ವೈಮನಸ್ಸು ಬಿಟ್ಟು ಒಂದಾಗಿದ್ದೇವೆ, ಮಂತ್ರಿ ಮಾಡುವಂತೆ ಕೇಳ್ತಿವಿ:ಡಿಸಿಎಂ ಲಕ್ಷ್ಮಣ ಸವದಿ

ಶ್ರೀನಿವಾಸ ಪಟ್ಟಣ
ಬೆಳಗಾವಿ: ನಮ್ಮಲ್ಲಿನ ವೈಮನಸ್ಸು ಬಿಟ್ಟು ನಾವೇಲ್ಲರೂ ಒಂದಾಗಿದ್ದೇವೆ. ಮುಂದಿನ ದಿನಗಳಲ್ಲಿ ಉಮೇಶ ಕತ್ತಿ ಅವರಿಗೆ ಮಂತ್ರಿ ಪದವಿ ನೀಡುವಂತೆ ಎಲ್ಲರೂ ಒಟ್ಟಾಗಿ ಬೇಡಿಕೆ ಈಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಗುರುವಾರ ಬೆಳಗಾವಿಯಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಜಿಲ್ಲೆ ಹಿತದೃಷ್ಟಿ, ಬ್ಯಾಂಕಿನ ಹಿತ್ ದೃಷ್ಟಿ, ಜಿಲ್ಲೆ ರೈತರ ಏಳಿಗೆಗಾಗಿ ಅವಿರೋಧ ಆಯ್ಕೆ ಮಾಡುವಂತೆ ಪಕ್ಷದ ವರಿಷ್ಠರು, ಸಂಘ ಪರಿವಾರದ ಸಲಹೆ, ಬಾಲಚಂದ್ರ ಜಾರಕಿಹೊಳಿ, ಉಮೇಶ ಕತ್ತಿ ಸೇರಿ ಎಲ್ಲಾ ಬಿಜೆಪಿ ಶಾಸಕರು, ನಾಯಕರು ಒಂದಾಗಿದ್ದೇವೆ.

ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಬದಿಗಿಟ್ಟು ಒಂದಾಗಿ ಹೋಗಬೇಕೆಂದು ನಿರ್ಧಾರ ಮಾಡಿದ್ದೇವೆ. ಜಿಲ್ಲೆಯ ರಾಜಕಾರಣದ ಹಿತ ದೃಷ್ಟಿಯಿಂದ ನಾವೇಲ್ಲರೂ ಒಂದಾಗಿ ಹೋಗಬೇಕೆಂದು ಎಲ್ಲಾ ವ್ಯತ್ಯಾಸಗಳನ್ನ ತೆಗೆದು ಹಾಕಿ ಒಟ್ಟಾಗಿ ಹೋಗಬೇಕೆಂದು ನಿರ್ಧಾರ ಮಾಡಿದ್ದೇವೆ. ವೈಮನಸ್ಸು ಬಿಟ್ಟು ಒಂದಾಗಿದ್ದೇವೆ.
ಬೆಳಗಾವಿ ಡಿಸಿಸಿ ಬ್ಯಾಂಕಿನ 16 ಸ್ಥಾನಗಳನ್ನ ಅವಿರೋಧ ಮಾಡಬೇಕೆಂದು ತೀರ್ಮಾನ ಮಾಡಿದ್ದೇವೆ. ಅದರಂತೆ ಡಿಸಿಸಿ ಬ್ಯಾಂಕ್ ಅಭಿವೃದ್ಧಿಯತ್ತ ಕರೆದುಕೊಂಡು ಹೋಗುತ್ತೇವೆ. ಪಕ್ಷದ ವರಿಷ್ಠರು ಮಾರ್ಗದರ್ಶನದಂತೆ ನಾವು ನಿರ್ಧಾರ ಮಾಡಿದ್ದೇವೆ. ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಪಕ್ಷದ ವರಿಷ್ಠರು ಎಲ್ಲಾ ಬಿಜೆಪಿ ನಾಯಕರು ಒಂದಾಗಿ ಕೆಲಸ ಮಾಡುವಂತೆ ಹೇಳಿದ್ದಾರೆ. ಈ ಹಿಂದೆ ವೈಮನಸ್ಸು ಇತ್ತು. ಈಗ ನಾವೇಲ್ಲರೂ ಒಂದಾಗಿದ್ದೇವೆ. ಮುಂದಿನ 20 ವರ್ಷಗಳ ಕಾಲ ಕರ್ನಾಟಕ ಮತ್ತು ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯ ಇರಬೇಕೆಂದು ನಾವೇಲ್ಲರೂ ಒಂದಾಗಿ ಹೋಗುತ್ತೇವೆ.
ಇನ್ನು ಮಾಜಿ ಸಚಿವ ಉಮೇಶ ಕತ್ತಿಯವರಿಗೆ ಸಚಿವ ಸ್ಥಾನ ನೀಡುವಂತೆ ನಾವು ಕೇಳುತ್ತೇವೆ. ನಾವೇಲ್ಲರೂ ಒಂದಾಗಿದ್ದೇವೆ. ಉಮೇಶ ಕತ್ತಿ ಅವರಿಗೆ ಮಂತ್ರಿ ಪದವಿ ಕೊಡಬೇಕೆಂದು ಬೇಡಿಕೆ ಈಡಬೇಕಾದ ನಮ್ಮ ಆದ್ಯ ಕರ್ತವ್ಯ. ಆ ಕೆಲಸವನ್ನ ನಾವೇಲ್ಲರೂ ಒಂದಾಗಿ ಮಾಡ್ತಿವಿ. ನಮ್ಮಲ್ಲಿ ವ್ಯತ್ಯಾಸಗಳು ಬಂದಾಗ ರಾಜಗುರು ಮಾರ್ಗದರ್ಶನ ಮಾಡುವ ಕೆಲಸವನ್ನ ಪಕ್ಷದ ವರಿಷ್ಠರು ಗುರುವಿನ ಸ್ಥಾನದಲ್ಲಿ ನಿಂತುಕೊಂಡು ಮಾಡಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.