ಕರ್ನಾಟಕ

ರಾಜಕೀಯ ಷಡ್ಯಂತ್ರ ಗೆದ್ದ ಡಿಸಿಎಂ ಲಕ್ಷ್ಮಣ ಸವದಿ…!


ಶ್ರೀನಿವಾಸ ಪಟ್ಟಣ/ಮಹಾಂತೇಶ ಇರಳಿ

ಬೆಳಗಾವಿ: ಡಿಸಿಎಂ ಲಕ್ಷ್ಮಣ ಸವದಿ ಕರ್ನಾಟಕ ರಾಜ್ಯದ ಪವರ್ ಪುಲ್ ನಾಯಕ. ಸೋಲು-ಗೆಲುವುಗಳನ್ನ ಅನುಭವಿಸಿಯೇ ರಾಜಕೀಯದಲ್ಲಿ ಎತ್ತರಕ್ಕೆ ಬೆಳೆದ ಕೇಸರಿ ಕಲಿ.

ಹಾಗೇ ನೋಡಿದ್ರೆ ಲಕ್ಷ್ಮಣ ಸವದಿ ರೈತ ಕುಟುಂಬದಿಂದ ಬಂದಿದ್ದಾರೆ. ಕೃಷಿಯೇ ಲಕ್ಷ್ಮಣ ಸವದಿ ಕುಟುಂಬದ ಮೂಲ ಕಾಯಕ. ಅನಂತರ ರೈತ ಪರ, ಬಡವರ ಪರ ಹೋರಾಟಗಳನ್ನ ಮೈಗೂಡಿಸಿಕೊಂಡು ಬೆಳೆದವರು ಲಕ್ಷ್ಮಣ ಸವದಿ. ಅದರಲ್ಲೂ ರೈತ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿ ಇದ್ದುಕೊಂಡು ನಾಯಕ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಿ.ಕೆ.ನಾಗನೂರು ಗ್ರಾಮದವರಾದ ಲಕ್ಷ್ಮಣ ಸಾಹುಕಾರ.

ಸಹಕಾರ ರಂಗದಲ್ಲಿ ಯಾರು ಊಹಿಸಿದ ಮಟ್ಟಕ್ಕೆ ಬೆಳೆದವರು. ರೈತರಿಗೆಗಾಗಿಯೇ ಸಹಕಾರಿ ಸಕ್ಕರೆ ಕಾರ್ಖಾನೆಯನ್ನ ಆರಂಭಿಸಿ, ರೈತರ ಬೆನ್ನೇಲುಬಾಗಿ ನಿಂತವರು. ಇನ್ನು ಹಾಗೇ ನೋಡಿದ್ರೆ ಅಥಣಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ ಪಕ್ಷ ಪ್ರಬಲವಾಗಿತ್ತು. ಆಗ ಲಕ್ಷ್ಮಣ ಸವದಿ ಮೊದಲ ಬಾರಿಗೆ ಚುನಾವಣೆ ಅಖಾಡಕ್ಕೆ ಧುಮುಕಲು ಮುಂದಾಗುತ್ತಾರೆ. ಆಗ ಯಾವುದೇ ಅವರು ನಿರೀಕ್ಷಿಸಿದ್ದ ಪಕ್ಷದಿಂದ ಟಿಕೆಟ್ ಸಿಗುವುದಿಲ್ಲ. ಸ್ವತಂತ್ರ ಅಭ್ಯರ್ಥಿಯಾಗಿ ಲಕ್ಷ್ಮಣ ಸವದಿ ಚುನಾವಣಾ ಕಣಕ್ಕೆ ಇಳಿಯುತ್ತಾರೆ. ಆಗ ಲಕ್ಷ್ಮಣ ಸವದಿ ಚುನಾವಣೆ ಗುರುತು ವಿಮಾನ.

