ಮತ್ತೆ ಪ್ರೇಮಕವಿ ಬಾಳಲ್ಲಿ ಕಲ್ಯಾಣ..!?

ಬೆಳಗಾವಿ: ಮತ್ತೆ ಪ್ರೇಮಕವಿ ಕೆ.ಕಲ್ಯಾಣ ಬಾಳಿನಲ್ಲಿ ಕಲ್ಯಾಣ ಆಗಲಿದೆ. ಯಾಕಂದ್ರೆ ಕೆ.ಕಲ್ಯಾಣ ದಾಂಪತ್ಯ ಜೀವನದಲ್ಲಿ ಬಿಟ್ಟಿದ್ದ ಬಿರುಕು ಸುಖಾಂತವಾಗುತ್ತಿದೆ. ಕಲ್ಯಾಣ ಪತ್ನಿ ಅಶ್ವಿನಿ ಬೆಳಗಾವಿ ಕೌಟುಂಬಿಕ ಕೋರ್ಟನಲ್ಲಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನ ವಾಪಸ್ ಪಡೆದುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಖಚಿತ ಪಡಿಸಿವೆ.
ಹೌದು… ಖ್ಯಾತ ಸಂಗೀತ ನಿರ್ದೇಶಕ, ಪ್ರೇಮಕವಿ ಕಲ್ಯಾಣ ಅಶ್ವಿನಿ ಜೊತೆಗೆ ಗ್ರ್ಯಾಂಡ್ ಆಗಿಯೇ ಮದುವೆ ಆಗಿದ್ದರೂ. 14 ವರ್ಷಗಳ ಕಾಲ ಕಲ್ಯಾಣ ದಾಪಂತ್ಯ ಜೀವನ ಅನ್ಯೋನವಾಗಿಯೇ ಇತ್ತು. ಆದ್ರೆ ಯಾವಾಗ ಕಲ್ಯಾಣ ಮನೆಗೆ ಅಡುಗೆ ಕೆಲಸಕ್ಕೆಂದು ಬಂದ ಗಂಗಾ ಕುಲಕರ್ಣಿ. ಕಲ್ಯಾಣ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎಬ್ಬಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಯಾಕೆಂದ್ರೆ ಇದೇ ಗಂಗಾ ಕುಲಕರ್ಣಿ ಮತ್ತು ಶಿವಾನಂದ ವಾಲಿ ಒಟ್ಟಾಗಿ ಸ್ಕೆಚ್ ಹಾಕಿ, ಕಲ್ಯಾಣ ಬಾಳಲ್ಲಿ ಹುಳಿ ಹಿಂಡಿದ್ದರು. ಮಾಟಮಂತ್ರ ಮಾಡಿ ಕಲ್ಯಾಣ ಅಶ್ವಿನಿ ಇಬ್ಬರು ಬೇರೆಯಾಗುವಂತೆ ಮಾಡಿದ್ದರು. ಗಂಗಾ ಮತ್ತು ಶಿವಾನಂದ ಮಾತು ಕೇಳಿ ಅಶ್ವಿನಿ ಕಲ್ಯಾಣನನ್ನ ಬಿಟ್ಟು ಬೆಳಗಾವಿಯಲ್ಲಿ ಬಂದು ನೆಲೆಸಿದ್ದಳು. ಅಲ್ಲದೇ, ಬೆಳಗಾವಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿಯನ್ನ ಸಲ್ಲಿಸಿದ್ದರು. ಇತ್ತ ಕಲ್ಯಾಣ ಸಹ ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪತ್ನಿ ಕಿಡ್ನಾ ಮತ್ತು ಪತ್ನಿ ಅತ್ತೆ ಮಾವಂದಿರ ಆಸ್ತಿ ಲಪಟಾಯಿಸಿದ್ದಾರೆ ಎಂದು ಗಂಗಾ, ಶಿವಾನಂದ ವಿರುದ್ಧ ಕೇಸ್ ನೀಡಿದ್ದರು.
