ಕ್ರೈಂ
ಪ್ರೇಯಸಿಗೆ ಶಾಕ್ ಕೊಟ್ಟ ಪ್ರೀಯತಮ

ಹೈದರಾಬಾದ್ : ಪ್ರೇಯಸಿಗಾಗಿ ಪ್ರೀಯತಮ ಮಾಡಿದ ಕೆಲಸವನ್ನು ನೋಡಿದ್ರೆ ನಿಮಗೂ ಶಾಕ್ ಆಗುತ್ತದೆ. ಇಷ್ಟೇ ಪ್ರಾಣಕ್ಕಿಂದ ಪ್ರೇಯಸಿಯನ್ನ ಪ್ರೀತಿಸುತ್ತಿದ್ದ ಪ್ರೀಯತಮ ತನ್ನ ಪ್ರಾಣವನ್ನೇ ಬಿಟ್ಟಿದ್ದಾನೆ. ಹೌದು.. ಪ್ರೀಯತಮೆ ಮೃತಪುಟ್ಟಳು ಎಂಬ ಕಾರಣಕ್ಕೆ ಮನನೊಂದ ಪ್ರೇಮಿ ಅವಳ ಗೋರಿ ಬಳಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಹೃದಯ ಕಲುಕುವ ಘಟನೆ ಆಂಧ್ರಪ್ರದೇಶದ ಕುದುರುಪಲ್ಲಿ ಗ್ರಾಮದಲ್ಲಿ ನಡೆದಿದೆ.
ಮಹೇಶ್ ಎಂಬ ಯುವಕನೇ ಆತ್ಮಹತ್ಯೆ ಮಾಡಿಕೊಂಡವನು. ಅದೇ ಗ್ರಾಮದ ಯುವತಿಯನ್ನ ಮಹೇಶ ಪ್ರೀತಿಸುತ್ತಿದ್ದನು. ಅನಾರೋಗ್ಯದಿಂದ ಪ್ರೇಯಸಿ ಮೃತಪಟ್ಟಿದ್ದಾಳೆ. ಇದರಿಂದ ಮನಸಿಗೆ ನೋವು ಮಾಡಿಕೊಂಡ ಪ್ರೀಯತಮ ಅವಳ ಸಮಾಧಿ ಮುಂದೆ ವಿಷ ಸೇವಿಸಿ ಪ್ರಾಣವನ್ನ ಕಳೆದುಕೊಂಡಿದ್ದಾನೆ.