ಜುಬ್ಬಾ ಧರಿಸಿ ನೇಕಾರರ ನೆರವಿಗೆ ನಿಂತ ದುನಿಯಾ ವಿಜಯ

ಶ್ರೀನಿವಾಸ ಪಟ್ಟಣ
ಬೆಂಗಳೂರು:ಕೊರೊನಾದಿಂದ ತತ್ತರಿಸಿದ ನೇಕಾರರ ನೆರವಿಗೆ ಧಾವಿಸುವಂತೆ ದುನಿಯಾ ವಿಜಯ ಮನವಿ ಮಾಡಿಕೊಂಡಿದ್ದಾರೆ. ಕೊರೊನಾದಿಂದ ತತ್ತರಿಸಿದ ಸಾವಿರಾರು ಕುಟುಂಬಗಳ ಬದುಕು ನರಕವಾಗಿದೆ. ಬಹಳಷ್ಟು ಜನರ ಕೈಯಲ್ಲಿ ಉದ್ಯೋಗವಿಲ್ಲ, ಸಿದ್ಧ ಪಡಿಸಿದ ವಸ್ತುಗಳು ಮಾರಾಟವಾಗದೇ ಪರದಾಡುತ್ತಿದ್ದಾರೆ ಶ್ರಮಜೀವಿಗಳು.
ಹೀಗಾಗಿ ನಟ ದುನಿಯಾ ವಿಜಯ ಸಾರ್ವಜನಿಕರಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿಕೊಳ್ಳಿತ್ತಿದ್ದಾರೆ. ನಟ ದುನಿಯಾ ವಿಜಯ್ ತಮ್ಮ ಫೇಸ್‌ಬುಕ್ ಅಕೌಂಟ್ ನಲ್ಲಿ ಖಾದಿ ಬಟ್ಟೆ ಧರಿಸಿದ ಪೋಟೋ ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ ದುನಿಯಾ ವಿಜಯ ಅಕ್ಷರಗಳ ಮೂಲಕ ತಮ್ಮ ಮನದಾಳ ಮಾತುಗಳನ್ನ ಅಭಿಮಾನಿಗಳು, ಕನ್ನಡಿಗರ ಮುಂದೆ ಇಟ್ಟಿದ್ದಾರೆ.
ದುನಿಯಾ ವಿಜಯ ಫೇಸಬುಕ್ ನಲ್ಲಿ “”ನಾವು ಮಾತಾಡೋ ಭಾಷೆ ಕನ್ನಡ, ಕುಡಿಯೋ ನೀರು ಕಾವೇರಿ ನಿಂತಿರೋ ನೆಲ ಕರ್ನಾಟಕವಾಗಿರೋವಾಗ. ನಾವು ಹಾಕೋ ಬಟ್ಟೆ ಕೂಡ ಕನ್ನಡವಾಗಿರಬೇಕು. ಇದು ನಮ್ಮ ಜನ ನಮ್ಮ ನೆಲದಲ್ಲಿ ಬೆಳೆದ ಹತ್ತಿಯಿಂದ ಚರಕದಲ್ಲಿ ನೂಲು ತೆಗೆದು ಕೈಮಗ್ಗದಲ್ಲಿ ನೆೈಯ್ದ ಬಟ್ಟೆ ನಮ್ಮ ಜನರ ಬೆವರಿನ ಫಲ. ಕೊರೋನಾ ಪಿಡುಗು ಶುರುವಾದಾಗಿನಿಂದ ದೇಸಿ ಸಂಸ್ಥೆಯ ನೇಕಾರರು ತಯಾರಿಸುವ ಬಟ್ಟೆ ಸುಮಾರಿದೆ. ಹನಿಹನಿಗೂಡಿದರೆ ಹಳ್ಳ ಅನ್ನೋಹಾಗೆ ನೀವೆಲ್ಲರೂ ಒಂದೊಂದು ಬಟ್ಟೆ ಖರೀದಿಸಿದರೂ ನಮ್ಮ ನೇಕಾರರ ಬೆವರಿನ ದುಡಿಮೆಗೆ ಹೆಗಲಾಗಿ ನಿಂತಂತೆ. ಬನ್ನಿ ಸೌತ್ ಎಂಡ್ ಸರ್ಕಲ್, ಸೀತಾಸರ್ಕಲ್, ಕೆಂಗೇರಿ ಮತ್ತು ಮಲ್ಲೇಶ್ವರಂನ ‘ದೇಸಿ ‘ ಅಂಗಡಿಗಳಲ್ಲಿ ಕೈಮಗ್ಗದ ಬಟ್ಟೆಗಳನ್ನು ಕೊಳ್ಳೋಣ. ನಮ್ಮತನವನ್ನು ಉಳಿಸಿಕೊಳ್ಳೋಣ.”” ಅಂತಾ ತಮ್ಮ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ. ದುನಿಯಾ ವಿಜಯ್ ನೇಕಾರರ ನೆರವಿಗೆ ನಿಂತಿರುವುದು ನಿಜಕ್ಕೂ ಒಳ್ಳೆಯ ಸಂಗತಿ. ಕಷ್ಟದಿಂದ ಬೆಳೆ ವಿಜಿ ತಮ್ಮ ಸಾಮಾಜಿಕ ಜವಾಬ್ದಾರಿ ಯನ್ನ ಎತ್ತಿ ಹಿಡಿಯುವ ಕೆಲ ಮಾಡಿದ್ದಾರೆ.