ಗುಡ್ ನ್ಯೂಸ್

ಕನ್ನಡಿಗರ ರತ್ನ ಅಶೋಕ ಚಂದರಗಿ

ಬೆಳಗಾವಿ: ಬೆಳಗಾವಿ ಅಂದ್ರೆ ಸಾಕು ನಾಡು, ನುಡಿ, ನೆಲ, ಜಲದ ಹೋರಾಟದ ಕಿಚ್ಚು ನಮಗೆ ಕಾಣ ಸಿಗುತ್ತದೆ. ಹಾಗೇ ನೋಡಿದ್ರೆ ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ನೆಲದಿಂದ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಕೊಡುಗೆಯನ್ನ ನೀಡಿದೆ.
ಅದೇ ರೀತಿ ಸ್ವಾತಂತ್ರ್ಯದ ಬಳಿಕ ಏಕೀಕರಣ ಕರ್ನಾಟಕ ರಚನೆ ಆಯ್ತು. ಅದರಲ್ಲೂ ಗೋಕಾಕ ಚಳುವಳಿ ಪ್ರಾರಂಭವಾಗಿದ್ದು ಇದೇ ಬೆಳಗಾವಿ ಜಿಲ್ಲೆಯ ನೆಲದಿಂದ ಅನ್ನೋದು ವಿಶೇಷ. ಹೀಗೆ ಬೆಳಗಾವಿ ಜಿಲ್ಲೆಯಲ್ಲಿ ನಮಗೆ ಕನ್ನಡ ಹೋರಾಟಗಾರರಿಗೆ ಏನು ಕೊರತೆಯಿಲ್ಲ. ಅದರಲ್ಲೂ ಸದಾ ನಾಡು, ನುಡಿ ಹೋರಾಟವನ್ನ ಉಸಿರಾಗಿಸಿಕೊಂಡವರೇ ನಮ್ಮ ಅಪ್ಪಟ್ಟ ಕನ್ನಡ ಹೋರಾಟಗಾರ, ಕನ್ನಡಿಗರ ರತ್ನ ಅಶೋಕ ಚಂದರಗಿ.


ಅಶೋಕ ಚಂದರಗಿ ಬಾಲ್ಯದಿಂದಲೇ ಕನ್ನಡವನ್ನೆ ಉಸಿರಾಗಿಸಿಕೊಂಡರು. ಪತ್ರಕರ್ತರಾಗಿ, ಕನ್ನಡ ಹೋರಾಟಗಾರರಾಗಿ, ಬರಹಗಾರರಾಗಿ, ಸಾಮಾಜಿಕ ಚಿಂತಕರಾಗಿ, ಸಮಾಜ ಸೇವಕರಾಗಿ ಹೀಗೆ ದಶಾವತರಗಳಿಂದ ನಾಡು ಕಟ್ಟು ಕಾಯಕದಲ್ಲಿ ತೂಡಗಿಸಿಕೊಂಡವರು ಅಶೋಕ ಚಂದರಗಿ.
ಬೆಳಗಾವಿಯನ್ನ ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ನಾಡದ್ರೋಹಿ ಎಂಇಎಸನವರು ಅಟ್ಟಹಾಸ ಮೆರೆಯುತ್ತಿರುವ ಕಾಲದಲ್ಲಿಯೇ ಕನ್ನಡದ ಕಟ್ಟಾಳು ಅಶೋಕ ಚಂದರಗಿನ ನಾಡು ನುಡಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಭಾಷಾ ವಿಚಾರವಾಗಲಿ, ಗಡಿ ವಿಚಾರವಾಗಲಿ, ಮಹದಾಯಿ ವಿಚಾರವಾಗಲಿ ಹಾಗೂ ನಾಡಿನ ಯಾವುದೇ ಮೂಲೆಯಲ್ಲೂ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಮೊದಲು ಧ್ವನಿ ಎತ್ತುವ ಕನ್ನಡ ಹೋರಾಟಗಾರ ಅಶೋಕ ಚಂದರಗಿ.

