ಬೆಳಗಾವಿ ಡಿಸಿಸಿ ಬ್ಯಾಂಕನಲ್ಲಿ ತ್ರೀಮೂರ್ತಿಗಳ ಸಭೆ

ಮಹಾಂತೇಶ ಇರಳಿ/ಶ್ರೀನಿವಾಸ ಪಟ್ಟಣ
ಬೆಳಗಾವಿ: ಬೆಳಗಾವಿ ಡಿಸಿಸಿ ನಿರ್ದೇಶಕ ಚುನಾವಣೆ ಕಾವು ರಂಗೇರಿದೆ. ಇಂದು ಘಟಾನುಘಟಿ ನಾಯಕರು ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಡಿಸಿಸಿ ಬ್ಯಾಂಕ್ ಫೈಟ್ ನಲ್ಲಿ ಬಣಗಳ ಕಿತ್ತಾಟವಿದ್ದರೂ, ತ್ರೀಮೂರ್ತಿಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ್ರು. ಹಾಗಾದ್ರೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಈ ತ್ರೀಮೂರ್ತಿಗಳು ಒಂದಾದ್ರಾ…?
ಹೌದು.. ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯತ್ತ ಇಡೀ ಕರ್ನಾಟಕ ರಾಜ್ಯವೇ ನೋಡುತ್ತಿದೆ. ನವೆಂಬರ್ 6 ರಂದು ಡಿಸಿಸಿ ಬ್ಯಾಂಕ್ ಚುನಾವಣೆ ಗೆ ಮತದಾನ ನಡೆಯಲಿದೆ. ಇಂದು ಡಿಸಿಎಂ ಲಕ್ಷ್ಮಣ ಸವದಿ, ಮಾಜಿ ಅಧ್ಯಕ್ಷ ರಮೇಶ್ ಕತ್ತಿ, ಶಾಸಕರಾದ ಆನಂದ ಮಾಮನಿ, ಅಂಜಲಿ ನಿಂಬಾಳಕರ, ಮಹಾಂತೇಶ ದೊಡ್ಡಗೌಡರ, ಈರಣ್ಣ ಕಡಾಡಿ ಪುತ್ರ ಹಾಗೂ ಮಾಜಿ ಶಾಸಕರು ನಾಮಪತ್ರವನ್ನ ಸಲ್ಲಿಕೆ ಮಾಡಿದ್ದಾರೆ.
ಇಂದು ಸಂಜೆಯೇ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಭವಿಷ್ಯ ನಿರ್ಧಾರವಾಗಲಿದೆ. ನಾಮಪತ್ರ ಸಲ್ಲಿಕೆ ವೇಳೆ ಡಿಸಿಎಂ ಲಕ್ಷ್ಮಣ ಸವದಿ, ಕೆಎಂಎಫ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಮಾಜಿ ಸಚಿವ ಉಮೇಶ ಕತ್ತಿ ಒಂದೇಡೆ ಸೇರಿ ಸಮಾಲೋಚನೆ ನಡೆಸಿದ್ರು. ಈ ಸವದಿ, ಜಾರಕಿಹೊಳಿ, ಕತ್ತಿ ಮೂವರು ತ್ರೀಮೂರ್ತಿಗಳು ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಯಾಕೆಂದರೆ ಬಿಜೆಪಿ ವರಿಷ್ಠರು ಮತ್ತು ಆರ.ಎಸ.ಎಸ ಸೂಚನೆಯಂತೆ, ಈ ಮೂವರು ತ್ರೀಮೂರ್ತಿಗಳು ಒಂದಾಗಿದ್ದಾರೆ. ಹೀಗಾಗಿ ಅವಿರೋಧ ಆಯ್ಕೆ ಪಕ್ಕಾ ಆಗಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಬಳಿಕ ಸಂಜೆ 4 ಗಂಟೆಗೆ ಬಾಲಚಂದ್ರ ಜಾರಕಿಹೊಳಿ ಮತ್ತು ಉಮೇಶ ಕತ್ತಿ ಕರೆದಿರುವ ಪ್ರೇಸ್ಮೀಟ್ ನಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ. ಸಧ್ಯದ ಮೂಲಗಳ ಪ್ರಕಾರ 16 ಸ್ಥಾನಗಳ ಪೈಕಿ ಬಾಲಚಂದ್ರ ಜಾರಕಿಹೊಳಿ ಬಣಕ್ಕೆ 6 ಸ್ಥಾನ, ಡಿಸಿಎಂ ಲಕ್ಷ್ಮಣ ಸವದಿ ಬಣಕ್ಕದ 6 ಸ್ಥಾನ ಹಾಗೂ ಉಮೇಶ ಕತ್ತಿ ಬಣಕ್ಕೆ 4 ಸ್ಥಾನದ ಸಂಧಾನ ಸೂತ್ರವನ್ನ ರೂಪಿಸಿ, ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಆದ್ರೆ ಖಾನಾಪುರ ಕ್ಷೇತ್ರದಿಂದ ಸವದಿ ಬೆಂಬಲಿತ ಮಾಜಿ ಶಾಸಕ ಅರವಿಂದ್ ಪಾಟೀಲ ಮತ್ತು ಜಾರಕಿಹೊಳಿ, ಕತ್ತಿ ಬೆಂಬಲಿತೆ ಅಂಜಲಿ ನಿಂಬಾಳಕರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮತ್ತೆ ರಮೇಶ್ ಕತ್ತಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗುವುದು ಖಚಿತವಾಗಿದೆ. ಉಪಾಧ್ಯಕ್ಷ ಸ್ಥಾನ ಸವದಿಗೆ ಬಣಕ್ಕೆ ಬಿಟ್ಟುಕೊಡಲಾಗಿದೆ ಎಂದು ಹೇಳಲಾಗುತ್ತಿದೆ. ಖಾನಾಪುರದಲ್ಲಿ ಫೈಟ್ ನಡೆಯುವ ಸಾಧ್ಯತೆಯಿದೆ.