ಕಾಂಗ್ರೆಸ್ ಗೆ ಶಾಕ್ ಕೊಟ್ಟ ಪ್ರಕಾಶ ಹುಕ್ಕೇರಿ:ಬಿಜೆಪಿ ಪರ ಪ್ರಚಾರ ಮಾಡ್ತಾರಂತೆ ಮೀಸೆ ಮಾವ

ಬೆಳಗಾವಿ: ಕಾಂಗ್ರೆಸ್ ಐವರು ಶಾಸಕರು ಬಿಜೆಪಿ ಸೇರುತ್ತಾರೆ ಅಂತಾ ಡಿಸಿಎಂ ಲಕ್ಷ್ಮಣ ಸವದಿ ಬಾಂಬ್ ಸಿಡಿಸಿದ ಬೆನ್ನಲ್ಲೇ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಬಿಜೆಪಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಕೇಂದ್ರ ಸಚಿವ ಸುರೇಶ್ ಅಂಗಡಿ ಅಕಾಲಿಕ ನಿಧನದಿಂದ ಬೆಳಗಾವಿ ಲೋಕಸಭೆ ಸ್ಥಾನ ತೆರವುವಾಗಿದೆ. ಹೀಗಾಗಿ ಬೆಳಗಾವಿ ಲೋಕಸಭೆ ಗೆ ಉಪ ಚುನಾವಣೆ ನಡೆಯಲಿದೆ. ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುವುದಾಗಿ ಘೋಷಿಸಿದ್ದಾರೆ. ಪ್ರಕಾಶ ಹುಕ್ಕೇರಿ ಪುತ್ರ ಗಣೇಶ ಹುಕ್ಕೇರಿ ಕಾಂಗ್ರೆಸ್ ಶಾಸಕರಾಗಿದ್ದಾರೆ. ಪ್ರಕಾಶ ಹುಕ್ಕೇರಿ ಸಹ ಪಕ್ಷದ ಹಿರಿಯ ಮುಖಂಡರಾಗಿದ್ದಾರೆ. ಆದ್ರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹುಕ್ಕೇರಿ ಫ್ಯಾಮಿಲಿ ಬಿಜೆಪಿಯತ್ತ ಮುಖ ಮಾಡಿದಂತಿದೆ. ಪ್ರಕಾಶ ಹುಕ್ಕೇರಿ ಹೇಳಿದಿಷ್ಟು, ಅಂಗಡಿ ಕುಟುಂಬದವರಿಗೆ ಬಿಜೆಪಿ ಟಿಕೆಟ್ ಕೊಟ್ರೇ ಅವರ ಪರ ನಾನೇ ಪ್ರಚಾರ ಮಾಡುವೇ. ದಿವಂಗತ ಸಂಸದ ಸುರೇಶ್ ಅಂಗಡಿ ಕುಟುಂಬ ಪರ ನಿಂತ ಮತಯಾಚಣೆ ಮಾಡುವೆ.
ಎಲ್ಲಾ ಮನೆಗಳಿಗೆ ಹಾಗೂ ಹಳ್ಳಿಗಳಿಗೆ ತಿರುಗಾಡಿ ಪ್ರಚಾರ ಮಾಡುವೆ. ಕಾಂಗ್ರೆಸ್ ಹೈಕಮಾಂಡ್ ನನ್ನ ಮೇಲೆ ಏನು ಆಕ್ಷನ್ ತಗೆದುಕೊಳ್ಳುತ್ತೊ ತಗೆದುಕೊಳ್ಳಲಿ. ನನ್ನ ಮಗನ ಚುನಾವಣೆ ಪ್ರಚಾರ ಹೇಗೆ ಮಾಡಿದ್ದೇನೋ. ಹಾಗೇ ಅಂಗಡಿ ಪರಿವಾರದ ಪರ ಪ್ರಚಾರ ಮಾಡುವೆ ಎಂದು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹೇಳಿಕೆ ರಾಜಕೀಯ ಪಾಳ್ಯದಲ್ಲಿ ಸಂಚಲನ ಮೂಡಿಸಿದೆ.