ರಮೇಶ ಜಾರಕಿಹೊಳಿಗೆ ಅನ್ಯಾಯವಾಗಿದೇ!

ಶ್ರೀನಿವಾಸ ಪಟ್ಟಣ
ಬೆಳಗಾವಿ: ಪಂಚಮಸಾಲಿ ಸಮುದಾಯದ ಅಷ್ಟೇ ಅಲ್ಲ ರಮೇಶ್ ಜಾರಕಿಹೊಳಿ ಅವರಿಗೂ ಅನ್ಯಾಯವಾಗಿದೆ ಎಂದು ಶ್ರೀಗಳು ದಿಲ್ಲಿಯಲ್ಲಿ ಹೇಳಿದ್ದರು ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ಸುವರ್ಣ ವಿಧಾನ ಸೌಧ ಮುಂದೆ ಪ್ರತಿಭಟನಾ ವೇದಿಕೆಯಲ್ಲಿ ಮನವಿ ಸ್ವೀಕರಿಸಿ ಅವರು ಮಾತನಾಡಿದ್ರು. ಚುನಾವಣೆ ನೀತಿ ಸಂಹಿತೆ ಇರುವುದರಿಂದ ನಾವೇನೂ ಆಶ್ವಾಸನೆ ಕೊಡಲು ಆಗುವುದಿಲ್ಲ.ಈಗ ನಾನು ನೇರವಾಗಿ ಬೆಂಗಳೂರಿಗೆ ಹೋಗಿ ಸಿಎಂ ಬಿಎಸ್‌ವೈಗೆ ಸಮಾಜದ ಮನವಿ ತಿಳಿಸುತ್ತೇನೆ. ಅಲ್ಲದೇ ಕಳೆದ 10 ವರ್ಷಗಳಿಂದ ನಮ್ಮ ಮೇಲೆ ಸ್ವಾಮೀಜಿಗಳ ಆಶೀರ್ವಾದ ಇದೆ. ಹಿಂದೆ 2013 – 18ರ ಅವಧಿಯ ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮಂತ್ರಿ ಸ್ಥಾನಕ್ಕೆ ಮನವಿ ಮಾಡಿದ್ರು. ಅವಾಗ ದೆಹಲಿಗೆ ತೆರಳಿ ದಿಗ್ವಿಜಯ ಸಿಂಗ್‌ಗೆ ಭೇಟಿಯಾಗಿದ್ದೆವು. ವಿನಯ್ ಕುಲಕರ್ಣಿ ಅವರನ್ನು ಸಚಿವರನ್ನಾಗಿ ಮಾಡಬೇಕು ಅಂತಾ ಶ್ರೀಗಳು ಹೇಳಿರಲಿಲ್ಲ.ನಮ್ಮ ಸಮಾಜದ ಯಾರನ್ನಾದರೂ ಒಬ್ಬರನ್ನು ಮಂತ್ರಿ ಮಾಡುವಂತೆ ಮನವಿ ಮಾಡಿದ್ರು. ಇದಾದ ಮೇಲೆ ವಿನಯ್ ಕುಲಕರ್ಣಿ ಮಂತ್ರಿಯಾದರು. ಜೊತೆಗೆ ರಮೇಶ್ ಜಾರಕಿಹೊಳಿಗೂ ಸಹ ಅನ್ಯಾಯವಾಗಿದೆ. ಅವರನ್ನು ಮಂತ್ರಿ ಮಾಡಬೇಕೆಂದು ಆಗ್ರಹಿಸಿದ್ರು. ಕೇವಲ ಒಂದೇ ಸಮುದಾಯ ಅಲ್ಲ ಎಲ್ಲಾ ಸಮುದಾಯ ಮೇಲೆ ಶ್ರೀಗಳಿಗೆ ಪ್ರೀತಿ ಇದೆ ಎಂದು ಸಚಿವ ರಮೇಶ್ ಜಾರಕಿಹೊಳಿ