ಟಾಪ್ ಸ್ಟೋರಿ

ಕೋವಿಡ್ ಟೆಸ್ಟ್ ಕ್ವೀನ್ ಪ್ರೀತಿ ಜಿಂಟಾ


ಮಹಾಂತೇಶ ಇರಳಿ
ಬೆಂಗಳೂರು: ಕೊರೊನಾ ಅಟ್ಟಹಾಸದ ಮಧ್ಯೆಯೂ ಮರುಗಾಡಿನಲ್ಲಿ ಐಪಿಎಲ್ 13ನೇ ಆವೃತ್ತಿ ಧಮಾಕ ಜೋರಾಗಿದೆ. ಆದ್ರು ಸ್ಟಾರ್ ಕ್ರಿಕೆಟ್ ಆಟಗಾರರ ಬಗ್ಗೆ ತಂಡ ಮಾಲೀಕರು ತುಂಬಾ ಕಾಳಜಿ ತೋರಿಸುತ್ತಿದ್ದಾರೆ. ಅದರಲ್ಲೂ ಬಾಲಿವುಡ ಖ್ಯಾತ ನಟಿ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕಿ ಪ್ರೀತಿ ಜಿಂಟಾ ಬರೊಬ್ಬರಿ 20 ಬಾರಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದಾರೆ.

ಯಸ್.. ಐಪಿಎಲ್ – 2020ರ 13ನೇ ಸೀಸನ್ ದುಬೈನಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಇನ್ನು ಆಯಾ ಕ್ರಿಕೆಟ್ ತಂಡದ ಮಾಲೀಕರು ಸಹ ದುಬೈನಲ್ಲಿಯೇ ಬೀಡು ಬಿಟ್ಟಿದ್ದಾರೆ. ಅದರಲ್ಲೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮಾಲೀಕೆ ಪ್ರೀತಿ ಜಿಂಟಾ ಸಹಾ ತಂಡದ ಜೊತೆಗೆ ಇದ್ದಾರೆ. ಹೀಗಾಗಿ ನಿರಂತರವಾಗಿ ಕೋವಿಟ್ ಟೆಸ್ಟ್ ಮಾಡಿಕೊಳ್ಳುತ್ತಾ ಬಂದಿದ್ದಾರೆ ಪ್ರೀತಿ ಜಿಂಟಾ.

ಈ ಬಗ್ಗೆ ತನ್ನ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊ ಅನ್ನ ಪೋಸ್ಟ್ ಮಾಡಿದ್ದು, ಈ ಮೂಲಕ ತಾವು ಕೋವಿಡ್ ಪರೀಕ್ಷಾ ರಾಣಿ ಎಂದು ವರ್ಣಿಸಿಕೊಂಡಿದ್ದಾರೆ.20 ಬಾರಿ ಟೆಸ್ಟ್ ಮಾಡಿದ್ರು ಕೋವಿಡ್ ರಿಪೋರ್ಟ್ ನೆಗೆಟಿವ್ ಬಂದಿದೆ. ಜೊತೆಗೆ ಕೋವಿಡ್ ಟೆಸ್ಟ್ ಮಾಡುವ ವೈದ್ಯರ ಬಗ್ಗೆ ಮೆಚ್ಚುಗೆ ಮಾತುಗಳನ್ನ ಡಿಂಪಲ್ ಕ್ವೀನ್ ಪ್ರೀತಿ ಜಿಂಟಾ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!