ಬೆಳಗಾವಿ ಫೇಸಬುಕ್ ಪುಟದಲ್ಲಿ ಕನ್ನಡ ರಾಜ್ಯೋತ್ಸವ ಝಲಕ್..!

ಶ್ರೀನಿವಾಸ ಪಟ್ಟಣ/ಮಹಾಂತೇಶ ಇರಳಿ
ಬೆಳಗಾವಿ: ನವಂಬರ 1 ಬಂದ್ರೆ ಸಾಕು ಎಲ್ಲರ ಹೆಜ್ಜೆ ಕುಂದಾನಗರಿ ಬೆಳಗಾವಿಯತ್ತ ಇರುತ್ತದೆ. ಯಾಕಂದ್ರೆ ಕನ್ನಡ ರಾಜ್ಯೋತ್ಸವವನ್ನ ಅದ್ಧೂರಿಯಾಗಿ ಆಚರಿಸಬೇಕು. ನಾಡವಿರೋಧಿಗಳಿಗೆ ಕನ್ನಡಿಗರ ಸ್ವಾಭಿಮಾನ, ಅಭಿಮಾನ ಕಿಚ್ಚು ಪ್ರದರ್ಶಿಸುವ ದಿನ. ಈ ಬಾರಿ ಬೆಳಗಾವಿಯಲ್ಲಿ ರಾಜ್ಯೋತ್ಸವದ ಮೇರಗೂ ಇಲ್ಲದಿದ್ದರೂ.. ಬೆಳಗಾವಿ ಫೇಸಬುಕ್ ಖಾತೆಯಲ್ಲಿ ಬೆಳಗಾವಿ ರಾಜ್ಯೋತ್ಸವದ ವೈಭವವನ್ನ ನಾವು ನೋಡಬಹುದಾಗಿದೆ.

ಆದ್ರೆ ಈ ಬಾರಿ ಕೊರೊನಾ ಕಾರಣದಿಂದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವದ ಅದ್ಧೂರಿಗೆ ಬ್ರೇಕ್ ಬಿದ್ದಿದೇ. ಆದ್ರು ಬೆಳಗಾವಿ ಜಿಲ್ಲಾಡಳಿತ ಮತ್ತು ಕನ್ನಡಪರ ಹೋರಾಟಗಾರರು ಒಂದಾಗಿ ಸರಳ ಕನ್ನಡ ರಾಜ್ಯೋತ್ಸವ ಆಚರಿಸಲು ನಿರ್ಧರಿಸಿದ್ದಾರೆ. ಹಾಗೇ ನೋಡಿದ್ರೆ ಈ ಬಾರಿ ಕನ್ನಡ ರಾಜ್ಯೋತ್ಸವ ಇನ್ನು ಅದ್ಧೂರಿಯಿಂದ ಆಚರಿಸಲು ಕನ್ನಡಿಗರು ತೀರ್ಮಾನಿಸಿದ್ದರು. ಯಾಕಂದ್ರೆ ಬಾರಿ ಬೆಳಗಾವಿಯಲ್ಲಿ ತಾಯಿ ಚನ್ನಮ್ಮಳ ಬಲಗೈ ಬಂಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಕೂಡಾ ಪೀರನವಾಡಿಯಲ್ಲಿ ಅನಾವರಣಗೊಂಡಿದೆ. ಹೀಗಾಗಿ ಕನ್ನಡಿಗರು ಜೈ ಚನ್ನಮ್ಮ ಜೈ ರಾಯಣ್ಣನ ಘೋಷಣೆಗಳನ್ನ ಮೂಳಗಿಸಲು ಉತ್ಸುಕರಾಗಿದ್ದರು. ಆದ್ರೆ ಕೊರೊನಾ ಕಾರಣದಿಂದ ಉತ್ಸುವವನ್ನ 2021ರ ರಾಜ್ಯೋತ್ಸವದ ವರೆಗೂ ಗಟ್ಟಿಯಾಗಿ ಕನ್ನಡಿಗರು ಹಿಡಿದಿಟ್ಟುಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಅತ್ತ ನಾಡವಿರೋಧಿ ಎಂಇಎಸನವರಿಗೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕನ್ನಡ ರಾಜ್ಯೋತ್ಸವದಂದು ಕರಾಳ ದಿನಕ್ಕೆ ಅವಕಾಶ ನೀಡುತ್ತಿಲ್ಲ.

ಹಾಗಂತ ಈ ಬಾರಿಯ ಬೆಳಗಾವಿಯ ಕನ್ನಡ ರಾಜ್ಯೋತ್ಸವವನ್ನ ಲಕ್ಷಾಂತರ ಕನ್ನಡಿಗರು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಕೊರಗುತ್ತಿದ್ದಾರೆ. ಹೀಗೆ ಯಾರು ಕನ್ನಡಿಗರು ಕೊರಗುವುದು ಅಗತ್ಯವಿಲ್ಲ. ಯಾಕಂದ್ರೆ ಬೆಳಗಾವಿ ಫೇಸಬುಕ್ ಖಾತೆಗೆ ಒಮ್ಮೆ ಭೇಟಿ ಕೊಟ್ಟರೇ ಸಾಕು ನಾವು ಅಂದುಕೊಂಡ ಕನ್ನಡ ರಾಜ್ಯೋತ್ಸವದ ಸಂಭ್ರಮ ಕಣ್ಣಮುಂದೆ ಬರುತ್ತದೆ. ಈ ಫೇಸಬುಕ್ ಖಾತೆಯಲ್ಲಿ 2019ರ ಕನ್ನಡ ರಾಜ್ಯೋತ್ಸವದ ವೈಭವದ ದೃಶ್ಯಗಳು, ಸನ್ನಿವೇಶಗಳು ಹಾಗೂ ಕನ್ನಡಿಗರ ಕನ್ನಡಾಭಿಮಾನದ ಅಸಂಖ್ಯಾತ ವಿಡಿಯೋಗಳು ನಮಗೆ ಲಭ್ಯವಾಗುತ್ತದೆ. ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಸಂಭ್ರಮದ ಕ್ಷಣಗಳನ್ನ ಮತ್ತೆ ಮೇಲಕು ಹಾಕುವಂತೆ ಮಾಡುತ್ತಿದ್ದಾರೆ ಬೆಳಗಾವಿ ಫೇಸ್ ಖಾತೆ ಸಂಸ್ಥಾಪಕ, ಅಪ್ಪಟ ಕನ್ನಡಿಗ ಕಿರಣ ಮಾಳನ್ನವರ ನೇತೃತ್ವದ ತಂಡ. ಹಾಗಾದ್ರೆ ಈ ಬಾರಿಯೂ ನಾವೇ ಎಲ್ಲಿಯೇ ಇದ್ದರೂ ಹೇಗೆ ಇದ್ದರೂ ಎಂದೆಂದಿಗೂ ಕನ್ನಡಿಗರಾಗಿದ್ದೇವೆ ಎಂಬುದನ್ನ ಜಗತ್ತಿಗೆ, ನಾಡವಿರೋಧಿಗಳಿಗೆ ತೋರಿಸುವ ಕೊಡುವ ಕಾರ್ಯವನ್ನ ಮಾಡೋಣಾ ಅಲ್ವಾ.