ಮಚ್ಚು ಝಳಪಳಿಸಿದ ರೌಡಿಗಳು;ಬೆಳಗಾವಿಯಲ್ಲಿ ಮಧ್ಯರಾತ್ರಿ ಚಿಮ್ಮಿತು ರಕ್ತ

ಬೆಳಗಾವಿ: ಮಧ್ಯೆರಾತ್ರಿ ಕುಂದಾನಗರಿ ಬೆಳಗಾವಿಯಲ್ಲಿ ಮಚ್ಚು ಝಳಪಳಿಸಿವೆ. ನಿನ್ನೆ ರಾತ್ರಿ ಬೆಳಗಾವಿಯ ಶೇಖ್ ಆಸ್ಪತ್ರೆ ಬಳಿಯ ನಡು ರಸ್ತೆಯಲ್ಲಿ ಯುವಕನೊಬ್ಬನನ್ನ ಅಟ್ಟಾಡಿಸಿ ಕೊಚ್ಚಿ ಕೊಲೆ ಮಾಡಲಾಗಿದೆ.
ಬೆಳಗಾವಿಯ ಅಜಮನಗರದ ನಿವಾಸಿ ಶೇಹಬಾಜ್ ಪಠಾಣ ಕೊಲೆಯಾದ ದುರ್ದೈವಿ. ನಿನ್ನೆ ರಾತ್ರಿ ಶೇಹಬಾಜ್ ರಾಮದೇವ ಬಳಿ ಸುತ್ತಾಡುತ್ತಿದ್ದಾಗ ಹಂತಕರ ತಂಡ ಪಾಲೋ ಮಾಡಿದೆ. ಇದನ್ನ ಗಮನಿಸಿದ ಶೇಹಬಾಜ್ ಶೇಖ್ ಆಸ್ಪತ್ರೆ ರಸ್ತೆಯತ್ತ ಹೊರಟಿದ್ದಾನೆ.
ಹಿಂದಿನಿಂದ ಪಾಲೋ ಮಾಡಿಕೊಂಡ ಬಂದ ಆರೋಪಿಗಳು ಮಚ್ಚು ತಗೆದು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇಬ್ಬರ ಹಂತಕರಿಂದ ಈ ಕೃತ್ಯ ನಡೆದಿದೆ ಎನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಯುವಕ ಶಹಬಾಜ್ ಕೊಲೆಗೆ ಹಳೆ ದ್ವೇಷ ಕಾರಣ ಎಂದು ಹೇಳಲಾಗುತ್ತಿದೆ. ಶಹಬಾಜ್ ಕಾಕತಿಯಲ್ಲಿ ನಡೆದ ಎರಡು ಗುಂಪುಗಳ ಮಧ್ಯೆ ಗಲಾಟೆಯಲ್ಲಿದ್ದ. ಆ ಬಳಿಕ ಜೈಲಿಗೆ ಸಹ ಹೋಗಿ ಬಂದಿದ್ದನು. ಜೈಲಿನಿಂದ ಬಂದ ಬಳಿಕ ಶಹಬಾಜ್ ಅಜಮ್ ನಗರದಲ್ಲಿ ವಾಸವಾಗಿದ್ದನು. ಕೊಲೆಯಾದ ಶಹಬಾಜ್ ಸಹ ರೌಡಿ ಶೀಟರ್ ಅಂತಾ ಹೇಳಲಾಗುತ್ತಿದೆ. ಮಚ್ಚಿನಿಂದ ಕೊಚ್ಚಿದ ಆರೋಪಿಗಳು ರೌಡಿ ಶೀಟರ್ ಅಂತಾ ಹೇಳಲಾಗುತ್ತಿದೆ.
ಈ ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಡಿಸಿಪಿ ವಿಕ್ರಮ್ ಅಮಟೆ, ಮಾಳಮಾರುತಿ ಪಿಐ ಬಿ.ಆರ.ಗಡ್ಡೇಕರ ಭೇಟೀ ನೀಡಿ ಪರಿಶೀಲನೆ ನಡೆಸಿದ್ರು. ಈ ಕುರಿತು ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ. ಆರೋಪಿಗಳ ಬಂಧಕ್ಕೆ ಪೊಲೀಸರ ತಂಡವನ್ನ ರಚಿಸಲಾಗಿದೆ.