ಹಬ್ಬದ ದಿನವೇ ರಾಜಕೀಯ ಬಾಂಬ್ ಸಿಡಿಸಿದ ಸಿದ್ದರಾಮಯ್ಯ..!?

ಮಹಾಂತೇಶ ಇರಳಿ
ಕಲಬುರ್ಗಿ: ಕಾಂಗ್ರೆಸ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ, ಬಿಜೆಪಿ ಸೇರಲಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ನೀಡಿದ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಸಂಪರ್ಕದಲ್ಲೂ ಬಿಜೆಪಿಯ ಶಾಸಕರು ಇದ್ದಾರೆ. ಒಬ್ಬರಲ್ಲ ಇಬ್ಬರಲ್ಲ 15 ಜನ ಶಾಸಕರು ಸಂಪರ್ಕದಲ್ಲಿದ್ದಾರೆ. ಬಿಜೆಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಅಂತ ನಾನು ಹೇಳುವುದಿಲ್ಲ. ಅದೇ ರೀತಿ ಲಕ್ಷ್ಮಣ ಸವದಿ ಅವರು ಹಾಗೆಲ್ಲ ಹೇಳಬಾರದು. ಅಧಿಕಾರದಲ್ಲಿದ್ದವರು ಜನರಿಗೆ ಏನು ಮಾಡಿದ್ದಾರೆ ಅನ್ನೋದನ್ನ ಹೇಳಬೇಕು. 5 ಜನ ಶಾಸಕರು ಸಂಪರ್ಕದಲ್ಲಿದ್ದಾರೆ ಅಂತ ಹೇಳುವ ಬದಲು, ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ಸರ್ಕಾರ ಏನ್ ಮಾಡಿದೆ ಅನ್ನೋದನ್ನ ಹೇಳಬೇಕು. ಪ್ರವಾಹದಿಂದ ತತ್ತರಿಸಿ ಜನರಿಗೆ ಸರ್ಕಾರ ಏನು ಮಾಡಿದೆ ಅನ್ನುವುದು ಹೇಳಬೇಕು. ಜನರ ಸಂಕಷ್ಟಕ್ಕೆ ಸರ್ಕಾರ ಯಾವ ರೀತಿ ಸ್ಪಂದಿಸುತ್ತಿದೆ ಅಂತಾ ಹೇಳಬೇಕು. ಹೀಗೆ ಬಿಜೆಪಿಯ ಜೊತೆ ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ, ಬಿಜೆಪಿ ಸೇರ್ಪಡೆಯಾಗುತ್ತಾರೆ ಅಂತಲ್ಲ ಹೇಳಬಾರದು. ಶಿರಾ ಮತ್ತು ಆರ್ ಆರ್ ನಗರ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವಾಗಿದೆ. ಶಿರಾದಲ್ಲಿ ನಾನು ಚುನಾವಣಾ ಪ್ರಚಾರ ಮಾಡಿ ಬಂದಿದ್ದೇನೆ. ಇನ್ನು ಆರ್ ಆರ್ ನಗರದಲ್ಲಿ ಕೂಡ ಕಾಂಗ್ರೆಸ್ ಗೆಲ್ಲಲಿದೆ ಅನ್ನುವಂತಹ ವರದಿಗಳು ಬಂದಿವೆ. ಸದ್ಯದಲ್ಲಿ ಆರ.ಆರ ನಗರದಲ್ಲಿ ಚುನಾವಣಾ ಪ್ರಚಾರವನ್ನು ಕೈಗೊಳ್ಳಲಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