ಏನು ಆಗಲ್ಲ ಎಂಬ ಭ್ರಮೆಯಲ್ಲಿದ್ದರು:ಸಿಎಂ ಯಡಿಯೂರಪ್ಪ

ಬೆಳಗಾವಿ: ಏನು ಆಗಲ್ಲ ಎಂಬ ಭ್ರಮೆಯಲ್ಲಿ ಸುರೇಶ್ ಅಂಗಡಿ ಇದ್ದರು ಎಂದು ಮುಖ್ಯಮಂತ್ರಿ ಬಿ.ಎಸ.ಯಡಿಯೂರಪ್ಪ ಹೇಳಿದ್ದಾರೆ.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು,
ಸುರೇಶ ಅಂಗಡಿ ನನ್ನ ಆತ್ಮೀಯ ಸ್ನೇಹಿತರು. ಅವರು ಇಲ್ಲ ಅನ್ನೋದು ಕಲ್ಪನೆ ಮಾಡಲು ಸಾಧ್ಯವಿಲ್ಲ. ನಾಲ್ಕು ಭಾರಿ ಸಂಸದರಾಗಿ, ರೈಲ್ವೆ ಸಚಿವರಾಗಿ ಅನೇಕ ಕೆಲಸ ಮಾಡಿದ್ದಾರೆ. ಕೊರೊನಾ ದಾಳಿಗೆ ಸಿಲುಕಿ ಮೃತಟ್ಟಿದ್ದಾರೆ. ಜ್ವರ ಬಂದ್ರು ನಿರ್ಲಕ್ಷ್ಯ ಮಾಡಿ ದೆಹಲಿಗೆ ಹೋಗಿದ್ರು.
ದೆಹಲಿಗೆ ಹೋಗಿ ಎರಡು ದಿನ ತಡ ಮಾಡಿದ್ರು. ಏನು ಆಗಿಲ್ಲ ಅನ್ನೋ ಭ್ರಯೆಯಲ್ಲಿ ಇದ್ದರು. ಹೀಗಾಗಿ ಅವರ ಬಂಧುಗಳನ್ನ ಅಗಲಿದ್ದರು. ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳುತ್ತೇನೆ. ದೆಹಲಿ ದ್ವಾರಕ ಸ್ಮಶಾನ ಅಂತ್ಯಕ್ರಿಯೆ ನಡೆದಿದೆ. ಅಲ್ಲಿ ಸ್ಮಾರಕ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು. ಈಗಾಗಲೇ ಅಲ್ಲಿನ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆನೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಆ ಬಳಿಕ ಸಿಎಂ ಯಡಿಯೂರಪ್ಪ ಗೃಹ ಸಚಿವ ಬಸವರಾಜ ಬೋಮ್ಮಾಯಿ, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಶಾಸಕರಾದ ಅನಿಲ್ ಬೆನಕೆ, ಅಭಯ ಪಾಟೀಲ ಸುರೇಶ್ ಅಂಗಡಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ರು. ಸುರೇಶ್ ಅಂಗಡಿ ತಾಯಿ, ಪತ್ನಿ ಮಂಗಲ, ಮಕ್ಕಳಾದ ಸ್ಫೂರ್ತಿ ಪಾಟೀಲ್, ಶ್ರದ್ಧಾ ಶೆಟ್ಟರ್ ಅವರಿಗೆ ಸಿಎಂ ಯಡಿಯೂರಪ್ಪ ಧೈರ್ಯ ತುಂಬಿದರು.