ಇನ್ನು ಕೆ.ಕಲ್ಯಾಣ ದೂರಿನ್ವಯ ತನಿಖೆ ನಡೆಸಿದ ಬಿ.ಆರ್. ಗಡ್ಡೇಕರ ನೇತೃತ್ವದ ಪೊಲೀಸರ ತಂಡವು ಗಂಗಾ ಮತ್ತು ಶಿವಾನಂದನ ಅಸಲಿ ಮುಖವಾಡ ಕಳಚುವಂತೆ ಮಾಡಿದ್ದಾರೆ. ಅಲ್ಲದೇ, ಕಲ್ಯಾಣ ಪತ್ನಿ ಅಶ್ವಿನಿ ಮತ್ತು ಅವರ ಕುಟುಂಬ ಸದಸ್ಯರಿಂದ ಲಕ್ಷಾಂತರ ರುಪಾಯಿ ಹಣ ಮತ್ತು ಕೋಟ್ಯಾಂತರ ಮೌಲ್ಯದ ಆಸ್ತಿ ಲಪಟಾಯಿಸಿರುವುದನ್ನ ಪತ್ತೆ ಮಾಡಿದ್ದಾರೆ. ಕಲ್ಯಾಣ ಪತ್ನಿಗೆ ಹಣ, ಆಸ್ತಿಗಾಗಿ ಅವರ ಸಂಸಾರವನ್ನ ಆರೋಪಿಗಳು ಹಾಳು ಮಾಡಿರುವ ವಿಚಾರವನ್ನ ಮನದಟ್ಟು ಮಾಡಿಕೊಟ್ಟಿದ್ದಾರೆ. ಅಲ್ಲದೇ, ಆರೋಪಿ ಶಿವಾನಂದ ವಾಲಿಯಿಂದ 6 ಕೋಟಿ ಮೌಲ್ಯದ ಆಸ್ತಿಯನ್ನ ಪೊಲೀಸರು ಜಪ್ತಿ ಮಾಡಿದ್ದಾರೆ.

ಇನ್ನು ಗಂಗಾ ಮತ್ತು ಶಿವಾನಂದ ಕುಲಕರ್ಣಿಯಿಂದ ಮೋಸಕ್ಕೆ ಒಳಗಾಗಿರುವ ವಿಚಾರ ಗೊತ್ತಾಗುತ್ತಿದ್ದಂತೆ ಕಲ್ಯಾಣ ಪತ್ನಿ ಅಶ್ವಿನಿ ಮಾಧ್ಯಮಗಳ ಮುಂದೆ ಪ್ರತ್ಯೇಕ್ಷವಾಗಿ ಕೇಸ್ ವಾಪಸ್ ಪಡೆಯುವ ನಿರ್ಧಾರವನ್ನ ತಿಳಿಸಿದ್ದರು. ಆದಷ್ಟು ಬೇಗ ಕಲ್ಯಾಣ ಅವರ ಜೊತೆಗೆ ಮಾತನಾಡಿ ಇರುವ ಗೊಂದಲಗಳನ್ನ ನಿವಾರಿಸಿಕೊಂಡು ಮುಂದಿನ ತೀರ್ಮಾನ ಮಾಡ್ತಿನಿ ಅಂತಾ ಹೇಳಿದ್ದರು. ಅದರಂತೆ ಎರಡು ದಿನಗಳ ಹಿಂದೆ ಬೆಳಗಾವಿ ಫ್ಯಾಮಿಲಿ ಕೋರ್ಟನಲ್ಲಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನ ಕಲ್ಯಾಣ ಪತ್ನಿ ಅಶ್ವಿನಿ ವಾಪಸ ಪಡೆದುಕೊಂಡಿದ್ದಾರೆ. ಆದಷ್ಟು ಬೇಗ ಕಲ್ಯಾಣ ಮತ್ತವರ ಪತ್ನಿ ಅಶ್ವಿನಿ ಪರಸ್ಪರ ಭೇಟಿಯಾಗಲಿದ್ದಾರೆ. ಕಲ್ಯಾಣ ಅಶ್ವಿನಿ ದಂಪತಿ ಅವರಿಬ್ಬರ ಮಧ್ಯೆ ಇರುವ ಸಮಸ್ಯೆಗಳು, ಗೊಂದಲಗಳನ್ನ ನಿವಾರಿಸಿಕೊಂಡು ಮತ್ತೆ ಹೊಸ ಬಾಳು ಆರಂಭಿಸಲಿ ಎನ್ನುವುದೇ ಕನ್ನಡಿಗರ ಹಾರೈಕೆ.