ದುರ್ಗೆಗೆ ಹರಕೆ ಹೊತ್ತಿದ್ದು ಯಾಕೇ ಶಾಸಕಿ ಅಂಜಲಿ ನಿಂಬಾಳಕರ ಗೋತ್ತಾ…!

ಮಹಾಂತೇಶ ಇರಳಿ
ಬೆಳಗಾವಿ: ದಸರಾ, ನವರಾತ್ರಿ ಹಬ್ಬದ ಪ್ರಯುಕ್ತ ಜಗನ್ಮಾತೆ ದುರ್ಗೆಗೆ ಹರಕೆ ಹೊತ್ತುಕೊಂಡಿದ್ದಾರೆ ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ಹೇಮಂತ್ ನಿಂಬಾಳಕರ.
ಇಂದು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರನ್ನ ಸ್ವಾಗತಿಸಲು ಬಂದಿದ್ದಾಗ ಶಾಸಕಿ ಅಂಜಲಿ ನಿಂಬಾಳಕರ್ ಬರಿಗಾಲಿನಲ್ಲಿ ಓಡಾಡುತ್ತಿದ್ದರು. ಈ ಬಗ್ಗೆ ಮಾಧ್ಯದವರ ಪ್ರಶ್ನೆ ಮಾಡಿದಾಗ ಶಾಸಕಿ ಅಂಜಲಿ ನಿಂಬಾಳಕರ್ ಅವರು ನವರಾತ್ರಿ ಪ್ರಯುಕ್ತ ಪಾದರಕ್ಷೆ ಇಲ್ಲದೇ ಬರಿಗಾಲಿನಲ್ಲಿದ್ದೇನೆ. 9 ದಿನಗಳ ಕಾಲ ಕಠೋರ ವೃತವನ್ನ ಮಾಡುತ್ತಿರುವೆ. ನನ್ನ ಮನದಲ್ಲಿ ಏನೇನೋ ವಿಚಾರಗಳಿವೆ.
ಜೀವನದಲ್ಲಿ ಇದೇ ಮೊದಲ ಭಾರೀ ಜಗನ್ಮಾತೆ ದುರ್ಗೆಗೆ ಹರಕೆ ಹೊತ್ತುಕೊಂಡಿದ್ದೇನೆ. ಹಾಗಾಗಿ ನವರಾತ್ರಿಯ ಹಬ್ಬದ 9 ದಿನಗಳ ಕಾಲ ಬರಿಗಾಲಿನಲ್ಲಿ ಇರುತ್ತೇನೆ. ಅಲ್ಲದೇ, ನವರಾತ್ರಿಯ 9 ದಿನಗಳ ಕಾಲವೂ ಊಟ ಕೂಡ ಮಾಡೋದಿಲ್ಲ. ಬರೀ ಹಣ್ಣು ಹಂಪಲುಗಳನ್ನ ಮಾತ್ರ ಸೇವಿಸುತ್ತೇನೆ.
ಈ ಹರಕೆ ಏನು ಸ್ಪೆಷಲ್ ಆಗಿ ಇಲ್ಲ. ಕಳೆದ ವರ್ಷ ತಿರುಪತಿಗೆ ನಡೆದುಕೊಂಡು ಹೋಗಿದ್ದೇವು. ಈ ವರ್ಷ ನಮ್ಮ ಕ್ಷೇತ್ರದ ಕೆಲ ವಿಷಯಗಳಿವೆ. ಕೊನೆ ಘಳಿಗೆಯಲ್ಲಿ ವೈದ್ಯರು ಕೂಡ ಹೇಳ್ತಾರೆ ದೇವರಿದ್ದಾನೆ ಅಂತ ಹೀಗಾಗಿ ದೇವರ ಮೋರೆ ಹೋಗಿದ್ದೇನೆ ಎಂದು ಅಂಜಲಿ ನಿಂಬಾಳಕರ ಹೇಳಿದ್ದಾರೆ.
ಇನ್ನು ದೇವರ ಮೇಲೆ ಭಾರ ಹಾಕಿದ್ದೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಇಡೀ ಜಗತ್ತೆ ದೇವರ ಮೇಲೆ ಭಾರ ಹಾಕಿ ಬದುಕುತ್ತಿದ್ದೇವೆ. ಹೀಗಿರುವಾಗ ಅದರಲ್ಲಿ ನಂದೇನು ಸಪರೇಟ್ ಭಾರ ಇಲ್ಲ. ನನ್ನ ಪ್ರಾರ್ಥನೆ ದೇವರಿಗೆ ಸಲ್ಲಿಸಿದ್ದೇನೆ ಎಂದು ಶಾಸಕಿ ಅಂಜಲಿ ನಿಂಬಾಳಕರ ಹೇಳಿದರು.