ನೊಂದವರ ಕಷ್ಟಕ್ಕೆ ಸ್ಪಂದಿಸುವ ಕನ್ನಡದ ಕಟ್ಟಾಳು ಮಹೇಶ ಮುರ್ಗಾಮಠ

ಮಹಾಂತೇಶ ಇರಳಿ
ಬೆಳಗಾವಿ: ಸಮಾಜ ಸೇವೆಯನ್ನೆ ಈ ಕನ್ನಡದ ಕಟ್ಟಾಳು ಉಸಿರಾಗಿಸಿಕೊಂಡಿದ್ದಾರೆ. ಇವರು ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸದ್ದಿಲ್ಲದೇ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೈತುಂಬಾ ಸಂಬಳ ಬರುತ್ತಿದ್ದ ಕೆಲಸಕ್ಕೆ ಟಾಟಾ ಹೇಳಿ, ಈಗ ಸ್ವಂತ ಉದ್ಯೋಗ ಆರಂಭಿಸಿ ಮೇಕ್ ಇನ್ ಇಂಡಿಯಿಯಾಗೆ ಹೆಗಲುಕೊಟ್ಟವರೇ ಈ ಮಹೇಶ ಮುರ್ಗಾಮಠ.

ಯಸ್. ಮಹೇಶ ಮುರ್ಗಾಮಠ ಕುಂದಾನಗರಿ ಬೆಳಗಾವಿಯಲ್ಲಿ ಎಲೆ ಮರೆ ಕಾಯಿಯಂತೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡ ಯುವ ನೇತಾರ. ಮಹೇಶ ಹತ್ತಾರು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದ ಬಳಿಕ ಈಗ ಇತರೆ ಯುವಕರಿಗೆ ಯುವ ಉದ್ಯಮಿ ಆಗಲು ಸ್ಫೂರ್ತಿಯಾಗಿದ್ದಾರೆ.

ಮಹೇಶ ಈಗ ಬೆಳಗಾವಿ ಜಿಲ್ಲೆ ಆಕ್ಟಿವ್ ಲೀಡರ್. ಸದಾ ಪಾದರಸದಂತೆ ಮಹೇಶ ಮುರ್ಗಾಮಠ ಕಾಯಕದಲ್ಲಿ ಮಗ್ನವಾಗಿರುತ್ತಾರೆ. ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದರೂ ಮಹೇಶ ಮಾಡುತ್ತಿರುವ ಕಾರ್ಯಗಳು ಇಡೀ ಸಮಾಜವೇ ಮೆಚ್ಚುವಂತಹದ್ದು. ಕೊರೊನಾ ಲಾಕಡೌನ ಹಿಡಿದು ಸಮಾಜದಲ್ಲಿ ನೊಂದವರು, ಬಡವರ ಕಣ್ಣೀರು ಒರೆಸುವ ಕಾರ್ಯವನ್ನ ಮಹೇಶ ಮಾಡುತ್ತಿದ್ದಾರೆ. ಎಂತಹದ್ದ ಸಮಾಜಮುಖಿ ಕಾರ್ಯವಿದ್ದರೂ ಮೊದಲು ಅಲ್ಲಿ ಹಾಜರಾಗ್ತಾರೆ ಮಹೇಶ ಮುರ್ಗಾಮಠ.
ಹಾಗೇ ನೋಡಿದ್ರೆ ಮಹೇಶ ಬರಿ ಸಮಾಜಮುಖಿ ಕೆಲಸ ಮಾಡದೇ ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಾಡು, ನುಡಿಗಾಗಿ ನಿರಂತರವಾಗಿ ಹೋರಾಟವನ್ನ ಮಾಡಿಕೊಂಡು ಬಂದಿದ್ದಾರೆ. ವಿವಿಧ ಕನ್ನಡಪರ ಸಂಘಟನೆಗಳಲ್ಲಿ ಮಹೇಶ ನಾಡು, ನುಡಿ, ಜಲಕ್ಕಾಗಿ ನಡೆದ ಹೋರಾಟಗಳಿಗೆ ಸಾಕ್ಷಿಯಾಗಿದ್ದಾರೆ.

ಇನ್ನು ಮಹೇಶ ನೇರಮಾತುಗಳು, ನಿಷ್ಠುರ ನಿರ್ಧಾರಗಳಿಂದ ಗುರುತಿಸಿಕೊಂಡಿದ್ದಾರೆ. ಪ್ರಮಾಣಿಕವಾಗಿ ಸಮಾಜ ಸೇವೆ ಮಾಡುತ್ತಿರುವ ಮಹೇಶ ಬಿಜೆಪಿಯಲ್ಲಿ ಆಕ್ಟಿವ್ ಕಾರ್ಯಕರ್ತರ. ಈಗ ಬಿಜೆಪಿಯ ಬೆಳಗಾವಿ ಉತ್ತರ ಮತಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಆಗಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಮಹೇಶ ತನ್ನದೆಯಾದ ಗೆಳೆಯರ ಬಳಗದೊಂದಿಗೆ ಸದಾ ಸಮಾಜಮುಖಿ ಸೇವೆಗೆ ಸಿದ್ಧವಾಗಿರುತ್ತಾರೆ. ಇದೇ ಕಾರಣಕ್ಕೆ ದಿವಂಗತ ಸುರೇಶ ಅಂಗಡಿ, ಶಾಸಕ ಅನಿಲ್ ಬೆನಕೆ ಸೇರಿ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.