ಗುಡ್ ನ್ಯೂಸ್
ಜ್ಯೂನಿಯರ್ ಚಿರುಗೆ ಜನ್ಮ ನೀಡಿದ ಮೇಘನಾ ಸರ್ಜಾ

ಮಹಾಂತೇಶ ಇರಳಿ
ಬೆಂಗಳೂರು: ನಟಿ ಮೇಘನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಚಿತ್ರ ನಟ ಚಿರಂಜೀವಿ ಸರ್ಜಾ ನಿಧನರಾಗಿದ್ದರು. ಚಿರು ನಿಧನದ ಬಳಿಕ ನಟಿ ಮೇಘನರ ಗರ್ಭಿಣಿ ಇರೋ ವಿಚಾರ ಗೊತ್ತಾಗಿತ್ತು. ಚಿರು ಅಭಿಮಾನಿಗಳು ಮತ್ತೆ ನಟ ಚಿರಂಜೀವಿ ಜನ್ಮ ವಾಗಲಿ ಅಂತ ಹಾರೈಸಿದರು. ಅದರಂತೆ ಇಂದು ಚಿರು ಪತ್ನಿ ನಟಿ ಮೇಘನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಚಿರು ಕುಟುಂಬದಲ್ಲಿ ಜೂನಿಯರ ಚಿರಂಜೀವಿ ಮತ್ತೆ ಜನ್ಮ ಪಡೆದುಕೊಂಡಂತಾಗಿದೆ. ಗಂಡು ಮಗವನ್ನ ನಟ, ಸಹೋದರ ದ್ರುವ ಸರ್ಜಾ ಎತ್ತುಕೊಂಡು ಮುದ್ದಾಡಿದರು. ಸರ್ಜಾ ಕುಟುಂಬದಲ್ಲಿ ಸಂತೋಷದ ಸಂಭ್ರಮ. ಚಿರು ಕಳೆದುಕೊಂಡ ನೋವಿನಲ್ಲಿದ್ದ ಸರ್ಜಾ ಕುಟುಂಬಕ್ಕೆ ಜೂನಿಯರ್ ಚಿರು ಸರ್ಜಾ ಸಂತೋಷವನ್ನು ತೆಗೆದುಕೊಂಡು ಬಂದಿದ್ದಾನೆ. ಮತ್ತೆ ನಟ ಚಿರಂಜೀವಿ ಸರ್ಜಾ ಮೇಘನಾ ಪುತ್ರನಾಗಿ ಜನ್ಮ ಪಡೆದುಕೊಂಡಿದ್ದಾನೆ. ಕುಟುಂಬಸ್ಥರು,ಅಭಿಮಾನಿಗಳ ಹರ್ಷಕ್ಕೆ ಪರಾವೆ ಇಲ್ಲದಂತಾಗಿದೆ. ಪಟಾಕಿ ಸಿಡಿಸಿ ಸಿಹಿ ತಿನಿಸಿ ಸಂಭ್ರಮಾಚರಣೆ.