ಕರ್ನಾಟಕ

ಕಾಂಗ್ರೆಸ್ ಪಾಕನಲ್ಲಿ ಗೆಲ್ಲಬೇಕು… ಭಾರತ ದೇಶದಲ್ಲಿ ಅಲ್ಲ-ಸಚಿವ ಸಿಟಿ ರವಿ ಲೇವಡಿ

ಮಹಾಂತೇಶ ಇರಳಿ
ಧಾರವಾಡ: ಕಾಂಗ್ರೆಸ್ ಪಕ್ಷ ಪಾಕಿಸ್ತಾನದಲ್ಲಿ ಗೆಲ್ಲಬೇಕೆ ಹೊರತು ಭಾರತ ದೇಶದಲ್ಲಿ ಅಲ್ಲ ಎಂದು ಬಿಜೆಪಿ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ, ಸಚಿವ ಸಿಟಿ ರವಿ ಹೇಳಿದ್ದಾರೆ. ಮಂಗಳವಾರ ನಗರದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಕೆಲವು ಸಂಗತಿಗಳನ್ನ ಕಾಲ ನಿರ್ಣಯಿಸುತ್ತದೆ. ಈಗ ದೇಶದಲ್ಲಿ ನಡೆಯುತ್ತಿರೋದು ಬಿಜೆಪಿಯ ಯುಗ ಎಂದರು. ಅಲ್ಲದೇ ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ತಾರೆ ಎನ್ನುವ ಜಮೀರ್ ಹೇಳಿಕೆ ವಿಚಾರವೂ ತಿರುಕನ ಕನಸಾಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯನವರ ಕೋಟಾ ಮುಗಿದಿದೆ. ಮತ್ತೆ ರಾಜ್ಯದಲ್ಲಿ ಬಿಜೆಪಿ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಇನ್ನೂ ಬೆಂಗಳೂರಿನಲ್ಲಿ ಜಮೀರ್ ತಮ್ಮ ಕಾಂಗ್ರೆಸ್ ಪಾರ್ಟಿಯವರನ್ನೇ ಗೆಲ್ಲಿಸಲು ಆಗಿಲ್ಲ. ಮೈಸೂರು, ಬಾಗಲಕೋಟೆ ಯಲ್ಲಿ ಅವರ ಪಾರ್ಟಿ ಗೆಲ್ಲಿಸಲು ಸಿದ್ದರಾಮಯ್ಯನವರಿಗೆ ಆಗಲಿಲ್ಲ. ಸಮಾಜ ಒಡೆಯೊದಕ್ಕೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಾ…? ರವಿ ಪ್ರಶ್ನೆ ಮಾಡಿದ್ರು. ಕಾಂಗ್ರೆಸ್ ನಾಯಕರಿಗೆ ದಲಿತ ಶಾಸಕನಿಗೆ ರಕ್ಷಣೆ ಕೊಡಲು ಸಾಧ್ಯವಾಗಿಲ್ಲ.

ಬೆಂಕಿ ಹಾಕಿದವರನ್ನ ಅಮಾಯಕರು ಎಂದವರು ಕಾಂಗ್ರೆಸ್ ಪಾರ್ಟಿ. ಎರಡೂವರೆ ವರ್ಷದಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಠವಾಗಲಿದೆ. ಕಾಂಗ್ರೆಸ್ ಪಕ್ಷದವರ ನೀತಿಯೇ ಅವರನ್ನ ಅಧಿಕಾರಕ್ಕೆ ಬರದಂತೆ ಮಾಡಿತ್ತದೆ ಎಂದು ಸಚಿವ ಸಿ.ಟಿ.ರವಿ ಭವಿಷ್ಯ ನುಡದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!