ಬೆಳಗಾವಿ ಲೋಕಸಭೆ; ಇವರಲ್ಲಿ ಒಬ್ಬರು ಬಿಜೆಪಿ ಅಭ್ಯರ್ಥಿ ಪಕ್ಕಾ…!?

ಮಹಾಂತೇಶ ಇರಳಿ/ಶ್ರೀನಿವಾಸ ಪಟ್ಟಣ
ಬೆಳಗಾವಿ: ಕೇಂದ್ರ ಸಚಿವ ಸುರೇಶ ಅಂಗಡಿ ಅಕಾಲಿಕ ನಿಧನಿಂದ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಸ್ಥಾನ ತೆರುವಾಗಿದೆ. ಆದ್ರೆ ಬೆಳಗಾವಿ ಲೋಕಸಭೆ ಬಿಜೆಪಿಯ ಭದ್ರಕೋಟೆ. ಯಾವುದೇ ಕ್ಷಣದಲ್ಲೂ ಬೆಳಗಾವಿ ಲೋಕಸಭೆಗೆ ಚುನಾವಣೆ ದಿನಾಂಕ ಫಿಕ್ಸ್ ಆಗಬಹುದು. ಹೀಗಾಗಿ ಬಿಜೆಪಿ ಪಾಳ್ಯದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದಿನೇ ದಿನೇ ಬೆಳೆಯುತ್ತಾ ಸಾಗಿದೆ.

ಹೌದು.. ಬೆಳಗಾವಿ ಲೋಕಸಭೆ ಚುನಾವಣೆ ಡಿಸೆಂಬರ ಅಂತ್ಯದಲ್ಲಿ ನಡೆಯುವ ಸಾಧ್ಯತೆ ಇದೇ ಎಂದ ಊಹಿಸಲಾಗುತ್ತಿದೆ. ಹಾಗೇ ನೋಡಿದ್ರೆ ಬೆಳಗಾವಿ ಲೋಕಸಭೆ ತುಂಬಾ ವಿಶೇಷವಾಗಿದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರ ಕೋಟೆಯಾಗಿದ್ದ ಬೆಳಗಾವಿ ಲೋಕಸಭೆ.
ಆ ಬಳಿಕ ಕೇಸರಿ ಕೋಟೆಯಾಗಿ ಪರಿವರ್ತನೆಗೊಂಡಿತು. ಲಿಂಗಾಯತರು ಮತ್ತು ಮರಾಠಾ ಮತಗಳೇ ಇಲ್ಲಿ ನಿರ್ಮಾಣಯಕ. ಈ ಎರಡು ಸಮುದಾಯದ ಮತಗಳು ಬಿಜೆಪಿಯತ್ತ ಒಲವು ತೋರಿಸುತ್ತಾ ಬಂದಿದೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ ಪಕ್ಷಗಳು ಲಿಂಗಾಯತ ಅಭ್ಯರ್ಥಿಯನ್ನ ಕಣಕ್ಕಿಳಿಸಲು ಮೊದಲು ಆದ್ಯತೆ ನೀಡುತ್ತಾ ಬಂದಿದೆ.
