ಮತ್ತೆ ಲಕ್ಷ್ಮೀ ಹೆಬ್ಬಾಳಕರ ಸವಾಲು ಹಾಕಿದ್ದಾರೇ.. ಕುಂದಾ ಇಲ್ಲಾ ಬಂಗಾರ ಬಳೆ ಚಾಲೇಂಜ್

ಮಹಾಂತೇಶ ಇರಳಿ
ಬೆಳಗಾವಿ: ಮಾಜಿ ಸಚಿವ ಮುರಗೇಶ ನಿರಾಣಿಗೆ ಕುಂದಾ ಇಲ್ಲಾ ಬಂಗಾರದ ಬಳೆಯ ಸವಾಲು ಹಾಕಿದ್ದಾರೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ.
ಬೆಳಗಾವಿ ಸುವರ್ಣ ಸೌಧ ಮುಂದೆ ನಡೆಯುತ್ತಿರುವ ಪಂಚಮಸಾಲಿ ಮೀಸಲಾತಿ ಹೋರಾಟದ ವೇದಿಕೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ ಗುಡುಗಿದ್ದಾರೆ. ವೇದಿಕೆ ಮೇಲಿದ್ದ ಮುರುಗೇಶ್ ನಿರಾಣಿಗೆ ಸವಾಲ್ ಹಾಕಿದ್ದಾರೆ ಲಕ್ಷ್ಮೀ ಹೆಬ್ಬಾಳ್ಕರ್. ಮುಂಬರುವ ದಿನಗಳಲ್ಲಿ ಈ ಸರ್ಕಾರ, ಯಡಿಯೂರಪ್ಪ ಸಾಹೇಬ್ರು 2 ಎ ಮೀಸಲಾತಿ ನೀಡ್ತಾರೆಂಬ ವಿಶ್ವಾಸವಿದೆ. ಅವರು ಕೊಡಲಿಲ್ಲ ಅಂದ್ರೆ ಮುಂದೆ ಕಾಂಗ್ರೆಸ್ ಸರ್ಕಾರ ಬರುತ್ತೆ ನಾವು ಆಗ ಮೀಸಲಾತಿ ನೀಡಿಯೇ ನೀಡ್ತೀವಿ. ಈ ಸರ್ಕಾರ ಮಾಡದಿದ್ರೆ ಮುಂದಿನ ಸರ್ಕಾರದಲ್ಲಿ ನಾವು ಮಾಡಿಸ್ತೀವಿ ಅಂತಾ ನನಗೆ ವಿಶ್ವಾಸವಿದೆ. ಇದು ಅಣ್ಣನಿಗೆ ತಂಗಿಗೆ ಸವಾಲು ಎಂದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಅಣ್ಣನಿಗೆ ತಂಗಿಯ ಸವಾಲ್, ಪ್ರತಿಷ್ಠೆಗಾಗಿ ಸವಾಲ್ ಅಲ್ಲ, ಸಮಾಜಕ್ಕಾಗಿ ಸವಾಲ್ ಅಂದ್ರು. ಮೀಸಲಾತಿಯನ್ನ ಬಿಜೆಪಿ ಸರ್ಕಾರದಲ್ಲಿ ಮಾಡಿಸಿದ್ರೆ ಬೆಳಗಾವಿಯಿಂದ ಕುಂದಾ ತಗೊಂಡು ನಿನ್ನ ಮನೆಗೆ ಬರ್ತೀನಿ. ನಾನು ಮಾಡಿಸಿದ್ರೆ ನನಗೆ ನಾಲ್ಕು ಬಂಗಾರದ ಬಳೆ ನೀನು ಮಾಡಿಸಬೇಕು ಅಂದ್ರು. ಇನ್ನೂ ಇದಕ್ಕೆ ಸಚಿವ ಮುರಗೇಶ ನಿರಾಣಿ ಸಹ ಪ್ರತಿಕ್ರಿಯೆ ನೀಡಿದ್ರು. ಇಲ್ಲಿ ನಾನು ನೀನು ಅಂತಾ ಏನು ಇಲ್ಲ. ಎಲ್ಲರೂ ಒಟ್ಟಾಗಿ ಸಮಾಜದ ಕೆಲಸವನ್ನ ಮಾಡೋಣಾ. ಇಲ್ಲಿ ರಾಜಕೀಯವನ್ನ ಬದಿಗಿಟ್ಟು ಒಂದಾಗಿ ಮೀಸಲಾತಿ ದೊರೆಯುವಂತೆ ಹೋರಾಟ ಮಾಡೋಣಾ ಎಂದು ಲಕ್ಷ್ಮೀ ಹೆಬ್ಬಾಳಕರ ಹಾಕಿದ ಸವಾಲಿಗೆ ನಿರಾಣಿ ಉತ್ತರಿಸಿದ್ರು.