ಡಿಸಿಸಿ ಬ್ಯಾಂಕ್ ಚುನಾವಣೆ:ರಮೇಶ ಜಾರಕಿಹೊಳಿ ತ್ಯಾಗದ ಮಾತು ಹೇಳಿದ್ದು ಯಾರಿಗೆ!!?

ಮಹಾಂತೇಶ ಇರಳಿ
ಬೆಳಗಾವಿ:ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರವಾಗಿ ಜಿಲ್ಲಾ ಮಂತ್ರಿ ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ತಮ್ಮದೇ ಪಕ್ಷದ ನಾಯಕರಿಗೆ ಸಲಹೆ ಕೊಟ್ಟಿದ್ದಾರೆ. ಬೆಳಗಾವಿಯಲ್ಲಿ ಇಂದು ಮಾಧ್ಯಮದವರಿಗೆ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ಅವಿರೋಧ ಆಯ್ಕೆಗೆ ಆರ್ಎಸ್ಎಸ್ ನಾಯಕರ ಸಲಹೆ ನೀಡಿರುವುದರ ಬಗ್ಗೆ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ. ಆ ಸಭೆಯಲ್ಲಿ ನಾನಿರಲಿಲ್ಲ. ರಾಜಕೀಯ ವಿಚಾರದಲ್ಲಿ ಆರ್ಎಸ್ಎಸ್ ನಾಯಕರು ಎಂದೂ ಬರುವುದಿಲ್ಲ. ಇನ್ನೂ ಅರವಿಂದರಾವ್ ದೇಶಪಾಂಡೆ ನಮ್ಮ ಮಾರ್ಗದರ್ಶಕರಾಗಿ ಹೇಳಿದ್ದಾರೆ. ಈ ವಿಚಾರವಾಗಿ ನಾವು ಎಲ್ಲರೂ ಸೇರಿ ಚರ್ಚೆ ಮಾಡಿ ನಿರ್ಧರಿಸುತ್ತೇವೆ.ಎಂದಿಗೂ
ಸಹಕಾರ ರಂಗದಲ್ಲಿ ಪಕ್ಷ ಬರುವುದಿಲ್ಲ. ಕಳೆದ 20 ವರ್ಷಗಳ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಇತಿಹಾಸ ನೋಡಿದ್ರೆ ಎಲ್ಲಾ ಪಕ್ಷದವರು ನಿರ್ದೇಶಕರಿದ್ದಾರೆ. ಡಿಸಿಸಿ ಬ್ಯಾಂಕ್ ವಿಚಾರದಲ್ಲಿ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ ತೀರ್ಮಾನ ಮಾಡುತ್ತಾರೆ. ಮಾಜಿ ಸಚಿವರಾದ ಉಮೇಶ್ ಕತ್ತಿ, ಕೆಎಂಎಫ ಅಧ ಬಾಲಚಂದ್ರ ಜಾರಕಿಹೊಳಿ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧನಾಗಿದ್ದೇನೆ.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಎಲ್ಲರೂ ಒಂದಾಗಿ ಹೋಗಲು RSS ಸಲಹೆ ನೀಡಿದೆ. ಆದ್ರೆ ಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರದಲ್ಲಿ ತ್ಯಾಗ ಮಾಡಿದ್ರೆ ಎಲ್ಲರಿಗೂ ಒಳ್ಳೆಯದಾಗುತ್ತದೆ. ಯಾರಾದರೂ ಸ್ವಾರ್ಥ ಇಟ್ಟುಕೊಂಡು ಸಭೆ ಮಾಡಿದ್ರೆ ಅದು ಯಾವುದಕ್ಕೂ ಸರಿ ಆಗಿವುದಿಲ್ಲ.ಈಗಾಗಲೇ ಆರ್ಎಸ್ಎಸ್ ನಾಯಕರು ನಮಗೆಲ್ಲರಿಗೂ ಸೂಚನೆಯನ್ನ ನೀಡಿದ್ದಾರೆ. ಅವರ ಸೂಚನೆ ಪಾಲಿಸಬೇಕಾದರೆ ತ್ಯಾಗ ಮಾಡಲು ಸಿದ್ಧರಿದ್ರೆ ಒಳ್ಳೆಯದಾಗುತ್ತದೆ. ಉನ್ನತ ಹುದ್ದೆಯಲ್ಲಿದ್ದವರು ಸಣ್ಣ ಹುದ್ದೆಗೆ ಬರಬಾರದು ಅಂತಾ ಉದ್ದೇಶವಿದೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾರ್ಯಕರ್ತರನ್ನು ಆಯ್ಕೆ ಮಾಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಹಾಗೇ ನಾನು ಮನಸ್ಸು ಮಾಡಿದ್ರೆ ನನ್ನ ಮಗನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕನನ್ನಾಗಿ ಮಾಡಬಹುದು. ಆದ್ರೆ ನಾನು ಪಕ್ಷದ ಕಾರ್ಯಕರ್ತನನ್ನು ನಿರ್ದೇಶಕನನ್ನಾಗಿ ಮಾಡ್ತೇನೆ. ಹೀಗಾಗಿ ದೊಡ್ಡವರು ತ್ಯಾಗ ಮಾಡಬೇಕು ಎಂದು ಹೇಳಿದ್ದಾರೆ.