ಡಿಸಿಸಿ ಬ್ಯಾಂಕ್ ಚುನಾವಣೆ; ಸಾಹುಕಾರರ ಆಟ ಯಾರ ಕೊರಳಿಗೆ ವಿಜಯದ ಮಾಲೆ

ಮಹಾಂತೇಶ ಇರಳಿ
ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನ ಚುನಾವಣೆಯಲ್ಲಿ ಸಾಹುಕಾರರ ಆಟ ಮುಂದೊರೆದಿದೆ. 16 ನಿರ್ದೇಶಕರ ಸ್ಥಾನಗಳ ಪೈಕಿ 13 ಅವಿರೋಧ ಆಯ್ಕೆಯಾಗಿವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಜಂಟಿ ಪ್ರೇಸ್ಮೀಟ್ ಮಾಡಿ ಹೇಳಿದ್ದಾರೆ.

ಇದೇ ಮೊದಲ ಬಾರಿಗೆ ಡಿಸಿಎಂ ಲಕ್ಷ್ಮಣ ಸವದಿ ಮತ್ತು ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಮುಖಾಮುಖಿಯಾದರು. ಇಬ್ಬರು ಪ್ರಭಾವಿ ನಾಯಕರು ಒಂದೇ ಪಕ್ಷದಲ್ಲಿ ಇದ್ದರೂ ಒಬ್ಬರಿಗೊಬ್ಬರು ಮುಖವನ್ನ ನೋಡದಂತಹ ರಾಜಕೀಯ ವೈರತ್ವವಿತ್ತು. ಆದ್ರೆ ಬಿಜೆಪಿ ವರಿಷ್ಠರು, ಆರ.ಎಸ.ಎಸ ಸೂಚನೆಯಿಂದ ಬೆಳಗಾವಿ ಜಿಲ್ಲೆ ಬಿಜೆಪಿ ನಾಯಕರು ಒಂದಾಗಿದ್ದಾರೆ. ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಡಿಸಿಎಂ ಸವದಿ, ಸಚಿವ ರಮೇಶ ಜಾರಕಿಹೊಳಿ, ಮಾಜಿ ಸಚಿವರಾದ ಬಾಲಚಂದ್ರ ಜಾರಕಿಹೊಳಿ, ಉಮೇಶ ಕತ್ತಿ, ಮಾಜಿ ಸಂಸದ ರಮೇಶ ಕತ್ತಿ, ಸಂಸದ ಅಣ್ಣಾಸಾಹೇಬ ಜೋಲ್ಲೆ, ಸಚಿವೆ ಶಶಿಕಲಾ ಜೋಲ್ಲೆ, ಶಾಸಕರಾದ ಆನಂದ ಮಾಮನಿ, ಮಹಾಂತೇಶ ದೊಡ್ಡಗೌಡರ, ಮತ್ತು ಮಾಜಿ ಶಾಸಕರು, ಮುಖಂಡರು ಒಂದಾಗಿದ್ದಾರೆ.

ಹೀಗಾಗಿಯೇ ಬೆಳಗಾವಿ ಡಿಸಿಸಿ ಬ್ಯಾಂಕಿನ 16 ಸ್ಥಾನಗಳಲ್ಲಿ 13 ಅವಿರೋಧ ಆಯ್ಕೆ ಆಗಿವೆ. ಆದ್ರೆ ಖಾನಾಪುರ, ರಾಮದುರ್ಗ ಮತ್ತು ಕುರಿ ಉಣ್ಣೆ ಸಹಕಾರ ಸಂಘಕ್ಕೆ ನವೆಂಬರ 6ರಂದು ಚುನಾವಣೆ ನಡೆಯಲಿದೆ. 16 ಸ್ಥಾನಗಳನ್ನ ಅವಿರೋಧ ಮಾಡಬೇಕೆಂದು ಪ್ರಯತ್ನ ಮಾಡಿದ್ದೇವೆ. ಆದ್ರೆ 13 ಅವಿರೋಧ ಆಗಿದೆ. ಉಳಿದ 3 ಸಮಯದ ಅಭಾವದಿಂದ ಅವಿರೋಧ ಪ್ರಕ್ರಿಯೆ ನಡೆಯಲಿಲ್ಲ. ಆದ್ರು ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ. ಔಪಚಾರಿಕವಾಗಿ ಮಾತ್ರ ಚುನಾವಣೆ ನಡೆಯಲಿದೆ. ಖಾನಾಪುರದಿಂದ ಮಾಜಿ ಶಾಸಕ ಅರವಿಂದ ಪಾಟೀಲ, ರಾಮದುರ್ಗದಿಂದ ಶ್ರೀಕಾಂತ ಢವಳ, ನೇಕಾರರ ಸಹಕಾರ ಸಂಘದಿಂದ ಗಜಾನನ ಕ್ವಳ್ಳಿ ಗೆಲುವು ಸಾಧಿಸಲಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಪ್ರೇಸ್ಮೀಟನಲ್ಲಿ ತಮ್ಮ ಅಭ್ಯರ್ಥಿಗಳ ಗೆಲುವು ಖಚಿತ ಅಂತಾ ಹೇಳಿದ್ದಾರೆ.

ಹಾಗೇ ನೋಡಿದ್ರೆ ಖಾನಾಪುರ ಕೃಪಿ ಪತ್ತಿನ ಸಂಘದಿಂದ ಡಿಸಿಎಂ ಸವದಿ ಆಪ್ತ ಅರವಿಂದ ಪಾಟೀಲ ಮತ್ತು ಕತ್ತಿ ಜಾರಕಿಹೊಳಿ ಬಣದಲ್ಲಿ ಶಾಸಕಿ ಅಂಜಲಿ ನಿಂಬಾಳಕರ ಗುರುತಿಸಿಕೊಂಡಿದ್ದರು. ಆದ್ರೆ 16 ಅವಿರೋಧ ಆಯ್ಕೆ ಮಾಡಬೇಕು ಎಂಬ ಉದ್ದೇಶದಿಂದ ಎಲ್ಲಾ ನಾಯಕರು ಪ್ರಯತ್ನಿಸಿದ್ರು. ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳಕರ ಮತ್ತು ಅರವಿಂದ ಪಾಟೀಲ ಮಧ್ಯೆದ ರಾಜೀ ಸಂಧಾನ ಕೈಗೂಡಲಿಲ್ಲ.

ಹೀಗಾಗಿ ಖಾನಾಪುರ ಕೃಷಿ ಪತ್ತಿನ ಸಹಾಕರ ಸಂಘದಿಂದ ನಿರ್ದೇಶಕರ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಯಲಿದೆ. ಇಬ್ಬರು ಅಭ್ಯರ್ಥಿಗಳು ತಮ್ಮ ಬಳಿಕ ಸಂಖ್ಯಾ ಬಲವಿದೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಈ ಸಾಹುಕಾರರ ಚದುರಂಗದ ಆಟದಲ್ಲಿ ಯಾರ ಕೊರಳಿಗೆ ಗೆಲುವಿನ ಮಾಲೆ ಅನ್ನೋದಕ್ಕೆ ನವೆಂಬರ 6ರಂದು ಪ್ರಕಟವಾಗುವ ಚುನಾವಣೆ ಫಲಿತಾಂಶದ ವರೆಗೂ ಕಾಯಲೇಬೇಕು.