ಕ್ರೈಂ
ಆತ್ಮಹತ್ಯೆ ಕೇಸನಲ್ಲಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ವಶಕ್ಕೆ..!!?

ಮಹಾಂತೇಶ ಇರಳಿ
ಮುಂಬೈ: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನ ಇಂದು ಮಹಾರಾಷ್ಟ್ರದ ಸಿಐಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಳೆದ ಕೆಲ ತಿಂಗಳಿನಿಂದ ಅರ್ನಬ್ ಗೋಸ್ವಾಮಿ ಮತ್ತು ಮಹಾರಾಷ್ಟ್ರ ಸರ್ಕಾರ ಮಧ್ಯೆ ಓಪನ್ ವಾರ್ ನಡೆಯುತ್ತಿತ್ತು. ಇಂದು ಬೆಳಗ್ಗೆ ಅರ್ನಬ್ ಮನೆಗೆ ಬಂದ ಸಿಐಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದು ಟಿಆರಪಿ ವಿಚಾರವಾಗಿ ವಶಕ್ಕೆ ಪಡೆದುಕೊಂಡಿಲ್ಲ. ಬದಲಾಗಿ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ ಮತ್ತು ಅವರ ತಾಯಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದುಕೊಳ್ಳಲಾಗಿದೆ. 2018ರಲ್ಲಿ ಈ ಆತ್ಮಹತ್ಯೆ ಘಟನೆ ನಡೆದಿತ್ತು. ಆಗ ಘಟನೆ ಸಂದರ್ಭದಲ್ಲಿ ತಮಗೆ ಪಾವತಿಸಬೇಕಾದ ಹಣವನ್ನ ಅರ್ನಬ್ ಪಾವತಿಸಿಲ್ಲ ಎಂದು ಪತ್ರದಲ್ಲಿ ಬರೆಯಲಾಗಿತ್ತು. 2018ರ ಪ್ರಕರಣವನ್ನ 2020ರ ಮೇ ತಿಂಗಳಲ್ಲಿ ಮಹಾರಾಷ್ಟ್ರ ಸರ್ಕಾರ ಸಿಐಡಿ ತನಿಖೆಗೆ ಆದೇಶ ಮಾಡಿತ್ತು. ಈಗ ಮನೆಗೆ ಬಂದ ಸಿಐಡಿ ಪೊಲೀಸರು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಮಾಡಿದ್ದಾರೆ.