ಜಿಲ್ಲಾ
ಕಂದಾಯ ಸಚಿವರಿಗೆ ಬೆಳೆ ಹಾನಿ ಪರಿಹಾರಕ್ಕೆ ಮಾರುತಿ ಅಷ್ಟಗಿ ಮನವಿ

ಶ್ರೀನಿವಾಸ ಪಟ್ಟಣ
ಬೆಳಗಾವಿ: ಅಬ್ಬರದ ಮಳೆಗೆ ಬೆಳಗಾವಿ ಜಿಲ್ಲೆಯ ಯಮಕನಮರಡಿ ಮತಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಹೀಗೆ ಬೆಳೆ ಹಾನಿಯಾದ ಪ್ರದೇಶಕ್ಕೆ ಕಂದಾಯ ಸಚಿವ ಆರ್. ಅಶೋಕ ಭೇಟಿ ನೀಡಿದ್ರು.
ಕ್ಷೇತ್ರದ ಬಿಜೆಪಿ ಮುಖಂಡ ಮಾರುತಿ ಅಷ್ಟಗಿ ಅವರಿಂದ ಯಮಕನಮರಡಿ ಮಕ್ಷೇತ್ರದಲ್ಲಿ ಮಳೆ ಅವಾಂತರದ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಮಾಹಿತಿ ಪಡೆದುಕೊಂಡರು.
ಕಂದಾಯ ಸಚಿವ ಆರ್.ಅಶೋಕ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ರಾಜಸಭಾ ಸದಸ್ಯ ಈರಣ್ಣ ಕಡಾಡಿ ಹಾಗೂ ಜಿಲ್ಲಾಧಿಕಾರಿಗಳ ಒಳಗೊಂಡ ತಂಡದೊಂದಿಗೆ ಭೇಟಿ ನೀಡಿದ್ರು. ಅದರಲ್ಲೂ ಯಮಕನಮರಡಿ ಮತಕ್ಷೇತ್ರದ ಹತ್ತರಗಿ, ಜಿನರಾಳ ಗ್ರಾಮದಲ್ಲಿ ಹಾಳಾದ ಟೊಮೆಟೊ ಮತ್ತು ಪ್ಲಾವರ್ ಬೆಳೆ ಹಾನಿಯನ್ನ ಖುದ್ದು ಸಚಿವರ ತಂಡ ಪರಿಶೀಲನೆ ಮಾಡಿತು.
ಈ ಸಂದರ್ಭದಲ್ಲಿ ಮಳೆಯಿಂದ ತತ್ತರಿಸಿದ ರೈತರಿಗೆ ಮತ್ತು ಸಂತ್ರಸ್ತರಿಗೆ ಸರ್ಕಾರದಿಂದ ಸೂಕ್ತ ಪರಿಹಾರವನ್ನ ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಮಾರುತಿ ಅಷ್ಟಗಿ ಮನವಿ ಮಾಡಿಕೊಂಡರು.