ಕರ್ನಾಟಕ
ಸಿಎಂಗೆ ವಿಲನ್ ಅಂದ್ರು ಸಚಿವ ಸೋಮಶೇಖರ್ ಯಾಕೇ ಗೊತ್ತಾ!!?

ಮಹಾಂತೇಶ ಇರಳಿ
ಮೈಸೂರು: ಸಿಎಂ ಯಡಿಯೂರಪ್ಪ ವಿಲನ್ ಅಂತ ಸಚಿವ ಎಸ.ಟಿ.ಸೋಮಶೇಖರ್ ಬಾಯ್ತಪ್ಪಿನಿಂದ ಹೇಳಿದ್ದಾರೆ.
ಇಂದು ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಡೆಸುವ ಸಂದರ್ಭದಲ್ಲಿ ಸಚಿವ ಸೋಮಶೇಖರ್ ಬಾಯ್ರಪ್ಪಿನಿಂದಾ ಹೇಳಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ನಾನು ವಿಲನ್ ಅಲ್ಲಾ ಹೀರೋ ಅಂತಾ ಹೇಳಿದರು. ಇದಕ್ಕೆ ತೀರುಗೇಟು ನೀಡುವ ಭರದಲ್ಲಿ ಯಡಿಯೂರಪ್ಪ ಅವರನ್ನ ಹೀರೋ ಅನ್ನು ಬದಲಾಗಿ ವಿಲನ್ ಅಂದ್ರು. ಅಲ್ಲಿಯೇ ಪಕ್ಕದಲ್ಲಿಯೇ ಇದ್ದ ಶಾಸಕ ರಾಮದಾಸ ಸರ್ ವಿಲನ್ ಅಲ್ಲ ಹೀರೋ ಅಂತಾ ಹೇಳಿ ಎಂದು ಹೇಳಿದ್ರು. ತಕ್ಷಣವೇ ಎಚ್ಚೆತ್ತುಕೊಂಡ ಸಚಿವ ಸೋಮಶೇಖರ್ ಯಡಿಯೂರಪ್ಪನವರೇ ಹೀರೋ ಬೇರೆಯಾರು ಹೀರೋ ಅಲ್ಲಾ ಅಂತಾ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದ್ರು. ಕೊರೊನಾ ಲಸಿಕೆ ಧಮ್ ಇದೇಯಾ ಅಂತಾ ಸಿದ್ದರಾಮಯ್ಯ ಹೇಳಿಕೆ ಕಿಡಿಕಾರಿದ ಸೋಮಶೇಖರ್. ನಮ್ಮ ಧಮ್ ಬಗ್ಗೆ ಟೆಸ್ಟ್ ಮಾಡಬೇಡಿ. ನಿಮ್ಮ ಧಮ್ ಏನು ಅಂತಾ ನಾವು ನೋಡಿದ್ದೇವೆ ಎಂದು ಸಚಿವ ಸೋಮಶೇಖರ್ ಕಿಡಿಕಾರಿದ್ದಾರೆ.