ಮಾಜಿ ಮಂತ್ರಿ, ಹಾಲಿ ಶಾಸಕ ಬಿಜೆಪಿ ಸೇರ್ತಾರಾ.!!?

ಶ್ರೀನಿವಾಸ ಪಟ್ಟಣ, ಮಹಾಂತೇಶ ಇರಳಿ
ಬೆಳಗಾವಿ: ಮಾಜಿ ಸಚಿವರು, ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಸಿಡಿಸಿದ ಬಾಂಬ್ ಕಾಂಗ್ರೆಸ್ ಪಾಳ್ಯದಲ್ಲಿ ಬಿರುಗಾಳಿ ಸೃಷ್ಟಿಸಿದೆ. ಹಾಗೇ ನೋಡಿದ್ರೆ ಪ್ರಕಾಶ ಹುಕ್ಕೇರಿ ಮತ್ತವರ ಕುಟುಂಬ ಕಾಂಗ್ರೆಸ್ ಪಕ್ಷದ ನಿಟ್ಟರು. ಅದರಲ್ಲೂ ಪ್ರಕಾಶ ಹುಕ್ಕೇರಿ ಸುಪುತ್ರ ಗಣೇಶ ಹುಕ್ಕೇರಿ ಕಾಂಗ್ರೆಸ್ ಶಾಸಕ. ಹೀಗೆ ಮನೆಯಲ್ಲಿ ಪುತ್ರ ಶಾಸಕ ಆಗಿದ್ದರೂ ಪ್ರಕಾಶ ಹುಕ್ಕೇರಿ ಬಹಿರಂಗವಾಗಿಯೇ ಬಿಜೆಪಿ ಪರ ಬ್ಯಾಟಿಂಗ್ ಮಾಡಿರುವುದು ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ. ಮಾಜಿ ಮಂತ್ರಿ ಪ್ರಕಾಶ ಹುಕ್ಕೇರಿ, ಹಾಲಿ ಶಾಸಕ ಗಣೇಶ ಹುಕ್ಕೇರಿ ಅಂದ್ರೆ ತಂದೆ-ಮಗ ಇಬ್ಬರೂ ಒಟ್ಟಾಗಿ ಬಿಜೆಪಿ ಸೇರ್ಪಡೆ ಆಗ್ತಾರಾ ಎಂಬ ಚರ್ಚೆ ಈಗ ರಾಜ್ಯಕೀಯದಲ್ಲಿ ಕೇಳಿ ಬರುತ್ತಿದೆ.!!?

ಪ್ರಕಾಶ ಹುಕ್ಕೇರಿ ಹೇಳಿಕೆಯಲ್ಲಿಯೇ ಡಿಸಿಎಂ ಲಕ್ಷ್ಮಣ ಸವದಿ, ಸಚಿವ ರಮೇಶ ಜಾರಕಿಹೊಳಿ ಪದೇ ಪದೇ ಹೇಳಿರುವ ಮಾತುಗಳು ಸತ್ಯವಾಗುತ್ತಿದೆ. ಯಾಕಂದ್ರೆ ಕಾಂಗ್ರೆಸ್ ತೆರೆದು ಬಳಿಕ ರಮೇಶ ಜಾರಕಿಹೊಳಿ ಇನ್ನೂ ಕಾಂಗ್ರೆಸ್ಸಿನ 15 ರಿಂದ 20ಜನ ಶಾಸಕರು ಬಿಜೆಪಗೆ ಬರಲು ಸಿದ್ಧರಾಗಿದ್ದಾರೆ. ಆದ್ರೆ ಬಿಜೆಪಿ ಹೈಕಮಾಂಡ ಇದಕ್ಕೆ ಇನ್ನೂ ಗ್ರೀನ್ ಸಿಗ್ನಲ್ ಕೊಡ್ತಿಲ್ಲಾ ಅಂತಾ ಹೇಳುತ್ತಿದ್ದರು. ಅದೇ ರೀತಿ ಉಪ ಚುನಾವಣೆ ಪ್ರಚಾರದ ಮೇಲೆ ಡಿಸಿಎಂ ಲಕ್ಷ್ಮಣ ಸವದಿ ಸಹ ಐವರು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ತಾರೆ ಅಂತಾ ಸಿಡಿಸಿದ ಬಾಂಬ್ ಈಗ ಸತ್ಯವಾಗುತ್ತಿದೆ. ಲಕ್ಷ್ಣಣ ಸವದಿ ಹೇಳಿದ ಐವರು ಶಾಸಕರು, ರಮೇಶ ಜಾರಕಿಹೊಳಿ ಹೇಳಿದ 15 ಶಾಸಕರಲ್ಲಿ ಹುಕ್ಕೇರಿ ಫ್ಯಾಮಿಲಿ ಕೂಡಾ ಇದೇಯಾ ಎಂಬುದು ಚರ್ಚೆಗೆ ಕಾರಣವಾಗಿದೆ.

