ಕನ್ನಡಿಗರ ಹೃದಯ ಗೆದ್ದ ಡಿಸಿಎಂ ಲಕ್ಷ್ಮಣ ಸವದಿ

ಶ್ರೀನಿವಾಸ ಪಟ್ಟಣ
ಬೆಳಗಾವಿ: ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಸಮಸ್ತ ಕನ್ನಡಿಗರ ಹೃದಯ ಗೆದ್ದಿದ್ದಾರೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ.
ಹೌದು..ಕನ್ನಡ ರಾಜ್ಯೋತ್ಸವದ ದಿನವೇ ಮಹಾರಾಷ್ಟ್ರ ಸರ್ಕಾರದ ಸಚಿವರು, ಶಾಸಕರು ಕಪ್ಪು ಬಟ್ಟೆ ಧರಿಸಿ ನವೆಂಬರ 1ರಂದು ಕರಾಳ ದಿನ ಆಚರಿಸುತ್ತಿದ್ದಾರೆ. ಇಂತಹ ಕನ್ನಡ ವಿರೋಧಿ ಸರ್ಕಾರ, ಸಚಿವರನ್ನ ಡಿಸಿಎಂ ಲಕ್ಷ್ಮಣ ಸವದಿ ಯಾವುದೇ ಮುಲಾಜಿಲ್ಲದೇ ಹಿಗ್ಗಾಮುಗ್ಗಾ ಝಾಡಿಸಿದ್ದಾರೆ. ಈ ಮೂಲಕ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಕನ್ನಡಿಗರ ಹೃದಯವನ್ನ ಗೆಲ್ಲುವ ಕೆಲಸವನ್ನ ಡಿಸಿಎಂ ಲಕ್ಷ್ಮಣ ಸವದಿ ಮಾಡಿದ್ದಾರೆ.
ಇಂದು ಬೆಳಗಾವಿಯಲ್ಲಿ ಮಹಾರಾಷ್ಟ್ರ ಸರ್ಕಾರ, ಸಚಿವರ ಉದ್ಧಟತನದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಡಿಸಿಎಂ ಲಕ್ಷ್ಮಣ ಸವದಿ ಖಡಕ್ಕಾಗಿಯೇ ತೀರುಗೇಟು ನೀಡಿದ್ದಾರೆ.

ಬೆಳಗಾವಿ ವಿಚಾರದಲ್ಲಿ ಯಾರೇ ಕೂಗಾಡಲಿ, ಹಾರಾಡಲಿ ಬೆಳಗಾವಿ ನಮ್ಮದೇ. ಈ ಸೂರ್ಯ, ಚಂದ್ರ ಇರೋ ವರೆಗೆ ಬೆಳಗಾವಿ ನಮ್ಮದೇ. ಮಹಾರಾಷ್ಟ್ರ ನಾಯಕರು ಏನೆ ಹೇಳಿದ್ರು ಅದೇಲ್ಲ ನಡೆಯಲ್ಲ. ತೀಟೆ ತೀರಿಸಿಕೊಳ್ಳಲು ಕೆಲವರು ನಾಯಕರು ಮಾತನಾಡುತ್ತಾರೆ. ಬೆಳಗಾವಿ ಬಂದು ಹೇಳಿದ್ರೆ ತಕ್ಕ ಉತ್ತರ ಕೊಡ್ತಿವಿ. ಮಹಾರಾಷ್ಟ್ರದಲ್ಲಿ ಯಾವುದೇ ಸರ್ಕಾರ ಇದ್ದಾಗ ಈ ರೀತಿ ಖ್ಯಾತೆ ತೆಗೆಯುತ್ತಾರೆ. ತಮ್ಮ ರಾಜ್ಯದ ದೃಷ್ಟಿಯಿಂದ ಮಾತನಾಡುತ್ತಾರೆ. ಅದು ಕಾಂಗ್ರೆಸ್, ಬಿಜೆಪಿ, ಶಿವಸೇನೆ, ಎನಸಿಪಿ ಹೀಗೆ ಯಾವುದೇ ಪಕ್ಷವಾದ್ರು ಈ ರೀತಿಯ ಮಾತುಗಳನ್ನ ಆಡುತ್ತಾರೆ. ಆನೆ ಹೋಗುವಾಗ ನಾಯಿ ಬೋಗಳಿದ್ರೆ ಏನು ಮಾಡಲು ಆಗೊಲ್ಲ ಎಂದು ಕಿಡಿಕಾರಿದರು.
ಇನ್ನು ಹೀಗೆ ಡಿಸಿಎಂ ಲಕ್ಷ್ಮಣ ಸವದಿ ಮಹಾರಾಷ್ಟ್ರ ಸರ್ಕಾರ ಮತ್ತು ಸಚಿವಕರನ್ನ ಹಿಗ್ಗಾಮುಗ್ಗಾ ಝಾಡಿಸುತ್ತಿದ್ದಾಗ ಖಾನಾಪುರದ ಮಾಜಿ ಎಂಇಎಸ ಶಾಸಕ ಅರವಿಂದ ಪಾಟೀಲ ಪ್ರೇಸ್ಮೀಟನಲ್ಲಿ ಮೌನವಾಗಿ ನಿಂತುಕೊಂಡಿದ್ದರು. ಎಂಇಎಸ ಮುಖಂಡನ ಮುಂದೆ ನಾಡ ವಿರೋಧಿಗಳಿಗೆ ಡಿಸಿಎಂ ಲಕ್ಷ್ಮಣ ಸವದಿ ತಮ್ಮ ಮಾತಿನ ಮೂಲಕ ಕನ್ನಡಿಗರ ಪರವಾಗಿ ಬಿಸಿ ಮುಟ್ಟಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಸರ್ಕಾರದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಮಾಜಿ ಸಂಸದ ರಮೇಶ ಕತ್ತಿ, ಶಾಸಕ ಮಹಾಂತೇಶ ದೊಡ್ಡಗೌಡರ ಇದ್ದರು.