ಈಗಾಗಲೇ ಸುರೇಶ ಅಂಗಡಿ ಕುಟುಂಬದವರಿಗೆ ಟಿಕೆಟ್ ನೀಡಬೇಕೆಂದು ಒಂದು ವರ್ಗ ಕೇಸರಿ ನಾಯಕರ ಮೇಲೆ ಒತ್ತಡ ಹಾಕುತ್ತಾ ಬಂದಿದೆ. ಆದ್ರೆ ಬಿಜೆಪಿ ಪಾರ್ಟಿಯಲ್ಲಿ ಯಾವಾಗ, ಯಾರಿಗೆ ಏನ ಹುದ್ದೆ ಸಿಗುತ್ತೇ ಅನ್ನೋದೆ ಒಂದು ಕುತೂಹಲ ಕೊನೆಯ ಕ್ಷಣದವರೆಗೂ ಇರುತ್ತದೆ. ಒಂದು ವೇಳೆ ಬಿಜೆಪಿ ಪಕ್ಷದಲ್ಲಿ ಅಂಗಡಿ ಕುಟುಂಬದ ಸದಸ್ಯರನ್ನ ಹೊರತು ಪಡಿಸಿ ಟಿಕೆಟ್ ರೇಸನಲ್ಲಿ ಸಾಕಷ್ಟು ಹೆಸರುಗಳು ಕೇಳಿ ಬರುತ್ತಿವೆ. ಅವು ಯಾವವು ಅಂದ್ರೆ ಹಿರಿಯ ಬಿಜೆಪಿ ಲೀಡರ್ ಎಂ.ಬಿ.ಜಿರಲಿ, ಮಾಜಿ ಶಾಸಕರಾದ ಡಾ. ವಿಶ್ವನಾಥ ಪಾಟೀಲ್, ಸಂಜಯ ಪಾಟೀಲ್, ಜಗದೀಶ ಮೆಟಗುಡ್ಡ, ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್ ಅವರ ಹೆಸರುಗಳು ಕೇಳಿ ಬರುತ್ತಿವೆ. ಇನ್ನು ಯುವ ಲೀಡರಗಳಲ್ಲಿ ಬಿಜೆಪಿ ಮುಖಂಡರಾದ ವೀರೇಶ ಕಿವಡಸನ್ನವರ, ರಾಜು ಚಿಕ್ಕನಗೌಡ, ಮಹಾಂತೇಶ ವಕ್ಕುಂದ, ಕಿರಣ ಜಾಧವ, ರಾಜೀವ ಟೋಪ್ಪಣ್ಣವರ ಹೀಗೆ ಸಾಲು ಸಾಲು ಹೆಸರಗಳು ಕೇಳಿ ಬರುತ್ತಿವೆ.
ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅನುಕಂಪದ ಆಧಾರದ ಮೇಲೆ ಟಿಕೆಟ್ ಕೊಡಲು ನಿರ್ಧರಿಸಿದ್ರೆ ಅಂಗಡಿ ಕುಟಂಬದವರಿಗೆ ಟಿಕೆಟ್ ಸಿಗುವುದು ಪಕ್ಕಾ. ಆಗ ಸುರೇಶ ಅಂಗಡಿ ಮುದ್ದಿನ ಸುಪುತ್ರಿ, ಜಗದೀಶ ಶೆಟ್ಟರ ಮುದ್ದಿನ ಸೊಸೆ ಶ್ರದ್ಧಾ ಶೆಟ್ಟರ ಅಖಾಡಕ್ಕೆ ಇಳಿಯುತ್ತಾರೆ. ಇದೇಲ್ಲವೂ ಆರ.ಎಸ.ಎಸ ಮತ್ತು ಬಿಜೆಪಿ ಹೈಕಮಾಂಡ ಅಂತಿಮವಾಗಿ ನಿರ್ಧಾರ ಮಾಡಲಿದೆ.
ಬೆಳಗಾವಿ ಜಿಲ್ಲೆ ಕೆಲ ಸಚಿವರು, ಶಾಸಕರು ಅಂಗಡಿ ಪರವಾಗಿದ್ದರೇ, ಮತ್ತೆ ಕೆಲವರು ಸೀನಿಯರ್ ಲೀಡರಗಳಿಗೆ ಕೊಡ್ರೀ ಅಂತಾ ಹೇಳುತ್ತಿದ್ದಾರೆ. ಇನ್ನು ಕೆಲ ಮುಖಂಡರು ಯುವ ಲೀಡರಗಳಿಗೆ ಟಿಕೆಟ್ ನೀಡುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಚುನಾವಣೆ ದಿನಾಂಕ ಘೋಷಣೆ ಆಗಿಲ್ಲ ಈಗಲೇ ಬಿಜೆಪಿ ಪಾಳ್ಯದಲ್ಲಿ ಚುನಾವಣೆ ತಯಾರಿ ಆರಂಭವಾಗಿದೆ. ಇನ್ನೇನಿದ್ದರೂ ಕೇಸರಿ ದಂಡ ನಾಯಕರು ಸುರೇಶ ಅಂಗಡಿ ಉತ್ತರಾಧಿಕಾರಿ ಹೆಸರನ್ನ ಘೋಷಣೆ ಮಾಡುವುದೊಂದೆ ಬಾಕಿಯಿದೆ.