ಸಿಎಂ ಯಡಿಯೂರಪ್ಪ ಕುರ್ಚಿ ಗಟ್ಟಿಯಾಗಿಲ್ಲ; ಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಆಗ್ತಾರೆ: ಬಸನಗೌಡ ಪಾಟೀಲ ಸಿಡಿಸಿದ ಬಾಂಬ್

ವಿಜಯಪುರ : ಮತ್ತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಸನಗೌಡ ಪಾಟೀಲ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಬಹಳ ದಿನಗಳ ಕಾಲ ಸಿಎಂ ಕುರ್ಚಿಯಲ್ಲಿ ಉಳಿಯುವುದಿಲ್ಲ.
ಬಿಜೆಪಿ ಹೈಕಮಾಂಡಿಗೆ ಯಡಿಯೂರಪ್ಪ ಸಾಕಾಗಿದೆ. ಉತ್ತರ ಕರ್ನಾಟಕದವರ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಲಿದ್ದಾರೆ. ಉತ್ತರ ಕರ್ನಾಟಕದಿಂದ ಬಿಜೆಪಿಗೆ ಹೆಚ್ಚಿನ ಎಂಎಲ್ಎ ಗಳನ್ನ ಆಯ್ಕೆ ಮಾಡೋದು. ಇನ್ಯಾರು ಮುಖ್ಯಮಂತ್ರಿಯಾಗ್ತಾರೆ.
ಈಗಾಗಲೇ ಯಡಿಯೂರಪ್ಪನವರ ವಿರುದ್ಧ ಉಮೇಶ್ ಕತ್ತಿ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬಿಡುಗಡೆ ಮಾಡಿದ್ದ ಅನುದಾನವನ್ನು ಯಡಿಯೂರಪ್ಪನವರು ತಡೆ ಹಿಡದಿದ್ದಾರೆ. ವಿಜಯಪುರ ಜಿಲ್ಲೆಗೆ 125 ಕೋಟಿ ರೂಪಾಯಿ ಅನುದಾನವನ್ನು ಕುಮಾರಸ್ವಾಮಿ ನೀಡಿದ್ದರು. ಈ ವಿಚಾರವಾಗಿ ನನಗೂ ಯಡಿಯೂರಪ್ಪ ಮಧ್ಯೆ ಜಟಾಪಟಿ ಯಾಗಿದೆ. ಹೀಗೆ ಮತ್ತೊಮ್ಮೆ ಸಿಎಂ ಬಿಎಸವೈ ವಿರುದ್ಧ ಬಸನಗೌಡ ಪಾಟೀಲ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಯತ್ನಾಳ ಮಾತುಗಳು ಈಗ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಆಗಿರುವ ಬಸನಗೌಡ ಪಾಟೀಲ್ ಬಿಎಸ್ವೈ ಸಂಪುಟದಲ್ಲಿ ಕಡೆಗಣಿಸುತ್ತಿರುವುದು ಈ ಆಕ್ರೋಶಕ್ಕೆ ಕಾರಣವಾಗಿದೆಯಾ. ಬಸನಗೌಡ ಪಾಟೀಲ್ ಅವರ ಈ ಹೇಳಿಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಅಸ್ತ್ರವಾಗಿ ಸಿಕ್ಕಿದೆ. ಆರ್ ಆರ್ ನಗರ ಮತ್ತು ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿಗೆ ಬಸನಗೌಡ ಪಾಟೀಲ್ ಅವರ ಈ ಹೇಳಿಕೆಯೇ ಅಸ್ತ್ರವಾಗಿದೆ. ಕೇಸರಿ ನಾಯಕರಿಗೆ ಯತ್ನಾಳ ಹೇಳಿಕೆ ಇಕ್ಕಟ್ಟಿಗೆ ಸಿಲುಕಿಸಿದೆ.