ಬಿಎಸವೈಗೆ ಕಿಂಗ್ ಮಾಡಿ ಮೇಕರ್ ಆದ್ರು ಜಾರಕಿಹೊಳಿ

ಮಹಾಂತೇಶ ಇರಳಿ
ಬೆಳಗಾವಿ: ರಮೇಶ್ ಜಾರಕಿಹೊಳಿ ಕಿಂಗ್ ಆಗಲಿಲ್ಲ ಕಿಂಗ್ ಮೇಕರ್ ಆದ್ರು ಎಂದು ಪಂಚಮಸಾಲಿ ಸಮುದಾಯದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ
ನಗರದ ಸುವರ್ಣ ಸೌಧದ ಮುಂದೆ ಪ್ರತಿಭಟನಾ ವೇದಿಕೆಯಲ್ಲಿ ಮಾತನಾಡಿದ ಸ್ವಾಮೀಜಿ ಅವರು, ತುರ್ತಾಗಿ ಇಂದು ಸಚಿವ ರಮೇಶ್ ಜಾರಕಿಹೊಳಿ ಬೆಂಗಳೂರಿಗೆ ಹೋಗಬೇಕಿತ್ತು. ಯಾಕೆಂದರೆ ಜಲಸಂಪನ್ಮೂಲ ಇಲಾಖೆಯ ಮಹತ್ವದ ಸಭೆ ಇತ್ತು. ಆದರೆ ನಿನ್ನೆ ನನ್ನ ಭೇಟಿಯಾದಾಗ ಉಪವಾಸ ಸತ್ಯಾಗ್ರಹ ಬಗ್ಗೆ ತಿಳಿಸಿದ್ದೆ. ತಮ್ಮ ಎಲ್ಲಾ ಕಾರ್ಯಕ್ರಮ ರದ್ದುಗೊಳಿಸಿ ಇಂದು ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ್ದಾರೆ. ಗೋಕಾಕ್ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಲಿಂಗಾಯತ ಪಂಚಮಸಾಲಿ ಸಮುದಾಯವಿದೆ. ಗೋಕಾಕ್ನಲ್ಲಿ ಸತತವಾಗಿ ಐದು ಬಾರಿ ರಮೇಶ ಜಾರಕಿಹೊಳಿ ಶಾಸಕರಾಗಿದ್ದಾರೆ. ಅದೇ ರೀತಿ ಪಂಚಮಸಾಲಿ ಸಮುದಾಯದ ಮೇಲೂ ರಮೇಶ್ ಜಾರಕಿಹೊಳಿಗೆ ಪ್ರೀತಿ ಇದೆ. ಮತ್ತೊಮ್ಮೆ ಯಡಿಯೂರಪ್ಪ ಸಿಎಂ ಆಗಲು ರಮೇಶ್ ಜಾರಕಿಹೊಳಿ ಕಾರಣ. ರಮೇಶ್ ಜಾರಕಿಹೊಳಿ ತಾವೇ ಕಿಂಗ್ ಆಗದೇ ಕಿಂಗ್ ಮೇಕರ್ ಆದ್ರು. ಕಿಂಗ್ನ್ನು ಯಡಿಯೂರಪ್ಪ ರನ್ನು ಮಾಡಿ ರಮೇಶ್ ಜಾರಕಿಹೊಳಿ ಕಿಂಗ್ ಮೇಕರ್ ಆದ್ರು. ಇದು ಯಡಿಯೂರಪ್ಪ ಸೇರಿ ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಸರ್ಕಾರದ ಪ್ರತಿನಿಧಿಯಾಗಿ ರಮೇಶ್ ಜಾರಕಿಹೊಳಿ ಬಂದಿದ್ದಾರೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.