ಲಕ್ಷ್ಮಣ ಸವದಿ ಸಿಡಿಸಿದ ಹೊಸ ಬಾಂಬ್ ಏನು ಗೋತ್ತಾ!?

ಶ್ರೀನಿವಾಸ ಪಟ್ಟಣ
ತುಮಕೂರು: ಮತ್ತೆ ರಾಜ್ಯದಲ್ಲಿ ಆಪರೇಷನ್ ಕಮಲದ ಮುನ್ಸೂಚನೆಯನ್ನು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ನೀಡಿದ್ದಾರೆ. ಇಂದು ತುಮಕೂರಿನ ತಾವರೆಕೆರೆಯಲ್ಲಿ ಚುನಾವಣಾ ಪ್ರಚಾರ ಸಂದರ್ಭ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ತೊರೆದು ಐವರು ಶಾಸಕರು ಬಿಜೆಪಿ ಸೇರುವುದಕ್ಕೆ ಉತ್ಸುಕರಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭವಿಷ್ಯವಿಲ್ಲ ಎಂಬ ಅಭಿಪ್ರಾಯವನ್ನು ಕಾಂಗ್ರೆಸ್ ಶಾಸಕರು ತೋಡಿಕೊಂಡಿದ್ದಾರೆ ಎಂದು ಲಕ್ಷ್ಮಣ್ ಸವದಿ ಹೇಳಿದ್ದಾರೆ. ಈ ಮೂಲಕ ಬಿಜೆಪಿಯ ಶಾಸಕರ ಸಂಖ್ಯಾಬಲ ಇನ್ನೂ ಹೆಚ್ಚಾಗಲಿದೆ.
71 ಸಂಖ್ಯಾಬಲ ಇರುವ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬಂದ ಬಳಿಕ ಕಾಂಗ್ರೆಸ್ ಸಂಖ್ಯಾಬಲ 66ಕ್ಕೆ ಕುಸಿಯಲ್ಲಿದೆ. ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರಲಿದ್ದಾರೆ ಎನ್ನುವ ಹೇಳಿಕೆ ರಾಜ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಗೌಪ್ಯವಾಗಿ ಆಪರೇಷನ್ ಕಮಲ ನಡಿತಾ ಇದೆ ಅಂತ ಅನುಮಾನಗಳು ಈಗ ಚರ್ಚೆಗೆ ಗ್ರಾಸವಾಗಿವೆ. ಈ ಉಪಚುನಾವಣೆ ಬಳಿಕ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುವ ಸಾಧ್ಯತೆ ಇದೆ. ಐವರು ಶಾಸಕರು ಯಾರು ಅನ್ನೋದು ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮತ್ತೆ ಕಾಂಗ್ರೆಸನ ಲಿಂಗಾಯತ ಶಾಸಕರಿಗೆ ಗಾಳ ಹಾಕಿದ್ದೀಯಾ ಬಿಜೆಪಿ ಅನ್ನೋದು ಚರ್ಚೆಗಳು ಜೋರಾಗಿದೆ