ಎಲ್ಲರನ್ನೂ ಬಿಟ್ಟು ಡಾಕ್ಟರ್ ಮದುವೆಯಾಗಿದ್ದು ಮಾಧುರಿ ದೀಕ್ಷಿತ್ ಯಾಕೇ ಗೊತ್ತಾ…!!!

ಶ್ರೀನಿವಾಸ ಪಟ್ಟಣ
ನ್ಯೂಸ್1ಕರ್ನಾಟಕ: ಮಾದಕ ಚಲುವೆ, ನಟಿ ಮಾಧುರಿ ದೀಕ್ಷಿತ್ ಇಂದಿಗೂ ಭಾರತೀಯ ಚಿತ್ರರಂಗದ ಸ್ಟಾರ್ ನಾಯಕಿ. ಇವತ್ತಿಗೂ ಮಾಧುರಿ ದೀಕ್ಷಿತ್ ತಮ್ಮ ಚಾರ್ಮ್ ಉಳಿಸಿಕೊಂಡಿದ್ದಾರೆ. ಈ ಬೇಡಗಿ ಈಗ 21ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಇದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿವಾಹ ವಾರ್ಷಿಕೋತ್ಸವದ ವಿಚಾರವನ್ನ ರೀವಿಲ್ ಮಾಡಿದ್ದಾರೆ.

ಅಲ್ಲದೇ ತಮ್ಮ ಬಾಳ ಸಂಗಾತಿ ಡ್ರೀಮ್ ಹೀರೋ ಬಗೆಗಿನ ಪ್ರೀತಿಯನ್ನ ಅಕ್ಷರಗಳ ಮೂಲಕ ವ್ಯಕ್ತಪಡಿಸಿದ್ದಾರೆ.
ಇನ್ನು ಬಹಳಷ್ಟ ಜನರಿಗೆ ಮಾಧುರಿ ದೀಕ್ಷಿತ್ ಸ್ಟಾರ್ ನಟಿ ಆಗಿದ್ದಾಗ, ಸಾಲು ಸಾಲು ಚಿತ್ರಗಳು ಕೈಯಲ್ಲಿ ಇದ್ದಾಗ ಅನೇಕ ನಟರ ಜೊತೆಗೆ ಹೆಸರು ತಳುಕು ಹಾಕಿಕೊಂಡಿದ್ದವು.

ಆದ್ರೆ ಸ್ಟಾರ್ ನಟರನ್ನ ಬಿಟ್ಟು ಮಾಧುರಿ 1999ರಲ್ಲಿ ಡಾಕ್ಟರನನ್ನ ಜೀವನದ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡರು. ಅಲ್ಲದೇ ಪಕ್ಕಾ ತಂದೆ-ತಾಯಿ ಹುಡುಕಿದ ಡಾಕ್ಟರ್ ಶ್ರೀರಾಮ್ ನೇನೆಯೊಂದಿಗೆ ಅರೇಂಜ್ ಮ್ಯಾರೇಜ್ ಆದ್ರು. ಮದುವೆ ಬಳಿಕ ಮಾಧುರಿ ಅಮೆರಿಕಾದಲ್ಲಿ ಸೆಟಲ್ ಆಗಿ ಬಿಟ್ಟರು. ಮಾಧುರಿ ದೀಕ್ಷಿತ್ ಅಮೆರಿಕದಲ್ಲಿ ಗೃಹಿಣಿಯಾಗಿ ನೆಲೆಸಿದ ಬಳಿಕ 2011ರಲ್ಲಿ ಮತ್ತೆ ಮರಳಿ ಮುಂಬೈಗೆ ಬಂದರು.

ಗಂಡ ಜೊತೆಗೆ ಸೇರಿ ಪ್ರೊಡಕ್ಷನ್ ಕಂಪನಿ ಆರಂಭಿಸಿದರು. 2003ರಲ್ಲಿ ಮಾಧುರಿಗೆ ಆರಿನ್ ಎಂಬ ಗಂಡು ಮಗುವಿನ ಜನ್ಮವಾಯ್ತು. 2005ರಲ್ಲಿ ಇನ್ನೊಂದು ಮಗುವಿಗೆ ಜನ್ಮ ನೀಡಿದ್ರೆ. ಆ ಮಗುವಿಗೆ ರಯಾನ್ ಅಂತಾ ನಾಮಕರಣ ಮಾಡಿದ್ರು. ಈಗ ಮಾಧುರಿ ಧೀಕ್ಷಿತ್ ಸಿನಿಮಾ ಮತ್ತು ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ.