ಬೆಂಗಳೂರನಲ್ಲಿ ಬಿಟ್ಟಿದ್ದು.. ಬೆಳಗಾವಿಯಲ್ಲಿ ಸಿಕ್ಕಿತು ಸಿದ್ದರಾಮಯ್ಯ ನವರಿಗೆ…!!!

ಶ್ರೀನಿವಾಸ ಪಟ್ಟಣ
ಬೆಳಗಾವಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಒಂದುವರೆ ಗಂಟೆಗಳ ಕಾಲ ಪರದಾಡ್ರಿದ್ರು. ಸಿದ್ದರಾಮಯ್ಯನವರು ಬೆಂಗಳೂರಿನಲ್ಲಿ ಬಿಟ್ಟು ಬಂದ ವಸ್ತುವಿಗಾಗಿ ಬೆಳಗಾವಿ ವಿಮಾನದಲ್ಲಿ ಗಂಟೆಗಟ್ಟಲೆ ಕಾಯ್ದು ಕುಳಿತು ಸಿದ್ದರಾಮಯ್ಯ.
ಸಿದ್ದರಾಮಯ್ಯ ಬಿಟ್ಟು ಬಂದ ವಸ್ತುವಿಗಾಗಿ ತಲೆಕೆಡಿಸಿಕೊಂಡ ಕಾಂಗ್ರೆಸ್ ಮುಖಂಡ ಅಶೋಕ ಪಟ್ಟಣ.
ಯಸ್…ಇನ್ಸುಲಿನ್ ಮರೆತು ಬಂದ ಮಾಜಿ ಸಿಎಂ ಸಿದ್ದರಾಮಯ್ಯನವರು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಪರದಾಡಿದ್ರು. ಇನ್ಸುಲಿನ್ ಗಾಗಿ ಬೆಳಗಾವಿ ಸಾಂಬ್ರಾ ಏರ್ಪೋರ್ಟ್ ನಲ್ಲಿ ಕಾದು ಕುಳಿತರು. ಸಿದ್ದರಾಮಯ್ಯ ರೆಗ್ಯೂಲರ್ ಆಗಿ ತೆಗೆದುಕೊಳ್ಳುವ ಇನ್ಸುಲಿನ್ ಇಂಜೆಕ್ಷನ್ ತರಿಸಲು ಮಾಜಿ ಶಾಸಕ ಅಶೋಕ ಪಟ್ಟಣ ಪ್ರಯತ್ನ ಮಾಡಿದ್ರು. ಬೆಳಗಾವಿಯಿಂದ ಬದಾಮಿ ಗೆ ತೆರಳಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಇನ್ಸುಲಿನ್ ತೆಗೆದುಕೊಳ್ಳುವುದನ್ನ ಮರೆತಿದ್ದಾರೆ. ಅವರು ಚೆನ್ನಾಗಿದ್ದಾರೆ, ಹೊರಗಡೆ ಬಂದಾಗ ಬೇಕಾದ್ರೆ ಕುಸ್ತಿ ಹಿಡಿರಿ, ಅವರು ಮೈಸೂರು ಪೈಲ್ವಾನ್ ಎಂದು ಮಾಜಿ ಶಾಸಕ ಅಶೋಕ ಪಟ್ಟಣ ತಮಾಷೆ ಮಾಡಿದ್ರು. ಅನಂತರ ಬೆಳಗಾವಿಯಿಂದ ಸಾಂಬ್ರಾ ಏರ್ಪೋರ್ಟ್ಗೆ ಇನ್ಸುಲಿನ್ ತಗೆದುಕೊಂಡು ಬಂದ್ರೆ. ಅವರದಲ್ಲಿ ಅಶೋಕ ಪಟ್ಟಣ ಚಾಲಕ ಸೂಜಿಯನ್ನೆ ಮರೆತು ಬಂದ್ರು. ಇದರಿಂದ ಸಿದ್ದರಾಮಯ್ಯ ಮತ್ತೆ ಸೂಜಿಗಾಗಿ ಕಾಯ್ದುವಂತೆ. ಅಂತೂ ಇಂತೂ ಎದ್ದನೋ ಬಿದ್ದನೋ ಅಂತಾ ಕಾಂಗ್ರೆಸ್ ಮುಖಂಡರು ಇನ್ಸುಲಿನ್ ಮತ್ತು ಸೂಜಿಯ್ ವ್ಯವಸ್ಥೆ ಮಾಡಿದ್ರು.