ಟಾಪ್ ಸ್ಟೋರಿ
ಮುಖ್ಯಮಂತ್ರಿ ಬದಲಾಗ್ತಾರೆ ಸಿದ್ದರಾಮಯ್ಯ ಭವಿಷ್ಯ

ಶ್ರೀನಿವಾಸ ಪಟ್ಟಣ
ಬೆಳಗಾವಿ: ಕರ್ನಾಟಕ ರಾಜಕಾರಣದ ಭವಿಷ್ಯವನ್ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನುಡದಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ಉಪಚುನಾವಣೆ ನಂತರ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲಿದ್ದಾರೆ. ಬಿಜೆಪಿ ಹೈಕಮಾಂಡ ಸಿಎಂ ಬದಲಾವಣೆ ಮಾಡಲಿದೆ. ಸಿಎಂ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿ ಇರುವುದಿಲ್ಲ. ಇದನ್ನ ತುಂಬಾ ವಿಶ್ವಾಸದಿಂದ ಹೇಳುತ್ತಿದ್ದೇನೆ.
ಸಿಎಂ ಸ್ಥಾನದಿಂದ ಬಿ.ಎಸ. ಯಡಿಯೂರಪ್ಪ ಬದಲಾಯಿಸುವ ಬಗ್ಗೆ ದೆಹಲಿಯಿಂದ ನನಗೆ ಮಾಹಿತಿಯಿದೆ. ನಾನು ಮಾಡಿರುವ ಭ್ರಷ್ಟಾಚಾರ ಆರೋಪದಿಂದ ಅಥವಾ ಅನೇಕ ದಿನದಿಂದ ಸಿಎಂ ಬದಲಾವಣೆಗೆ ಬಿಜೆಪಿಯಲ್ಲಿ ಚಿಂತನೆ ನಡೆದಿದೆ. ಈ ಕಾರಣದಿಂದ ಉಪ ಚುನಾವಣೆ ಬಳಿಕ ಸಿಎಂ ಯಡಿಯೂರಪ್ಪ ಬದಲಾವಣೆ ಆಗಲಿದೆ ಎಂದು ಸಿದ್ದರಾಮಯ್ಯ ಬಾಂಬ್ ಸಿಡಸಿದ್ದಾರೆ..