ನಾವು ಒಂದಾಗಿದ್ದೇವೆ ಅವರು ಒಂದಾಗಿ ಕಾಣಿಸಿಕೊಳ್ಳತ್ತಾರೆ;ಬಾಲಚಂದ್ರ ಜಾರಕಿಹೊಳಿ

ಮಹಾಂತೇಶ ಇರಳಿ
ಬೆಳಗಾವಿ: ಬಿಜೆಪಿ ಪಕ್ಷದ ಎಲ್ಲಾ ನಾಯಕರೂ ಹೊಂದಾಣಿಕೆ ಮಾಡಿಕೊಂಡು ಒಂದಾಗಿದ್ದೇವೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ, ಡಿಸಿಎಂ ಲಕ್ಷ್ಮಣ ಸವದಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಕೆಎಂಎಫ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ರಮೇಶ ಜಾರಕಿಹೊಳಿ, ಲಕ್ಷ್ಮಣ ಸವದಿ ಇಬ್ಬರು ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಿದರು.
ಇನ್ನು 5 ವರ್ಷದ ಹಿಂದೆ ಅಂದ್ರೆ 2015ರಲ್ಲಿ ಇದೇ ಡಿಸಿಸಿ ಬ್ಯಾಂಕ ಚುನಾವಣೆಯಿಂದ ನಮ್ಮೇಲ್ಲರ ಸಂಬಂಧಗಳು ಹಾಳಾಗಿದ್ದವು. ಇವತ್ತು ಮತ್ತೆ ಎಲ್ಲಾ ಹಿರಿಯರು, ದೇವರ ಆಶೀರ್ವಾದದಿಂದ ಇದೇ ಡಿಸಿಸಿ ಬ್ಯಾಂಕ ಚುನಾವಣೆಯಿಂದ ನಾವೇಲ್ಲರೂ ಒಂದಾಗಿದ್ದೇವೆ. ಈ ಡಿಸಿಸಿ ಬ್ಯಾಂಕ್ ದೊಡ್ಡ ಬ್ಯಾಂಕ್ ಆಗಿದೆ.

ರಾಜ್ಯದಲ್ಲಿ ನಂಬರ್ 1 ಬ್ಯಾಂಕ್ ಇದೇ. ರೈತರಿಗೆ, ಗ್ರಾಹಕರಿಗೆ ಒಳ್ಳೆಯದಾಗಬೇಕು. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಮಾಜಿ ಸಚಿವ ಉಮೇಶ ಕತ್ತಿ ಈ ಮೂವರು ನಾಯಕರ ನಾಯಕತ್ವದಲ್ಲಿ ಮುಂದಿನ ದಿನಗಳಲ್ಲಿ ಹೊಂದಾಣಿಕೆ ಮಾಡಿಕೊಂಡ ರಾಜಕಾರಣ ಮಾಡ್ತಿವಿ. ಭಿನ್ನಾಭಿಪ್ರಾಯ ಇರದಂತೆ ರಾಜಕಾರಣ ಮಾಡಲು ತೀರ್ಮಾನಕ್ಕೆ ಬಂದಿದ್ದೇವೆ.

ಅಲ್ಲದೇ, ಮುಂದೆ ಬರುವ ಬೆಳಗಾವಿ ಲೋಕಸಭೆ, ಗ್ರಾಮ ಪಂಚಾಯಿತಿ ಸೇರಿ ಎಲ್ಲಾ ಚುನಾವಣೆಗಳಲ್ಲಿ ಒಂದಾಗಿ ಹೋಗುತ್ತೇವೆ. ಇನ್ನು 2023ರ ವಿಧಾನಸಭೆ ಚುನಾವಣೆಯಲ್ಲೂ ಈ ಮೂವರ ನಾಯಕರ ನೇತೃತ್ವದಲ್ಲಿ ಒಂದಾಗಿ ಹೋಗಿ ಬಿಜೆಪಿ ಪಕ್ಷವನ್ನ ಗಟ್ಟಿಯಾಗಿ ಕಟ್ಟಿ ಬೆಳೆಸುವ ಕೆಲಸ ಮಾಡುತ್ತೇವೆ. ಈಗ 25 ಕೋಟಿ ಲಾಭವಾಗಿದೆ. ಮುಂದಿನ ದಿನಗಳಲ್ಲಿ 50 ರಿಂದ 100 ಕೋಟಿ ರುಪಾಯಿ ಲಾಭ ಆಗಲು ಶ್ರಮಿಸುತ್ತೇವೆ ಎಂದು ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದ್ದಾರೆ.