ಕೊರೊನಾ ವಾರಿಯರ್ಸಗಳಿಗೆ ಸನ್ಮಾನ

ಶ್ರೀನಿವಾಸ ಪಟ್ಟಣ
ಅಥಣಿ: ಅಥಣಿ ಪಟ್ಟಣದ ಗವಿಸಿದ್ದನಮಡ್ಡಿಯಲ್ಲಿ ಮಹಾಮಾರಿ ಕೊರೊನಾ ವಿರುದ್ಧ ಹೋರಾಟದಲ್ಲಿ ಅವಿರತ ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸ್ನೇಜೀವಿ ಫೌಂಡೇಷನ್ ಹಾಗೂ ಭಜಂತ್ರಿ ಸಮಾಜದಿಂದ ವಾರಿಯರ್ಸಗಳಾದ ಪೋಲಿಸ್ ಸಿಬ್ಬಂದಿ, ಪುರಸಭೆ ಸಿಬ್ಬಂದಿ, ಪತ್ರಕರ್ತರನ್ನ ಸನ್ಮಾನಿಸಲಾಯಿತು.
ಕಾಂಗ್ರೆಸನ ಮಾಜಿ ಶಾಸಕ ಶಹಜಹಾನ ಡೊಂಗರಗಾಂವ್ ಮಾತನಾಡಿ, ನಮ್ಮ ದೇಶ ವಿವಿಧ ಸಂಸ್ಕೃತಿಗಳಿಂದ ಕೂಡಿದ ಶ್ರೀಮಂತ ದೇಶ. ಬೇರೆ ಯಾವುದೇ ದೇಶದಲ್ಲಿ ನಮ್ಮ ಸಂಸ್ಕೃತಿ ಕಾಣಸಿಗುವುದಿಲ್ಲ. ನಮ್ಮ ದೇಶದಲ್ಲಿ ವಿವಿಧತೆಯಲ್ಲಿ ಏಕತೆ ಮೂಡಲು ಹಬ್ಬ ಹರಿದಿನಗಳ ಪಾತ್ರ ಪ್ರಮುಖವಾಗಿದೆ. ಈವರೆಗೂ ದೇಶ ಎದುರಿಸಿದ ಎಲ್ಲಾ ಯುದ್ಧಗಳಿಂಗಿತಲೂ ಕೊರೊನಾ ಯುದ್ಧ ಮಹಾಯುದ್ಧ ಆಗಿದೆ. ಈ ಮಹಾಯುದ್ಧದಲ್ಲಿ ಹೋರಾಡುತ್ತಿರುವ ಕೊರೊನಾ ವಾರಿಯರ್ಸಗಳಿಗೆ ಗೌವರವಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ.
ಅಥಣಿ ಪೋಲಿಸ್ ಠಾಣೆಯ ಪಿಎಸ್ಐ ಕುಮಾರ ಹಾಡಕಾರ ಮಾತನಾಡಿ, ಆಧುನಿಕ ಯುಗದಲ್ಲಿ ಕಳೆದು ಹೋಗುತ್ತಿರುವ ಸಂಸ್ಕೃತಿಯನ್ನ ಭಜಂತ್ರಿ ಸಮಾಜವೂ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ. ಕೊರೊನಾ ವಾರಿಯರ್ಸಗಳನ್ನ ಗೌರವಿಸುತ್ತಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಅಲ್ಲದೇ, ಕೊರೊನಾ ಬಂದಿರುವುದು ನಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸಲಿಕ್ಕೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಎಸ್.ವಿ ಗಿರೀಶ್,ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ಡಾ.ಮಲ್ಲಿಕಾರ್ಜುನ ಹಂಜಿ, ಪವಾರ ದೇಸಾಯಿ, ಪುಟ್ಟು ಹಿರೇಮಠ, ಯುವ ಉದ್ಯಮಿ ಮುರುಗೇಶ ಕುಮಟಳ್ಳಿ, ಭಜಂತ್ರಿ ಸಮಾಜದ ಮುಖಂಡ ಅಣ್ಣಪ್ಪ ಭಜಂತ್ರಿ, ಸ್ನೇಹಜೀವಿ ಫೌಂಡೇಷನ್ ಅಧ್ಯಕ್ಷ ಮಹಾಂತೇಶ ಬಾಡಗಿ ಇದ್ದರು.