ವಿಮಾನ ಗುರುತಿನಿಂದ ಸ್ಪರ್ಧಿಸಿ ಲಕ್ಷ್ಮಣ ಸವದಿಯವರಿಗೆ ಸೋಲಾಗುತ್ತದೆ. ಆದ್ರೆ ಈ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಸೋತು ಗೆಲ್ಲುತ್ತಾರೆ. ಅಥಣಿ ಮತಕ್ಷೇತ್ರದಲ್ಲಿ ಲಕ್ಷ್ಮಣ ಸವದಿ ಎಂಬ ಹೊಸ ನಾಯಕತ್ವದ ಅಲೆ ಸೃಷ್ಟಿಯಾಗುತ್ತದೆ. ಅನಂತರ ಬಂದ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಬಿಜೆಪಿ ಪಕ್ಷದಿಂದ ಅಖಾಡಕ್ಕೆ ಇಳಿಯುತ್ತಾರೆ. ರಾಜ್ಯದಲ್ಲಿ ಯಡಿಯೂರಪ್ಪನವರ ನಂತರ ಅತ್ಯಂತ ಅಂತರ ಮತಗಳಿಂದ ಗೆದ್ದು ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಮಂತ್ರಿಯು ಆಗ್ತಾರೆ.

ಅನಂತರ ಹಿಂದೆ ತಿರುಗಿ ಲಕ್ಷ್ಮಣ ಸವದಿ ನೋಡಲೇ ಇಲ್ಲ. ಅನಂತರ ಬಂದ ಎಲ್ಲಾ ಚುನಾವಣೆಗಳಲ್ಲಿ ಗೆದ್ದು ಅಥಣಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಗಲು-ರಾತ್ರಿ ಶ್ರಮಿಸುತ್ತಾರೆ. ಅದೇ 2018 ವಿಧಾನಸಭೆ ಚುನಾವಣೆಯಲ್ಲಿ ಲಕ್ಷ್ಮಣ ಸವದಿಗೆ ರಾಜಕೀಯ ಷಡ್ಯಂತ್ರದಿಂದ ಸೋಲಾಗುತ್ತದೆ.

ಚುನಾವಣೆಯಲ್ಲಿ ಸೋತರು ಬಿಜೆಪಿ ಲಕ್ಷ್ಮಣ ಸವದಿ ಅವರನ್ನ ಬಿಜೆಪಿ ರೈತ ಮೋರ್ಚಾದ ರಾಜ್ಯಾಧ್ಯಕ್ಷ ಹುದ್ದೆಯನ್ನ ನೀಡುತ್ತದೆ. ಲಕ್ಷ್ಮಣ ಸವದಿ ಪಕ್ಷಕೊಟ್ಟ ಜವಾಬ್ದಾರಿಯಂತೆ ರೈತ ಮೋರ್ಚಾ ಗಟ್ಟಿಗೊಳಿಸುವ ಕಾರ್ಯವನ್ನ ಮಾಡುತ್ತಾರೆ. ಅನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ದೇಶದಲ್ಲಿಯೇ ನಡೆಯದ ಪವಾಡದಂತೆ ಲಕ್ಷ್ಮಣ ಸವದಿ ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿ ಆಗ್ತಾರೆ.

ಅಲ್ಲದೇ, ಸಚಿವರಾಗಿ ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಬಿಜೆಪಿಯಲ್ಲಿ ಪ್ರಬಲ ಲಿಂಗಾಯತ ನಾಯಕನಾಗಿ ಗುರುತಿಸಿಕೊಂಡಿರುವ ಲಕ್ಷ್ಮಣ ಸವದಿ ತಮ್ಮ ವಾಕ್ ಚಾತುರ್ಯದಿಂದ ಮಾಸ್ ಲೀಡರ್ ಆಗಿ ಬೆಳೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಹುದ್ದೆಗಳು ಲಕ್ಷ್ಮಣ ಸವದಿ ಅವರಿಗೆ ಹುಡುಕಿಕೊಂಡು ಬರಲಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!