ಸ್ಲಂ ಮಕ್ಕಳಿಗೆ ಸ್ಫೂರ್ತಿ ತುಂಬಿದ ಶಾಸಕ ಅನಿಲ್ ಬೆನಕೆ

ಮಹಾಂತೇಶ ಇರಳಿ
ಬೆಳಗಾವಿ: ಬೆಳಗಾವಿ ಉತ್ತರ ಮತಕ್ಷೇತ್ರದ ಸ್ಲಂ ಮಕ್ಕಳಿಗೆ ಬಿಜೆಪಿ ಶಾಸಕ ಅನಿಲ್ ಬೆನಕೆ ಶಿಕ್ಷಣದ ಮಹತ್ವವನ್ನ ತಿಳಿ ಹೇಳುವ ಮೂಲಕ ಸ್ಫೂರ್ತಿ ತುಂಬಿದ್ದಾರೆ. ಕೊರೊನಾ ಅಟ್ಟಹಾಸದಿಂದ ಶಾಲೆಗಳ ಆರಂಭ ಇನ್ನೂ ವಿಳಂಬವಾಗಲಿದೆ. ಆದ್ರೆ ಆನಲೈನ್ ಕ್ಲಾಸಗಳ ಮೂಲಕ ಮಕ್ಕಳಿಗೆ ಪಾಠ ಹೇಳುವ ಕಾರ್ಯವನ್ನ ಸರ್ಕಾರಿ ಶಾಲೆ ಶಿಕ್ಷಕರು ಮಾಡುತ್ತಿದ್ದಾರೆ.

ಆದ್ರೆ ಬಹುಪಾಲು ಬಡ ಮಕ್ಕಳು, ಸ್ಲಂ ಮಕ್ಕಳು ಆನಲೈನ್ ಶಿಕ್ಷಣವನ್ನ ಪಡೆಯಲು ಸಾಧ್ಯವಾಗುತ್ತಿಲ್ಲ. ಇಂತಹ ಮಕ್ಕಳ ಪೋಷಕರ ಬಳಿ ಮೊಬೈಲ್ ಇಲ್ಲದ ಕಾರಣ ಆ ಮಕ್ಕಳು ಆನಲೈನ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹೀಗೆ ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳಿಗೆ ಬೆಳಗಾವಿ ಉತ್ತರ ಮತಕ್ಷೇತ್ರದ ಆಂಜನೇಯ ನಗರ ಗಣಪತಿ ಟೆಂಪಲ್ ಆವರಣದಲ್ಲಿ ಶಿಕ್ಷಕರು ಪಾಠವನ್ನ ಮಾಡುತ್ತಿದ್ದಾರೆ. ಹತ್ತಾರು ಬಡ ಮಕ್ಕಳಿಗೆ ಈ ಶಿಕ್ಷಕರು ವಿಶೇಷ ಕಾಳಜಿ ತೋರಿಸುತ್ತಿದ್ದಾರೆ.

ಈ ವಿಚಾರ ಗೊತ್ತಾಗುತ್ತಿದ್ದಂತೆ ಶಾಸಕ ಅನಿಲ್ ಬೆನಕೆ ಮಕ್ಕಳಿಗೆ ಪಾಠ ಮಾಡುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ್ರು. ಮಕ್ಕಳೊಂದಿಗೆ ಕೆಲ ಕಾಲವನ್ನ ಕಳೆದ್ರು. ಅಲ್ಲದೇ ಮಕ್ಕಳಿಗೆ ಶಿಕ್ಷಣದ ಮಹತ್ವದ ಜೊತೆಗೆ ಕೊರೊನಾ ವಿರುದ್ಧ ಹೇಗೆ ಸುರಕ್ಷತೆಯಿಂದ ಇರಬೇಕು ಎನ್ನುವುದನ್ನ ತಿಳಿ ಹೇಳುವ ಮೂಲಕ ಅವರಿಗೆ ಸ್ಫೂರ್ತಿ ತುಂಬಿದ್ರು. ಶಾಸಕ ಅನಿಲ್ ಬೆನಕೆ ಬಡ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ತೋರಿಸುವ ಮೂಲಕ ತಮ್ಮ ಜವಾಬ್ದಾರಿಯನ್ನ ಎತ್ತಿ ಹಿಡದಿದ್ದಾರೆ.