ಕರ್ನಾಟಕ
ಬಿಜೆಪಿ ಪಾರ್ಟಿಯಿಂದಲೇ ಯತ್ನಾಳ ಓಟ್ ಆಗ್ತಾರಾ..

ಮಹಾಂತೇಶ ಇರಳಿ
ಕೊಪ್ಪಳ: ಬಸನಗೌಡ ಪಾಟೀಲ್ ಯತ್ನಾಳರನ್ನ ಪಾರ್ಟಿಯಿಂದ ಹೊರ ಹಾಕುವಂತೆ ಪಕ್ಷದ ಅಧ್ಯಕ್ಷರಿಗೆ ಹೇಳಿದ್ದೇನೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಸ್ವರ್ಗದಿಂದ ಬಂದರೂ ಬಿಜೆಪಿ ಸರ್ಕಾರವನ್ನ ಬೀಳಿಸಲು ಆಗುವುದಿಲ್ಲ.
ಯತ್ನಾಳ್ ಹೇಳಿಕೆ ಮೂರ್ಖತನದ್ದಾಗಿದೆ. ಇಂತಹ ಹೇಳಿಕೆಗಳಿಗೆ ಬೆಲೆ ಕೊಡ ಬೇಕಿಲ್ಲ. ತಕ್ಷಣ ಬಿಜೆಪಿ ಪಕ್ಷದಿಂದ ಹೊರ ಹಾಕುವಂತೆ ರಾಜ್ಯಾಧ್ಯಕ್ಷ ಕಟೀಲ ಅವರಿಗೆ ನಾನು ಮನವಿ ಮಾಡುವೆ. ಯತ್ನಾಳ ಅವರಿಗೆ ನೊಟೀಸ್ ಕೊಡುವ ಅಗತ್ಯವಿಲ್ಲ.

ಯತ್ನಾಳ್ ವಿರುದ್ಧ ಬಿಜೆಪಿ ಪಕ್ಷ ಕ್ರಮಕೈಗೊಳ್ಳಲಿದೆ. ಯತ್ನಾಳ ಬಾಯಿ ಚಪಲಕ್ಕೆ ಮಾತನಾಡಿದ್ದಾರೆ. ಸಿಎಂ ನೇತೃತ್ವದ ಶಾಸಕಾಂಗ ಸಭೆಯಲ್ಲಿ ನಿಮ್ಮ ಕ್ಷೇತ್ರದಲ್ಲಿ ಏನೇನಾಗಬೇಕು ಅಂತಾ ಕೇಳಿದ್ದಾರೆ. ಅವತ್ತು ಸುಮ್ಮನಿದ್ದವರು ಈಗ ಉತ್ತರನ ಪೌರುಷನಂತೆ ಮಾತನಾಡಿದ್ದಾರೆ. ಯತ್ನಾಳ ಹೇಳಿಕೆ ಕಾಂಗ್ರೆಸ್ ವ್ಯಕ್ತಿಗಳಿಗೆ ಸಂತೋಷವಾಗಿದೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.