ಯಾಕಂದ್ರೆ ದೋಸ್ತಿ ಸರ್ಕಾರದ ಪತನದ ವೇಳೆ ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ ಬಿಜೆಪಿ ಸೇರ್ಪಡೆ ಬಗ್ಗೆ ಬಾರಿ ಚರ್ಚೆಗಳು ನಡೆದಿದ್ದವು. ಎಲ್ಲವೂ ಅಂದುಕೊಂಡತೆ ಆಗಿದ್ದರೇ ಗಣೇಶ ಹುಕ್ಕೇರಿ ಇಂದು ಬಿಜೆಪಿ ಪಕ್ಷದಲ್ಲಿ ಇರುತ್ತಿದ್ದರು. ಅವತ್ತು ಗಣೇಶ ಹುಕ್ಕೇರಿ ಕಾಂಗ್ರೆಸ್ ತೊರೆಯದಂತೆ ತಂದೆ ಪ್ರಕಾಶ ಹುಕ್ಕರಿ ತಡೆದಿದ್ದರು ಎಂಬ ಮಾತುಗಳು ಈಗಲೂ ರಾಜಕೀಯದಲ್ಲಿ ಕೇಳಿ ಬರುತ್ತವೆ. ಈಗ ಶಾಸಕ ಗಣೇಶ ಹುಕ್ಕೇರಿ ತಂದೆ, ಮಾಜಿ ಮಂತ್ರಿ ಪ್ರಕಾಶ ಹುಕ್ಕೇರಿ ಬಿಜೆಪಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡ್ತಿನಿ. ಅಂಗಡಿ ಪರಿವಾರದ ಪರವಾಗಿ ಮತಯಾಚನೆ ಮಾಡ್ತಿನಿ ಅಂತಾ ಹೇಳಿದ್ದಾರೆ. ಅಲ್ಲದೇ, ಅವಕಾಶ ಸಿಕ್ಕರೇ ಬೆಳಗಾವಿ ಲೋಕಸಭೆಯಲ್ಲಿ ಸ್ಪರ್ಧಿಸುವ ಬಯಕೆಯನ್ನ ಹೊರಹಾಕಿದ್ದಾರೆ. ಈ ಮೂಲಕ ಪ್ರಕಾಶ ಹುಕ್ಕೇರಿ ತಮ್ಮ ನಿರ್ಧಾರವನ್ನ ಸ್ಪಷ್ಟಗೊಳಿಸಿದಂತಾಗಿದೆ. ಮುಂದಿನ ದಿನಗಳಲ್ಲಿ ಕೇಸರಿ ಧ್ವಜವನ್ನ ಪ್ರಕಾಶ ಹುಕ್ಕೇರಿ, ಗಣೇಶ ಹುಕ್ಕೇರಿ ಹಿಡಿದರು ಅಚ್ಚರಿ ಪಡಬೇಕಿಲ್ಲ. ಯಾಕಂದ್ರೆ ಕಾಂಗ್ರೆಸ ಪಕ್ಷದಲ್ಲಿನ ಹೊಂದಾಣಿಕೆ ರಾಜಕಾರಣ, ಪಕ್ಷದಲ್ಲಿ ಹುಕ್ಕೇರಿ ಕುಟುಂಬದ ಮಾತುಗಳಿಗೆ ಸಿಗದ ಆದ್ಯತೆ ಕಾರಣದಿಂದ ಪ್ರಕಾಶ ಹುಕ್ಕೇರಿ ಈ ರೀತಿ ತಮ್ಮ ಅಸಮಾಧವನ್ನ ಹೊರಹಾಕಿದ್ದಾರೆ ಅಂತಾ ಆಪ್ತ ವಲಯದಿಂದ ಕೇಳಿ ಬರುತ್ತಿರುವ ಮಾತುಗಳು.

ಪ್ರಕಾಶ ಹುಕ್ಕೇರಿ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅಸಮಾಧನ ಹೊರಹಾಕಿದ್ದಾರೆ. ಕಾಂಗ್ರೆಸ್ ಪಕ್ಷ ಪ್ರಕಾಶ ಹುಕ್ಕೇರಿ ಅವರಿಗೆ ಎಲ್ಲಾ ರಾಜಕೀಯ ಸ್ಥಾನ ಮಾನಗಳು ನೀಡಿವೆ. ಕಾಂಗ್ರೆಸನ ಹಿರಿಯ ನಾಯಕರಿಂದ ಇಂತಹ ಮಾತುಗಳು ಸೂಕ್ತವಲ್ಲ. ಪ್ರಕಾಶ ಹುಕ್ಕೇರಿ ಏನೇ ಇದ್ದರೂ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ರಾಜಕಾರಣಕ್ಕೆ ಮಾತ್ರ ಸಿಮಿತಿ ಹೊರತು ಬೆಳಗಾವಿ ಲೋಕಸಭೆ ರಾಜಕಾರಣಕ್ಕೆ ಅಲ್ಲ. ಪ್ರಕಾಶ ಹುಕ್ಕೇರಿ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಪಕ್ಷ ಹಿರಿಯ ನಾಯಕರು ಮಾಡ್ತಾರೆ ಎಂದು ಸತೀಶ ಜಾರಕಿಹೊಳಿ ತಮ್ಮ ಅಸಮಾಧನ ಹೊರ ಹಾಕಿದ್ದಾರೆ.