ರೈತರ ಉಸಿರು ಹರ್ಷ ಶುಗರ್ಸ್

ಬೆಳಗಾವಿ: ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಜನತೆಯ ಮನೆ ಮಗಳಾಗಿ ಗುರುತಿಸಿಕೊಂಡಿದ್ದಾರೆ. ಹಾಗೆಯೇ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಒಡೆತನದ ಹರ್ಷ ಶುಗರ್ಸ್ ಬೆಳಗಾವಿ ಜಿಲ್ಲೆ ರೈತರ ಉಸಿರಾಗಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಇರುವ ಹರ್ಷ ಶುಗರ್ಸ್ ಸಕ್ಕರೆ ಕಾರ್ಖಾನೆ ಪ್ರಸಕ್ತ ವರ್ಷದ ಕಬ್ಬು ನುರಿಸುವ ಹಂಗಾಮು ಆರಂಭವಾಗಿದೆ. ಸಂಬಯ್ಯಮ ಮಠದ ಉಮೇಶ್ವರ ಸ್ವಾಮೀಜಿ ಆಶಿರ್ವಾದದಿಂದ 2020-21ನೇ ಸಾಲಿನ ಹಂಗಾಮು ಆರಂಭಗೊಂಡಿದೆ.
ಹರ್ಷ ಶುಗರ್ಸ್ ಸಕ್ಕರೆ ಕಾರ್ಖಾನೆ ಅಧ್ಯಕ್ಷೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅನ್ನದಾತರಿಗೆ ಅಭಯ ನೀಡಿದ್ದಾರೆ. ಪ್ರಸಕ್ತ ವರ್ಷವೂ ಕಳೆದ ವರ್ಷದಿಂದ ಹರ್ಷ ಶುಗರ್ಸ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುವಂತೆ ಮನವಿ ಮಾಡಿಕೊಂಡಿದ್ದಾರೆ. ಕಳೆದ ವರ್ಷವೂ ರೈತರ ಹಿತ ಕಾಪಾಡುವ ಕೆಲಸವನ್ನ ಹರ್ಷ ಶುಗರ್ಸ್ ಮಾಡಿದೆ. ಎಫ.ಆರ.ಪಿಗಿಂತೂ ಹೆಚ್ಚಿನ ದರವನ್ನ ರೈತರಿಗೆ ನೀಡಿ, ಅವರ ಬೆನ್ನಿಗೆ ನಿಂತಿದೆ. ಪ್ರಸಕ್ತ ವರ್ಷವೂ ರೈತರಿಗೆ ಯೋಗ್ಯ ದರ ನೀಡಲು ಬದ್ಧವಾಗಿದೆ ಎಂದು ಹೇಳಿದ್ದಾರೆ.
ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಚನ್ನರಾಜ ಹಟ್ಟಿಹೊಳಿ ಸಹ ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಹಂಗಾಮು ಯಶಸ್ವಿ ಆಗುವಂತ ಎಲ್ಲಾ ರೈತ ಬಾಂಧವರು ಕೈಜೋಡಿಸಬೇಕು. ಈ ವರ್ಷವೂ ಹರ್ಷ ಶುಗರ್ಸಗೆ ಕಬ್ಬು ಪೂರೈಸುವ ರೈತರಿಗೆ ಯೋಗ್ಯ ದರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕಾರ್ಖಾನೆ ನಿರ್ದೇಶಕ ಮೃಣಾಲ್ ಹೆಬ್ಬಾಳಕರ ಸಹ ರೈತರಿಗೆ ಧೈರ್ಯ ತುಂಬಿದ್ದಾರೆ. ರೈತರ ಪರವಾದ ನಿರ್ಧಾರಗಳನ್ನ ಆಡಳಿತ ಮಂಡಳಿ ಮಾಡಲಿದೆ. ಹರ್ಷ ಶುಗರ್ಸ ಮೇಲೆ ಪ್ರೀತಿ, ವಿಶ್ವಾಸ ಇಟ್ಟಿರುವ ರೈತರನ್ನ ಕೈ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು, ರೈತರು, ರೈತ ಮುಖಂಡರು ಇದ್ದರು. ಅಲ್ಲದೇ, ಇದೇ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಅತಿ ಹೆಚ್ಚು ಕಬ್ಬು ಪೂರೈಸಿದ 6 ಜನ ರೈತರನ್ನ ಸನ್ಮಾನಿಸಲಾಯಿತು.