ಇನ್ನು ನಾಡು, ನುಡಿ, ಜಲ, ಗಡಿ ವಿಚಾರದಲ್ಲಿ ನಿರಂತರವಾಗಿ ಸರ್ಕಾರವನ್ನ ಬಡಿದೇಬ್ಬಿಸುವ ಕಾರ್ಯವನ್ನ ಅಶೋಕ ಚಂದರಗಿ ಮಾಡಿಕೊಂಡು ಬಂದಿದ್ದಾರೆ. ಎಷ್ಟ ಪ್ರಭಾವಿ ರಾಜಕಾರಣಿಗಳಿಗಾದಿದ್ರೂ ಯಾವುದೇ ಭಯವಿಲ್ಲದೇ ತಮ್ಮ ಹರಿತವಾದ ಮಾತುಗಳಿಂದ, ಲೇಖನಿಯಿಂದ ಉತ್ತರ ಕೊಡುತ್ತಾ ಬಂದವರೇ ಅಶೋಕ ಚಂದರಗಿ.


ಅಶೋಕ ಚಂದರಗಿಯವರ ಹೋರಾಟದ ಹಾದಿಗಳು ಕರ್ನಾಟಕ ಇತಿಹಾಸದಲ್ಲಿ ಹಸಿರಾಗಿ ಉಳಿಯುವಂತಹದ್ದು. ಇತಂಹ ಕನ್ನಡ ಹೋರಾಟಗಾರರ ಸದಾ ಕ್ರಿಯಾಶೀಲತೆಯಿಂದ ಕನ್ನಡ ನಾಡು ಕಟ್ಟುವ ಕಾಯಕದಲ್ಲಿ ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ಅಶೋಕ ಚಂದರಗಿ ಬರೀ ಕನ್ನಡ ಹೋರಾಟಗಾರ ಅಷ್ಟೇ ಅಲ್ಲ. ಕಾಲಕ್ಕೆ ತಕ್ಕಂತೆ ಎದುರಾದ ಸಮಸ್ಯೆಗಳಿಗೆ ಪರಿಹಾರ ಹುಡುಕುವ, ಧ್ವನಿ ಎತ್ತುವ ಕಾಯಕವನ್ನ ಮಾಡಿದ್ದಾರೆ. ಅದರಲ್ಲೂ ಕೊರೊನಾ ಸಂದರ್ಭದಲ್ಲಿ ಹಸಿದ ಸಾವಿರಾರು ಬಡ ಕುಟುಂಬಗಳಿಗೆ ಅನ್ನ ನೀಡುವ ಕಾಯಕವನ್ನ ಮಾಡಿದ್ದಾರೆ.

ಇಂತಹ ಕನ್ನಡ ಹೋರಾಟಗಾರ ಅಶೋಕ ಚಂದರಗಿ ನಿಜವಾಗಿಯೂ ಕನ್ನಡಿಗರ ಮುಕುಟ. ಅಶೋಕ ಚಂದರಗಿ ಅವರಿಗೆ ಅನೇಕ ಪ್ರಶಸ್ತಿಗಳು, ಗೌರವಗಳು ಹುಡುಕಿಕೊಂಡು ಬಂದಿದೆ. ಇಂತಹ ಕನ್ನಡ ಕಟ್ಟಾಳುಗಳಿಂದಲೇ ನಾಡು, ನುಡಿ, ಗಡಿ, ಜಲದ ರಕ್ಷಣೆ ಆಗುತ್ತಿದೆ. ಈ ಅಪ್ಪಟ್ಟ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಅವರಿಗೆ 6 ಕೋಟಿ ಕನ್ನಡಿಗರ ಪರವಾಗಿ ನಮ್ಮದೊಂದು ಸಲಾಂ.

Related Articles

Leave a Reply

Your email address will not be published. Required fields are marked *

Back to top button
error: Content is protected !!