ಕರ್ನಾಟಕ

ಕನ್ನಡ ರಾಜ್ಯೋತ್ಸವ ದಿನವೇ ಎಂಇಎಸ ಕುತಂತ್ರ..!!!?

ಬೆಳಗಾವಿ: ನವಂಬರ್ 1 ಕನ್ನಡ ರಾಜ್ಯೋತ್ಸವದ ದಿನ ಮತ್ತೆ ನಾಡವಿರೋಧಿ ಎಂಇಎಸ ತನ್ನ ಅಟ್ಟಹಾಸ ಪ್ರದರ್ಶಿಸಲು ಮುಂದಾಗಿದೆ. ಕನ್ನಡ ರಾಜ್ಯೋತ್ಸವದ ದಿನವೇ ವಿನೂತನವಾಗಿ ಕರಾಳ ದಿನ ಆಚರಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.!!?

ಹೌದು.. ಈ ಸಾರಿ ಕೊರೊನಾ ಹಿನ್ನೆಲೆ ಎಂಇಎಸಗೆ ಕರಾಳ ದಿನದ ಮೆರವಣಿಗೆ ಅವಕಾಶ ಸಿಗುವುದಿಲ್ಲ. ಇದನ್ನ ಅರಿತ ನಾಡವಿರೋಧಿ ಕರಾಳ ದಿನ ಆಚರಣೆಗೆ ಹೊಸ ರಣತಂತ್ರ ರೂಪಿಸಿದ್ದಾರೆ. ಕನ್ನಡ ರಾಜ್ಯೋತ್ಸವದ ದಿನವೇ ಕಪ್ಪು ಬಣ್ಣದ ಬಲೂನಗಳನ್ನ ಆಕಾಶದಲ್ಲಿ ಹಾರಿ ಬಿಡಲು ಮುಂದಾಗಿದೆ. ಬೆಳಗಾವಿ ಮಹಾನಗರದಲ್ಲಿಯೇ ಒಂದು ಲಕ್ಷ ಕಪ್ಪು ಬಣ್ಣದ ಬಲೂನಗಳನ್ನ ಆಗಸಕ್ಕೆ ಕನ್ನಡ ರಾಜ್ಯೋತ್ಸವದ ದಿನವೇ ಹಾರಿ ಬಿಡಲು ಮುಂದಾಗಿದೆ.

ಎಂಇಎಸನ ಮುಖಂಡರೇ ಒಂದು ಲಕ್ಷ ಕಪ್ಪು ಬಣ್ಣದ ಬಲೂನ್ ಗಳನ್ನ ತಮ್ಮ ಕಾರ್ಯಕರ್ತರ ಮೂಲಕ ನೀಡಲು ಮುಂದಾಗಿದೆ.
ಕನ್ನಡ ರಾಜ್ಯೋತ್ಸವದ ದಿನದ ಕರಾಳ ದಿನಕ್ಕೆ ಅವಕಾಶ ನೀಡಬಾರದೆಂದು ಕನ್ನಡ ಸಂಘಟನೆಗಳು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಆಗ್ರಹಿಸಿವೆ. ಈ ಬಾರಿ ಕೊರೊನಾ ಇರುವುದರಿಂದ ಕನ್ನಡ ರಾಜ್ಯೋತ್ಸವನ್ನ ಸರಳವಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಅದರಂತೆ ಕನ್ನಡ ರಾಜ್ಯೋತ್ಸವ ಸರಳವಾಗಿ ಆಚರಿಸಲು ಕನ್ನಡಗಿರು ಸಿದ್ಧವಾಗಿದ್ದಾರೆ. ಹೀಗಿರುವಾಗ ಕನ್ನಡ ವಿರೋಧಿ ಎಂಇಎಸ ಬಲೂನ್ ಹಾರಿಸುವ ಮೂಲಕ ಕರಾಳ ದಿನಕ್ಕೆ ಮುಂದಾಗಿದೆ. ಇದಕ್ಕೆ ಬೆಳಗಾವಿ ಜಿಲ್ಲಾಡಳಿತ ಮತ್ತು ಬೆಳಗಾವಿ ಪೊಲೀಸರು ಬ್ರೇಕ್ ಹಾಕಬೇಕು. ಕನ್ನಡ ವಿರೋಧಿ ಚಟುವಟಿಕೆ ಮಾಡುತ್ತಿರುವ ಎಂಇಎಸ ಮುಖಂಡರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕನ್ನಡ ಹೋರಾಟಗಾರರ ಆಗ್ರಹವಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!