ಡಿಸಿಸಿ ಬ್ಯಾಂಕಿನಲ್ಲಿ ಸವದಿ, ಜಾರಕಿಹೊಳಿ ಸಾಹುಕಾರ್ ಮಿಲನ್

ಶ್ರೀನಿವಾಸ ಪಟ್ಟಣ
ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಚುನಾವಣೆ ಕಸರತ್ತು ಜೋರಾಗಿದೆ. ಕೊನೆ ಕ್ಷಣದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಒಂದಾಗಿದ್ದಾರೆ. ಬೆಳಗಾವಿ ಡಿಸಿಸಿ ಬ್ಯಾಂಕಿನ 16 ಸ್ಥಾನಗಳಲ್ಲಿ ಈಗ 13 ಸ್ಥಾನಕ್ಕೆ ಅವಿರೋಧ ಆಯ್ಕೆ ಆಗಿದೆ. ಇಂದು ಬೈಲಹೊಂಗಲದ ಕ್ಷೇತ್ರದಿಂದ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಅವಿರೋಧ ಆಯ್ಕೆ ಆಗಿದ್ದಾರೆ. ಮಹಾಂತೇಶ ದೊಡ್ಡಗೌಡರ ಡಿಸಿಎಂ ಲಕ್ಷ್ಮಣ ಸವದಿ ಪರಮಾಪ್ತ. ಖಾನಾಪುರ ಸೇರಿ ಮೂರು ಸ್ಥಾನದ ಅವಿರೋಧ ಕಗ್ಗಂಟಾಗಿದೆ. ಖಾನಾಪುರ ಕ್ಷೇತ್ರದಲ್ಲಿ ಶಾಸಕಿ ಅಂಜಲಿ ನಿಂಬಾಳಕರ ಮತ್ತು ಮಾಜಿ ಶಾಸಕ ಅರವಿಂದ ಪಾಟೀಲ ಮಧ್ಯೆ ಫೈಟ್ ತೀವ್ರಗೊಂಡಿದೆ.
ಹೀಗಾಗಿ ಕೊನೆ ಕ್ಷಣದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಮತ್ತು ಜಿಲ್ಲಾ ಮಂತ್ರಿ ರಮೇಶ್ ಜಾರಕಿಹೊಳಿ ಇಬ್ಬರು ಅಖಾಡಕ್ಕೆ ಇಳಿದು ಅವಿರೋಧ ಆಯ್ಕೆ ಕಸರತ್ತು ತೀವ್ರಗೊಳಿಸಿದ್ದಾರೆ. ಬೆಳಗಾವಿ ಡಿಸಿಸಿ ಬ್ಯಾಂಕ್ ನಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಸಂಸದ ರಮೇಶ್ ಕತ್ತಿ, ಶಾಸಕ ಮಹಾಂತೇಶ ದೊಡ್ಡಗೌಡರ, ಎಂಎಲಸಿ ಮಹಾಂತೇಶ ಕವಟಗಿಮಠ ಭಾಗವಹಿಸಿದ್ದಾರೆ. ಈ ಸಭೆಯಿಂದ ಕೆಎಂಎಫ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮತ್ತು ಮಾಜಿ ಸಚಿವ ಉಮೇಶ ಕತ್ತಿ ಸಹ ದೂರ ಉಳದಿದ್ದಾರೆ.