ಕರ್ನಾಟಕ
ನಿಲ್ಲದ ಡಿಕೆಶಿ ಶೋಭಾ ಕರಂದ್ಲಾಜೆ ಫೈಟ್

ಮಹಾಂತೇಶ ಇರಳಿ
ಮೈಸೂರು: ಡಿಕೆ ಶಿವಕುಮಾರ್ ಗುಂಡ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ. ಇಂದು ಮೈಸೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಶೋಭಾ ಕರಂದ್ಲಾಜೆಯವರು ಡಿಕೆಶಿ ಯಾವಾಗಲೂ ಗುಂಡಾಗಿರಿ ಮಾಡಿ ಚುನಾವಣೆಯಲ್ಲೂ ಪ್ರಯತ್ನ ಮಾಡುತ್ತಾರೆ. ಈಗ ಆರ್ ಆರ್ ನಗರ್ ಉಪಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಗುಂಡಾಗಿರಿ ಮಾಡೋ ಕೆಲಸ ಮಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಅವರ ಸಹೋದರ ಡಿಕೆ ಸುರೇಶ್ ಅವರೇ ಆದಿಭಾಗದ ಸಂಸದರಾಗಿದ್ದಾರೆ. ಹೀಗಾಗಿ ಎಲ್ಲ ಗೂಂಡಾಗಳು ಒಟ್ಟುಗೂಡಿಸಿ ಕಾನೂನು-ಸುವ್ಯವಸ್ಥೆ ಹಾಳುಮಾಡುತ್ತಿದ್ದಾರೆ. ಈ ಬಗ್ಗೆ ಭಾರತೀಯ ಜನತಾ ಪಾರ್ಟಿ ಚುನಾವಣಾ ಆಯೋಗಕ್ಕೂ ದೂರು ನೀಡಿದೆ. ಆರ್ ಆರ್ ನಗರ ದಲ್ಲಿ ಕಾನೂನು ಸುವಸ ಹದಗೆಡದಂತೆ ಕ್ರಮಕೈಗೊಳ್ಳಲು ಚುನಾವಣಾ ಆಗುತ್ತೆ ಮನವಿಮಾಡಿದೆ. ಆರ್ ಆರ್ ನಗರ ಮತ್ತು ಶಿರಾದಲ್ಲಿ ಬಿಜೆಪಿ ಗೆಲುವು ಶತಸಿದ್ಧ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.