ಡಿಸಿಸಿ ಬ್ಯಾಂಕ್ ಚುನಾವಣೆ;ಅಖಾಡಕ್ಕೆ ಎಂಟ್ರಿಕೊಟ್ಟ ರಾಕಿ ಭಾಯ್

ಮಹಾಂತೇಶ ಇರಳಿ
ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಚುನಾವಣೆ ಅಖಾಡಕ್ಕೆ ಕೊನೆಕ್ಷಣದಿ ಎಂಟ್ರಿಕೊಟ್ಟ ರಾಕಿ ಭಾಯ್. ಕೊನೆಕ್ಷಣದಲ್ಲಿ ಚುನಾವಣೆ ಅಖಾಡಕ್ಕೆ ಎಂಟ್ರಿಕೊಟ್ಟ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ. ಈಗಾಗಲೇ ಬೆಳಗಾವಿ ಡಿಸಿಸಿ ಬ್ಯಾಂಕ್ 16 ನಿರ್ದೇಶಕರ ಸ್ಥಾನಗಳಲ್ಲಿ 12 ಅವಿರೋಧ ಆಯ್ಕೆ ಆಗಿದೆ. ಇನ್ನೂ ಖಾನಾಪುರ, ರಾಮದುರ್ಗ, ಬೈಲಹೊಂಗಲ ಸೇರಿ ನಾಲ್ಕು ಕ್ಷೇತ್ರದ ಅವಿರೋಧ ಆಯ್ಕೆ ಬಾಕಿಯಿದೆ. ಈಗಾಗಲೇ ಖಾನಾಪುರ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳಕರ ಅಖಾಡಕ್ಕೆ ಇಳದಿದ್ದಾರೆ. ಅತ್ತ ಅಂಜಲಿ ಮೆಡ್ಂ ವಿರುದ್ಧ ಎಂಇಎಸ ಮಾಜಿ ಶಾಸಕ ಅರವಿಂದ ಪಾಟೀಲ ಕಣದಲ್ಲಿ ಇದ್ದಾರೆ.ಖಾನಾಪುರ ಅವಿರೋಧ ಆಗದಿದ್ದೇ, ಇನ್ನೂಳಿದ ಮೂರು ಕ್ಷೇತ್ರಗಳು ಕಗ್ಗಂಟು ಆಗಲಿದೆ. ಹೀಗಾಗಿಯೇ ಕೊನೆಯ ಕ್ಷಣದಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಅಖಾಡಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಎಂಟ್ರಿ ಆಗಿದೆ. ರಮೇಶ್ ಜಾರಕಿಹೊಳಿ ಜೊತೆಗೆ ಡಿಸಿಸಿ ಬ್ಯಾಂಕ್ ಗೆ ಅರವಿಂದ ಪಾಟೀಲ ಆಗಮಿಸಿದ್ದಾರೆ. ಅವಿರೋಧ ಆಯ್ಕೆ ಬಗ್ಗೆ ಸಚಿವ ರಮೇಶ್ ಜಾರಕಿಹೊಳಿ, ಮಾಜಿ ಸಂಸದ ರಮೇಶ್ ಕತ್ತಿ ಒಳಗೊಂಡಂತೆ ಮಹತ್ವ ಸಭೆ ನಡೆಸುತ್ತಿದ್ದಾರೆ. ಬೆಳಗಾವಿ ಡಿಸಿಸಿ ಬ್ಯಾಂಕಿನಲ್ಲಿ ಮಹತ್ವದ ಸಭೆ ಬಳಿಕ ಉಳಿದ ನಾಲ್ಕು ಸ್ಥಾನಗಳ ಭವಿಷ್ಯ ನಿರ್ಧಾರವಾಗಲಿದೆ.