ಜಿಲ್ಲಾ
ಹೈಟೆಕ್ ಬಸ್ ನಿಲ್ದಾಣಕ್ಕೆ ಶಾಸಕ ಅನಿಲ್ ಬೆನಕೆ ಭೂಮಿ ಪೂಜೆ

ಮಹಾಂತೇಶ ಇರಳಿ
ಬೆಳಗಾವಿ:ಹೈಟೆಕ್ ಬಸ್ ನಿಲ್ದಾಣಕ್ಕೆ ಬೆಳಗಾವಿ ಉತ್ತರ ಮತಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ಭೂಮಿ ಪೂಜೆ ಮಾಡಿದ್ದಾರೆ.
ನಗರ ರೈಲ್ವೆ ನಿಲ್ದಾಣ ಬಳಿಯ ಹಳೆ ಬಸ್ ನಿಲ್ದಾಣದ ಸ್ಥಳದಲ್ಲಿ 1 ಕೋಟಿ 86 ಲಕ್ಷ ಮೌಲ್ಯದಲ್ಲಿ ಅತ್ಯಾಧುನಿಕ ಬಸ್ ನಿಲ್ಧಾಣ ಕಾಮಗಾರಿಗೆ ಶಾಸಕ ಅನಿಲ್ ಬೆನಕೆ ಚಾಲನೆ ನೀಡಿದರು.

ಅಲ್ಲದೇ ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಕಾಲಮಿತಿಯಲ್ಲಿ ಬಸ್ ನಿಲ್ಧಾಣದ ಕಾಮಗಾರಿಯನ್ನ ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ರಾಜೀ ಆಗದಂತೆ ಎಚ್ಚರಿಕೆ ನೀಡಿದ್ದಾರೆ. ಈ ಹೈಟೆಕ್ ಬಸ್ ನಿಲ್ಧಾಣದಿಂದ ಬೆಳಗಾವಿ ನಗರದ ಜನತೆ ಅಷ್ಟೇ ಅಲ್ಲದೇ ಸಾಕಷ್ಟು ಪ್ರಯಾಣಿಕರಿಗೂ ಅನುಕೂಲವಾಗಲಿದೆ. ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಪಾಲಿಕೆ ಮತ್ತು ಸ್ಮಾರ್ಟ ಸಿಟಿ ಯೋಜನೆಯಡಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅನಿಲ್ ಬೆನಕೆ ಚಾಲನೆ ನೀಡಿದ್ದಾರೆ.