ಮಳೆಯಿಂದ 3 ಸಾವಿರ ಕೋಟಿ ಹಾನಿ: ಸಚಿವ ಆರ.ಅಶೋಕ

ಮಹಾಂತೇಶ ಇರಳಿ
ಬೆಳಗಾವಿ: ಮಳೆಯಿಂದ ರಾಜ್ಯದಲ್ಲಿ 3 ಸಾವಿರ ಕೋಟಿ ಅಷ್ಟು ಹಾನಿಯಾಗಿದೆ ಎಂದು ಕಂದಾಯ ಸಚಿವ ಆರ.ಅಶೋಕ ಹೇಳಿದ್ದಾರೆ.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕಲಬರುಗಿಯಲ್ಲಿ ಪ್ರವಾಸ ಮಾಡಿ ಹಾನಿಯಾದ ಕುಟುಂಬಗಳಿಗೆ ಪರಿಹಾರ ನೀಡಿ ಬಂದಿದ್ದೇನೆ. ಇಂದು ಬೆಳಗಾವಿಯಲ್ಲಿಯೂ ಸಹ ಪರಿಶೀಲನೆ ನಡೆಸಲಿದ್ದೇನೆ. ಕಾಳಜಿ ಕೇಂದ್ರದಲ್ಲಿ ಸೂಕ್ತವಾದ, ಗುಣಮಟ್ಟದ ಆಹಾರ ನೀಡಬೇಕು. ಜಾತಿಯತೆ ಮಾಡದೆ ಅವರನ್ನು ಸೂಕ್ತ ರೀತಿಯಲ್ಲಿ ನೋಡಿಕೊಳ್ಳಬೇಕು ಸೂಚನೆ ನೀಡಿದ್ದೇನೆ ಎಂದರು.
ರಾಜ್ಯದಲ್ಲಿ ಸುಮಾರು 3ಸಾವಿರ ಕೋಟಿಗೂ ಮಳೆಯಿಂದ ಹಾನಿಯಾಗಿದೆ. 500 ಜಾನುವಾರು ಮೃತಪಟ್ಟಿವೆ. 8000 ಜನರು ಕಾಳಜಿ ಕೇಂದ್ರದಲ್ಲಿ ವಾಸ ಮಾಡುತ್ತಿದ್ದಾರೆ. ಕರೋನಾ, ಪ್ರವಾಹ ಸರಕಾರಕ್ಕೆ ಸವಾಲಿನ ಪ್ರಶ್ನೆಯಾಗಿದೆ. ಇದನ್ನು ನಿಭಾಯಿಸುವ ಶಕ್ತಿ ಸರಕಾರಕ್ಕೆ ಇದೆ. ಬೆಳಗಾವಿ ಜಿಲ್ಲೆಯಲ್ಲಿ 88 ಕೋಟಿ ರುಪಾಯಿದೆ. ಕಲಬುರಗಿಯಲ್ಲಿ 20 ಕೋಟಿ ಹಾಗೂ ಯಾದಗಿರಿಯಲ್ಲಿ 16 ಕೋಟಿ ಬಾಗಲಕೋಟ 33, ಕೊಡಗು 68 ಕೋಟಿ ರುಪಾಯಿ ಜಿಲ್ಲಾಧಿಕಾರಿಗಳ ಬಳಿಯಿದೆ. ಪರಿಹಾರದ ಹಣಕ್ಕೆ ಯಾವುದೇ ರೀತಿ ಕೊರತೆ ಇಲ್ಲ ಎಂದರು. ಕೋವಿಡ್ ನಲ್ಲಿ ಅವ್ಯವಹಾರ ಮಾಡುವುದು ದೇವರಿಗೆ ಮೋಸ ಮಾಡಿದ ಹಾಗೆ ರಾಯಬಾಗ ತಹಶಿಲ್ದಾರ ಅವ್ಯವಹಾರ ಮಾಡಿದರೆ ಒಂದು ದಿನದವೂ ಕಾಯದೆ ಮುಲಾಜಿಲ್ಲದೆ ತೆಗೆದು ಹಾಕುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವ ಆರ.ಅಶೋಕ ಹೇಳಿದ್ದಾರೆ. ಈ ಸಂದರ್ಭದಲ್ಲಿ ಶಾಸಕರಾದ ಅಭಯ ಪಾಟೀಲ,ಅನಿಲ್ ಬೆನಕೆ ಇದ್ದರು.