ಡಿ.ಕೆ.ಶಿವಕುಮಾರಗೆ ಸೋಲುವ ಭಯ:ಸಚಿವ ಆರ.ಅಶೋಕ ವ್ಯಂಗ್ಯ

ಮಹಾಂತೇಶ ಇರಳಿ
ಬೆಳಗಾವಿ: ಉಪ ಚುನಾವಣೆಯಲ್ಲಿ ಸೋಲುವ ಭಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಕಾಡುತ್ತಿದೆ ಎಂದು ಕಂದಾಯ ಸಚಿವ ಆರ.ಅಶೋಕ ಲೇವಡಿ ಮಾಡಿದ್ದಾರೆ.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು,
ಕಾಂಗ್ರೆಸಗೆ ಕಾನೂನನ್ನು ಉಲ್ಲಂಘನೆ ಮಾಡುವುದೇ ದೊಡ್ಡ ಸಾಧನೆ ಆಗಿದೆ. ಆರ್. ಆರ್. ನಗರದ ಚುನಾವಣೆಯ ಉಸ್ತುವಾರಿ ನಾನೇ ಇದ್ದೇನೆ. ಅಲ್ಲಿ 9 ವಾಡ್೯ನ ಕಾಂಗ್ರೆಸ್ ನರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಸ್ವತಃ ಕಾಂಗ್ರೆಸ್ ಅಧ್ಯಕ್ಷರೇ ಪಿಲ್ಡ್ ಗೆ ಇಳಿದರೂ ಯಾರು ಸಿಗುತ್ತಿಲ್ಲ. ಕಾಂಗ್ರೆಸ್ ಮೂರನೇ ಪ್ಲೇಸ್ ಗೆ ಹೋಗುವುದು ಖಚಿತವಾಗಿದೆ. ಡಿ.ಕೆ.ಶಿವಕುಮಾರ ಮತ್ತು ವಿರೋಧ ಪಕ್ಷದವರು ಗೆಲವು ನಮದ್ದೆ ಎಂದು ಹೇಳುತ್ತಿದ್ದಾರೆ.
ಚುನಾವಣೆ ಘೋಷಣೆಯಾದ ಮೇಲೆ ಚುನಾವಣಾ ಆಯೋಗದ ಅಧೀನದಲ್ಲಿ ಬರುತ್ತದೆ. ಸೋಲುವ ಭಯದಲ್ಲಿ ಸರಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಗೆ ಕಾಮನ್ ಸೆನ್ಸ್ ಇಲ್ವಾ.. ಯಾರು ಪ್ರಕರಣ ದಾಖಲಿಸುತ್ತಾರೆ ಎಂದು ಕಾಂಗ್ರೆಸ್ ನವರಿಗೆ ತಿಳಿಯುವುದಿಲ್ಲ ಎಂದರೆ ಕಿಡಿಕಾರಿದ್ದಾರೆ.