ಋಣ ತೀರಿಸುವೆ ಡಿಸಿಎಂ ಲಕ್ಷ್ಮಣ ಸವದಿ ಭರವಸೆ

ಶ್ರೀನಿವಾಸ ಪಟ್ಟಣ
ಬೆಳಗಾವಿ:ಪಂಚಮಸಾಲಿ ಸಮುದಾಯದ ಋಣ ತೀರಿಸುವೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನ ಸೌಧ ಮುಂದೆ ನಡೆದ ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟದ ವೇದಿಕೆಯಲ್ಲಿ ಅವರು ಮನವಿ ಸ್ವೀಕರಿಸಿ ಮಾತನಾಡಿದ್ರು. ಪಂಚಮಸಾಲಿ ಸಮಾಜದ ಋಣ ಭಾರ ನನ್ನ ಮೇಲಿದೆ. ಒಬ್ಬ ರೈತ ಕುಟುಂಬದಿಂದ ಬಂದ ನನ್ನನ್ನ ರಾಜ್ಯಕ್ಕೆ ಪರಿಚಯ ಮಾಡಿಸುವಲ್ಲಿ ಪಂಚಮಸಾಲಿ ಸಮುದಾಯದ ಪಾತ್ರ ದೊಡ್ಡದಿದೆ.ನಾನು ವಿಧಾನಸಭೆಯ ಮೂರುನೇ ಮೆಟ್ಟಿಲು ಏರಲು ಸಮುದಾಯ ಕೊಡುಗೆ ನೀಡಿದೆ.ಈ ಋಣವನ್ನು ತೀರಿಸಿವ ಕೆಲಸವನ್ನು ಮಾಡುತ್ತೇನೆ ಎಂದು ಲಕ್ಷ್ಮಣ ಸವದಿ ಭರವಸೆ ನೀಡಿದರು. ಇನ್ನೂ ಇದೇ ಸಂದರ್ಭದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಅವರೊಂದಿಗೆ ಸಿಎಂ ಯಡಿಯೂರಪ್ಪನವರು ಕರೆ ಮಾತನಾಡಿದ್ರು. ಸಿಎಂ ಸಂದೇಶವನ್ನು ಲಕ್ಷ್ಮಣ ಸವದಿ ವೇದಿಕೆಯಲ್ಲಿ ಹೇಳಿದ್ರು. ಸಿಎಂ ಎಲ್ಲಾ ಶಾಸಕರನ್ನು ಕರೆದಿಕೊಂಡು ಬರುವಂತೆ ಸೂಚನೆ ನೀಡಿದ್ದಾರೆ. ಸಿಎಂ ಮನವರಿಕೆ ಮಾಡಿಕೊಟ್ಟು ನ್ಯಾಯ ಕೊಡಿಸುತ್ತೇವೆ. ಪಂಚಮಸಾಲಿ ಸಮುದಾಯದ ಬೇಡಿಕೆಗೆ ಸ್ಪಂದಿಸುವ ನಿಟ್ಟಿನಲ್ಲಿ ಪೂರಕವಾದ ತೀರ್ಮಾನವನ್ನ ಸರ್ಕಾರ ಮಾಡಲಿದೆ ಎಂದು ಲಕ್ಷ್ಮಣ ಸವದಿ ಸರ್ಕಾರದ ಪರವಾಗಿ ಭರವಸೆ ನೀಡಿದ್ರು. ಅನಂತರ ಲಕ್ಷ್ಮಣ ಸವದಿ ಅವರ ಮನವಿ ಬಳಿಕ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು
ಉಪವಾಸ ಸತ್ಯಾಗ್ರಹ ವಾಪಸ್ ಪಡೆದುಕೊಂಡರು. ಈ ಸಂದರ್ಭದಲ್ಲಿ ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ, ಆನಂದ ಮಾಮನಿ, ಮಹಾಂತೇಶ ದೊಡ್ಡಗೌಡರ, ಎಂ.ಎಲ.ಸಿ ಮಹಾಂತೇಶ ಕವಟಗಿಮಠ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೇರಿ ಅನೇಕ ಗಣ್ಯರು ಇದ್ದರು.