೆಲವರಿಗೆ ಮಾತ್ರ ಮತದಾನಕ್ಕೆ ಅವಕಾಶ ಸಿಕ್ಕರೆ ಆಗ ಮತ್ತೆ ಮ್ಯಾಜಿಕ್ ನಂಬರನ ಸಂಖ್ಯೆ ಬದಲಾಗಲಿದೆ.

ಇನ್ನು ಈಗೀರುವ 48 ಮತಗಳಲ್ಲಿ ಶಾಸಕಿ ಅಂಜಲಿ ನಿಂಬಾಳಕರ ಪರ 28 ಮತಗಳಿವೆ. ಅತ್ತ ಅರವಿಂದ ಪಾಟೀಲ ಪರ 22 ಮತಗಳಿವೆ. ಈಗ ಅಂಜಲಿ ನಿಂಬಾಳಕರ ಬಳಿ ಸ್ಪಷ್ಟವಾದ ಮ್ಯಾಜಿಕ್ ನಂಬರ ಇದೆ. ಲಕ್ಷ್ಮಣ ಸವದಿ, ಕತ್ತಿ ಬ್ರದರ್ಸ್, ಜಾರಕಿಹೊಳಿ ಬ್ರದರ್ಸ್ ನಡೆಸಿದ ಸಂಧಾನ ಕೈಗೂಡಿಲ್ಲ. ಅಂಜಲಿ ನಿಂಬಾಳಕರ ಫಲಿತಾಂಶ ಏನೆ ಬರಲೀ ಕಣದಿಂದ ಹಿಂದೆ ಸರಿಯಲ್ಲ ಅಂತಾ ಹೇಳಿಯೇ ಸೆಡ್ಡು ಹೊಡೆದಿದ್ದಾರೆ. ಇತ್ತ ರಮೇಶ ಜಾರಕಿಹೊಳಿ ಅರವಿಂದ ಪಾಟೀಲ ಬಿಜೆಪಿಗೆ ಬರ್ತಾರೆ ಅಂತಾ ಊರಳಿಸಿದ ದಾಳದ ಮರ್ಮವು ಯಾರಿಗೂ ಅರ್ಥವಾಗುತ್ತಿಲ್ಲ.

ಅತ್ತ ಬಾಲಚಂದ್ರ ಜಾರಕಿಹೊಳಿ, ಉಮೇಶ ಕತ್ತಿ ಆರಂಭದ 13 ಅವಿರೋಧ ಆಯ್ಕೆ ಪ್ರಕ್ರಿಯೆಲ್ಲಿ ತೋರಿಸಿದ ಆಸಕ್ತಿ ಉಳಿದ 3 ಮತಕ್ಷೇತ್ರದಲ್ಲಿ ತೋರಿಸದೇ ಸೈಲೆಂಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ಅಂಜಲಿ ನಿಂಬಾಳಕರ ಬೆನ್ನಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನಿಂತಿದ್ದಾರೆ. ಡಿಸಿಸಿ ಬ್ಯಾಂಕಿನಲ್ಲಿ ಕೈ ಹಾಕುವುದಿಲ್ಲ ಅಂತಾ ಹೇಳುತ್ತಲೇ ಅಂಜಲಿ ನಿಂಬಾಳಕರ ಅವರನ್ನ ದಾಳವಾಗಿ ಉರಳಿಸಿದ್ದಾರೆ. ಈಗ ಧಾರವಾಡ ಹೈಕೋರ್ಟನ ಆದೇಶದತ್ತ ಎಲ್ಲರ ಚಿತ್ತ ನೆಟ್ಟಿದೆ. ಒಂದು ವೇಳೆ ಧಾರವಾಡ ಹೈಕೋರ್ಟ ನವಂಬರ 6 ಒಳಗಾಗಿ ಆದೇಶ ಮಾಡದಿದ್ದರೇ, ಆಗ ಅಂಜಲಿ ನಿಂಬಾಳಕರ ಗೆಲುವಿನ ಹಾದಿ ಇನ್ನು ಸುಗಮವಾಗಲಿದೆ.